More

    ಬೆಳೆ ನಷ್ಟದ ಭೀತಿಯಲ್ಲಿ ಕಾಫಿ ಬೆಳೆಗಾರರು

    ಬಣಕಲ್: ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಕೆಲ ಕಾಫಿ ತೋಟಗಳಲ್ಲಿ ಕಾಫಿ ಹೂವು ಅರಳಿದ್ದು ಬೆಳೆಗಾರರು ಆತಂಕಗೊಂಡಿದ್ದಾರೆ.

    ಈಗ ಕಾಫಿ ಕೊಯ್ಲಿನ ಸಮಯವಾದ್ದರಿಂದ ಕಾಫಿ ಗಿಡಗಳಲ್ಲಿ ಹಣ್ಣಾಗಿವೆ. ಬೆಳೆಗಾರರು ಕಾಫಿ ಕೊಯ್ಲಿನಲ್ಲಿ ತೊಡಗಿದ್ದಾರೆ. ಆದರೆ ಅಕಾಲಿಕ ಮಳೆಗೆ ಕಾಫಿ ಹೂ ಅರಳಿರುವುದರಿಂದ ಕೊಯ್ಲಿನ ವೇಳೆ ಹೂ ಉದುರಿಹೋಗುತ್ತಿದೆ. ಇದರಿಂದ ಮುಂದಿನ ವರ್ಷದ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

    ಈ ಬಾರಿ ಮಳೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಕಾಫಿಗೆ ಹಾನಿಯಾಗಿದ್ದು, ಕಾಫಿ ಫಸಲು ಕೂಡ ಕಡಿಮೆ ಇದೆ. ಈಗಾಗಲೇ ಕಡಿಮೆ ಫಸಲಿನ ಆತಂಕದಲ್ಲಿರುವ ಕಾಫಿ ಬೆಳೆಗಾರರಿಗೆ ಅಕಾಲಿಕ ಮಳೆಯಿಂದ ಹೂ ಅರಳಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಕಾಫಿ ಕೊಯ್ಲು ಪೂರ್ಣಗೊಂಡಿಲ್ಲ. ಕಾರ್ವಿುಕರ ಕೊರತೆಯೂ ಇದೆ. ಅಕಾಲಿಕ ಮಳೆಯಿಂದ ಗಿಡಗಳಲ್ಲಿ ಹೂವು ಅರಳಿದ್ದರಿಂದ ಕೊಯ್ಲಿಗೆ ಸಮಸ್ಯೆಯಾಗಿದೆ. ಮುಂದಿನ ಫಸಲಿನ ಮೇಲೂ ಇದು ಪರಿಣಾಮ ಬೀರಲಿದೆ ಎನ್ನುತ್ತಾರೆ ಕಾಫಿ ಬೆಳೆಗಾರ ಕೃಷ್ಣೇಗೌಡ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts