More

    ಸಾಗರ ತಾಲೂಕಿನಲ್ಲಿ ಮಳೆ ಅವಾಂತರ

    ಸಾಗರ: ತಾಲೂಕಿನಾದ್ಯಂತ ಮಳೆಯಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು ಅಧಿಕಾರಿಗಳು ಅಗತ್ಯ ಕ್ರಮಕೈಗೊಂಡು ತುರ್ತು ಪರಿಹಾರದ ನೀಡುತ್ತಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.ಸೋಮವಾರ ಸಂಜೆ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಾಲಯದ ಮೇಲ್ಛಾವಣಿ ತುರ್ತು ಕಾಮಗಾರಿ ಪರಿಶೀಲಿಸಿ ಮಾತನಾಡಿ, ಗಣಪತಿ ನಮ್ಮೂರಿನ ಶಕ್ತಿ ದೇವರು. ಇಲ್ಲಿ ಕೆಲವು ಕಾಮಗಾರಿಗಳು ಆಗಬೇಕಾಗಿದೆ. ಈ ಕುರಿತಂತೆ ಭಕ್ತರು ಮನವಿ ಮಾಡಿದ್ದಾರೆ, ಎಲ್ಲರ ಜತೆಯಲ್ಲಿ ಚರ್ಚಿಸಿ ಕಾಮಗಾರಿಯನ್ನು ಮುನ್ನಡೆಸುತ್ತೇವೆ. ದೇವಾಲಯದ ಆವರಣದ ಸುತ್ತ ಭಕ್ತರು ಪ್ರದಕ್ಷಿಣೆ ಹಾಕಲು ನೆಲಹಾಸು ಜಾರುತಿದ್ದು ಇದಕ್ಕೆ ತಕ್ಷಣ ತುರ್ತು ವ್ಯವಸ್ಥೆ ಮಾಡಲು ತಹಸೀಲ್ದಾರರಿಗೆ ಸೂಚಿಸಿದ್ದೇನೆ. ಅಧಿಕಾರಿಗಳು ದೇವಾಲಯದ ಕಾಮಗಾರಿಯನ್ನು ತಕ್ಷಣ ಪೂರೈಸಿದ್ದಾರೆ ಎಂದರು. ಮಳೆಯಿಂದಾಗಿ ಕೊಟ್ಟಿಗೆ ಮತ್ತು ಮನೆಗಳಿಗೆ ಹಾನಿಯಾಗಿದ್ದು ತುರ್ತು ಪರಿಹಾರ ನೀಡಲಾಗುತ್ತದೆ. ಸರ್ಕಾರಕ್ಕೆ ವರದಿ ಕಳುಹಿಸಿ ಮನೆ ಮತ್ತು ಕೊಟ್ಟಿಗೆಯನ್ನು ಕಟ್ಟಿಸಿಕೊಡಲಾಗುತ್ತದೆ. ಹಿಂದಿನ ಸರ್ಕಾರ ಮನೆ ಹಾನಿಯಾದ ಅನೇಕ ಕಡೆಗಳಲ್ಲಿ ವಸತಿ ಸಂಬಂಧಿಸಿದಂತೆ ಸಂಪೂರ್ಣ ಹಣ ಬಿಡುಗಡೆ ಮಾಡಿಲ್ಲ, ನಷ್ಟಕ್ಕೆ ಒಳಗಾದವರು ಇಂದಿಗೂ ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆದಾಡುತ್ತಿದ್ದಾರೆ. ಪರಿಹಾರ ನೀಡುವ ವಿಚಾರದಲ್ಲಿ ಅಧಿಕಾರಿಗಳು ನೇರ ಕಾನೂನಿನ ಗೆರೆ ಹಿಡಿದುಕೊಂಡು ಕೂರಬೇಡಿ. ನೊಂದವರಿಗೆ ನೆರವಾಗಿ ಎಂದು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts