More

    ಏಳು ಗಂಟೆ ವಿದ್ಯುತ್ ಪೂರೈಸಿ

    ಸಾಗರ: ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ತಾಲೂಕು ರೈತ ಸಂಘ (ಡಾ.ಎಚ್.ಗಣಪತಿಯಪ್ಪ ಸ್ಥಾಪಿತ) ಗೌತಮಪುರ ಘಟಕದಿಂದ ಆನಂದಪುರ ಮೆಸ್ಕಾಂ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
    ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಎನ್.ದಾಸನ್ ಮಾತನಾಡಿ, ರಾಜ್ಯ ಸರ್ಕಾರ ಎಲ್ಲ ಫೀಡರ್‌ಗಳಿಗೆ ಪ್ರತಿದಿನ 7 ಗಂಟೆ ವಿದ್ಯುತ್ ನೀಡಬೇಕು ಎನ್ನುವ ನಿಯಮವಿದ್ದರೂ ಗೌತಮಪುರ, ಚನ್ನಶೆಟ್ಟಿಕೊಪ್ಪ, ಜಂಬೂರುಮನೆ ಇತರ ಗ್ರಾಮಗಳಿಗೆ ಕೇವಲ ನಾಲ್ಕರಿಂದ ಐದು ಗಂಟೆ ವಿದ್ಯುತ್ ನೀಡಲಾಗುತ್ತಿದೆ. ವಿದ್ಯುತ್ ನೀಡುವ ನಡುವೆ ಲೈನ್ ದುರಸ್ತಿ ಹೆಸರಿನಲ್ಲಿ ಲೋಡ್‌ಶೆಡ್ಡಿಂಗ್ ಮಾಡುತ್ತಿರುವ ಕ್ರಮ ಖಂಡನೀಯ ಎಂದರು.
    ಬೇಸಿಗೆ ಸಮೀಪಿಸುತ್ತಿರುವುದರಿಂದ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡಿದರೆ ರೈತರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಹಲವು ಬಾರಿ 7 ಗಂಟೆ ವಿದ್ಯುತ್ ಪೂರೈಕೆ ಮಾಡುವಂತೆ ಮೆಸ್ಕಾಂಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಗೌತಮಪುರ, ಚೆನ್ನಶೆಟ್ಟಿಕೊಪ್ಪ, ಜಂಬೂರುಮನೆ ಇತರ ಗ್ರಾಮಗಳಿಗೆ 7 ಗಂಟೆ ತ್ರಿೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
    ಪ್ರತಿಭಟನೆಯಲ್ಲಿ ಪ್ರಕಾಶ್ ಹುಗಳಮಕ್ಕಿ, ಸಂತೋಷ್, ವಾಸು ಹಿಡದುಂಬಿ, ಸುರೇಶ ಬೆಳಂದೂರು, ಟಾಕಪ್ಪ, ಮಂಜಪ್ಪ, ಹೊನ್ನಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts