More

    ಗಾಳಿ ಮಳೆಗೆ ಮನೆಗಳಿಗೆ ಹಾನಿ

    ಕುಂದಾಪುರ: ಭಾರಿ ಗಾಳಿ, ಮಳೆಗೆ ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಕೋಡಿ ಪರಿಸರದಲ್ಲಿ ಸಮುದ್ರ ಉಬ್ಬರ ಹೆಚ್ಚಿದ್ದು, ಕಡಲು ಕೊರೆತದಿಂದ ಸಮುದ್ರ ತಡೆ ಕಲ್ಲುಗಳು ನೀರು ಪಾಲಾಗಿ, ರಸ್ತೆ ಕೂಡ ಅಪಾಯದಲ್ಲಿದೆ.

    ಗಾಳಿ ಅಬ್ಬರಕ್ಕೆ ಹಕ್ಲಾಡಿ ಗ್ರಾಮದ ಬುಡ್ಡು ಎಂಬುವರ ಮನೆ, ಹೆಮ್ಮಾಡಿಯ ಜಲಜಾ, ಆಲೂರು ಗ್ರಾಮದ ಗೋಪಾಲ ಪೂಜಾರಿ ಹಾಗೂ ಅಸೋಡು ಗ್ರಾಮ ಸರಸ್ವತಿ ಎಂಬುವರ ಮನೆಗಳಿಗೆ ಹಾನಿಯಾಗಿದೆ. ಸೌಪರ್ಣಿಕಾ ನದಿ ತೀರದ ಸಾಲ್ಬುಡ, ನಾವುಂದ ಕೆಳಬದಿ, ಬಡಾಕೆರೆ, ಅರೆಹೊಳೆ, ಚಿಕ್ಕಳ್ಳಿ, ಕಡಿಕೆ ನಾಡ, ಸೇನಾಪುರ, ಪಡುಕೋಣೆ, ಕನ್ನಡಕುದ್ರು, ಯಳೂರು, ತೊಪ್ಲು, ಬಟ್ಟೆಕುದ್ರು ಪ್ರದೇಶದಲ್ಲಿ ಕೃಷಿ ಭೂಮಿಗೆ ನೆರೆ ನೀರು ನುಗ್ಗಿದ್ದು, ಚಿಕ್ಕಳ್ಳಿಯಲ್ಲಿ ಮನೆ ಅಂಗಳಕ್ಕೆ ನೀರು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts