More

    ಸ್ಮಾರ್ಟ್‌ಸಿಟಿ ಬಣ್ಣ ಅನಾವರಣಗೊಳಿಸಿದ ಮಳೆರಾಯ !

    ತುಮಕೂರು: ಸತತವಾಗಿ ಸುರಿಯುತ್ತಿರುವ ಮಳೆ ಸ್ಮಾರ್ಟ್‌ಸಿಟಿ ಬಣ್ಣವನ್ನು ಅನಾವರಣಗೊಳಿಸಿದೆ. ಮಳೆ ನೀರು, ಯುಜಿಡಿ ನೀರಿನ ಪ್ರವಾಹದಿಂದ ರಸ್ತೆಗಳು ಅಕ್ಷರಷಃ ಕೆರೆಗಳಾಗಿ ಮಾರ್ಪಟ್ಟಿವೆ.

    ಕಳೆದ 4-5 ದಿನಗಳಿಂದ ಪ್ರತಿದಿನ ಸಂಜೆ ಆರಂಭವಾಗುವ ಮಳೆ ರಾತ್ರಿ ಇಡೀ ಸುರಿದು ಜನಜೀವನ ಅಸ್ತವ್ಯಸ್ತಗೊಳಿಸಿದೆ. ರೈಲ್ವೆ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಗಂಟೆಗಟ್ಟೆಲೆ ವಾಹನ ಸಂಚಾರಕ್ಕೆ ಅಡಚಣೆ ಆಗಿ ವಾಹನ ಸವಾರರು ಮನೆಗೆ ತೆರಳುವ ವೇಳೆ ಪರದಾಡುವ ದೃಶ್ಯ ಸಾಮಾನ್ಯವಾಗಿಬಿಟ್ಟಿದೆ.

    ತಗ್ಗುಪ್ರದೇಶಗಳಿಗೆ ಮಳೆ ನೀರು: ಉಪ್ಪಾರಹಳ್ಳಿ, ಅಂತರಸನಹಳ್ಳಿ, ದಿಬ್ಬೂರು, ಸದಾಶಿವನಗರ, ಅಮಾನಿಕೆರೆ ಕೋಡಿಹಳ್ಳ, ಶೆಟ್ಟಿಹಳ್ಳಿ, ಶಾಂತಿನಗರಗಳಲ್ಲಿ ತಗ್ಗುಪ್ರದೇಶಗಳಲ್ಲಿನ ಜನರ ಜೀವನ ಹೇಳತೀರದು. ರಾಜಗಾಲುವೆಗಳು, ಮಳೆ ನೀರು ಹರಿಯುವ ಚರಂಡಿಗಳು ಉಕ್ಕಿ ಅದರಲ್ಲಿನ ತ್ಯಾಜ್ಯ ಮನೆಗಳಿಗೆ ನುಗ್ಗಿದ್ದು ಜನರು ರಾತ್ರಿವೇಳೆ ವನವಾಸ ಮಾಡುವಂತಾಗಿದೆ.

    ಇನ್ನೂ ರೈಲ್ವೆ ಅಂಡರ್ ಪಾಸ್‌ಗಳು ಮತ್ತು ಇತರೆ ಸ್ಥಳಗಳಲ್ಲಿ ಮಳೆಯಿಂದಾಗಿ ಉಂಟಾದ ಪ್ರವಾಹ, ಹಾನಿಗಳಿಂದ ತೀವ್ರ ತೊಂದರೆ ಉಂಟಾಗಿದೆ. ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಜೆಸಿಬಿ, ಜಟ್ಟಿಂಗ್ ಮತ್ತು ಸಕ್ಕಿಂಗ್ ಯತ್ರೋಪಕರಣಗಳಿಂದ ರಾಜುಗಾಲುವೆ ಸ್ವಚ್ಛತೆ, ಯುಜಿಡಿ ಸಮಸ್ಯೆ ಪರಿಹರಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ತಿಳಿಸಿದ್ದಾರೆ.

    ಮಳೆ ಹಾನಿ ಸಹಾಯವಾಣಿ
    ಮುಂದಿನ ದಿನಗಳಲ್ಲಿ ಮಳೆಯಿಂದಾಗಿ ಯಾವುದೇ ತೊಂದರೆಯುಂಟಾದಲ್ಲಿ ಮಹಾನಗರ ಪಾಲಿಕೆಯ ಕಂಟ್ರೋಲ್ ರೂಮ್ ಮೊ: 9449872599ಗೆ ಕರೆ ಮಾಡಿ ದೂರು ದಾಖಲಿಸುವಂತೆ ಆಯುಕ್ತೆ ಬಿ.ವಿ.ಅಶ್ವಿಜ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts