More

    ದೇವದುರ್ಗದಲ್ಲಿ ಜಿಟಿಜಿಟಿ ಮಳೆ

    ದೇವದುರ್ಗ: ಪಟ್ಟಣ ಸೇರಿ ತಾಲೂಕಿನಲ್ಲಿ ಮಂಗಳವಾರ ಹಾಗೂ ಬುಧವಾರ ದಿನವಿಡೀ ಜಿಟಿ ಜಿಟಿ ಮಳೆ ಸುರಿಯಿತು. ತಂಪಾದ ಗಾಳಿ ಬೀಸುತ್ತಿದ್ದು ಜನರಿಗೆ ಮಲೆನಾಡಿನ ಅನುಭವ ನೀಡಿದೆ.

    ಕೆಸರು ಗದ್ದೆಯಂತಾದ ರಸ್ತೆಗಳು

    ಎರಡು ದಿನಗಳಿಂದ ಸೂರ್ಯನ ದರ್ಶನವಿಲ್ಲ. ಮಂಗಳವಾರ ರಾತ್ರಿಯಿಡಿ ಜಿಟಿಜಿಟಿ ಮಳೆ ಸುರಿದ್ದರಿಂದ ಪಟ್ಟಣದ ಬಹುತೇಕ ಪ್ರದೇಶದ ರಸ್ತೆಯಲ್ಲಿ ಕೊಳಚೆ ನೀರು ಹರಿದು ಪಾದಚಾರಿಗಳ ಓಡಾಟಕ್ಕೆ ಸಮಸ್ಯೆ ಉಂಟಾಯಿತು. ಇಲ್ಲಿನ ಬಸ್ ನಿಲ್ದಾಣ, ಮುಖ್ಯರಸ್ತೆ, ಮಹಾತ್ಮಗಾಂಧಿ ವೃತ್ತ, ಬಸವೇಶ್ವರ ವೃತ್ತ ಸೇರಿ ಮಣ್ಣಿನ ರಸ್ತೆ ಕೆಸರು ಮಯವಾಗಿದ್ದವು.

    ಇದನ್ನೂ ಓದಿ: ಮಲೆನಾಡಿನಲ್ಲಿ ಕೊಂಚ ಬಿರುಸು ಪಡೆದ ಮುಂಗಾರು ಮಳೆ


    ಪಟ್ಟಣ, ಜಾಲಹಳ್ಳಿ, ಗಬ್ಬೂರು, ಮಸರಕಲ್, ಗಾಣಧಾಳ ಸೇರಿ ವಿವಿಧೆಡೆ ದಿನವಿಡಿ ತುಂತುರು ಮಳೆ ಸುರಿಯಿತು. ಬಿತ್ತನೆ ಮಾಡಿದ ತೊಗರಿ, ಹತ್ತಿ, ಸಜ್ಜೆ, ಸೂರ್ಯಕಾಂತಿ ಮಳೆಯಿಂದ ಜೀವಕಳೆ ಬಂದಂತಾಗಿದೆ. ರೋಗದ ಭೀತಿ: ಎರಡ್ಮೂರು ದಿನಗಳಿಂದ ಮೋಡ ಮುಸುಕಿದ ವಾತಾವರಣ ಹಾಗೂ ಸುಳಿಗಾಳಿ ಬೀಸುತ್ತಿರುವುದು ಜನರಲ್ಲಿ ರೋಗದ ಭೀತಿ ಆವರಿಸಿದೆ. ಸುಳಿ ಗಾಳಿ ಚಳಿಯ ವಾತಾವರಣ ಉಂಟಾಗಿದ್ದು ಹಲವರಲ್ಲಿ ನೆಗಡಿ ಕೆಮ್ಮ ಆವರಿಸಿದೆ. ಮಕ್ಕಳಲ್ಲಿ ನೆಗದಿ, ಜ್ವರ, ಕೆಮ್ಮು ಸೇರಿ ಜ್ವರ ಕಾಣಿಸಿಕೊಳ್ಳುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts