More

    ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಸಿಂಚನ

    ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚುತ್ತಿರುವ ನಡುವೆಯೂ ಮುಂದಿನ 5 ದಿನ ಗುಡುಗು ಮಿಂಚು ಸಹಿತ ಮಳೆ ಸಿಂಚನವಾಗಲಿದೆ. ಶುಕ್ರವಾರ ರಾಜ್ಯದ ಕೆಲವೆಡೆ ಮೋಡ ಕವಿದ ವಾತಾವರಣ ಜತೆಗೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಿದೆ.

    ಹಾಸನ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಬೆಂಗಳೂರು, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಮತ್ತು ವಿಜಯನಗರದಲ್ಲಿ ಏ.22ರಿಂದ ಏ.26ರವರೆಗೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿಯಲ್ಲಿ ಮುಂದಿನ 4 ದಿನ ಮಳೆ ಬೀಳಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಏ.22 ಮತ್ತು ಏ.23ರಂದು ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಇದನ್ನೂ ಓದಿ: ಪಿಯುಸಿ ಮುಗೀತು ಮುಂದೇನು? ಇಲ್ಲಿದೆ ನೂರಾರು ಅವಕಾಶ, ಆಯ್ಕೆ ನಿಮ್ಮದು

    ಗರಿಷ್ಠ ತಾಪಮಾನದಲ್ಲಿ ಕಲಬುರಗಿಯಲ್ಲಿ 41.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ, ರಾಯಚೂರು 40.2, ವಿಜಯಪುರ 39.4 ಮತ್ತು ಬಳ್ಳಾರಿ 39.1 ಉಷ್ಣಾಂಶ ವರದಿಯಾಗಿದೆ.

    ಹೋಟೆಲ್​ ರೂಮಲ್ಲಿ ಸಿಕ್ಕಿಬಿದ್ದ ನಟಿ ಆರತಿಗೆ ಬಾಲಿವುಡ್ ಲಿಂಕ್​ ಹಿಂದಿರುವ ಕರಾಳತೆ ಬಯಲು

    ಸೆಲೆಬ್ರಿಟಿಗಳಿಗೆ ಶಾಕ್​ ನೀಡಿದ ಟ್ವಿಟರ್; ರಾತ್ರೋರಾತ್ರಿ ಕಾಣೆಯಾದ ಬ್ಲೂ ಟಿಕ್​

    ಬ್ರಿಟನ್ ಉಪ ಪ್ರಧಾನಿ ‘ಡೊಮಿನಿಕ್ ರಾಬ್’ ರಾಜೀನಾಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts