More

    ಮತ್ತೆ ನೂರು ವಿಶೇಷ ರೈಲುಗಳ ಸಂಚಾರ; ರಾಜ್ಯಗಳೊಂದಿಗೆ ಚರ್ಚಿಸಿ ಆರಂಭ

    ನವದೆಹಲಿ: ಇನ್ನು ಹೆಚ್ಚು ರಾಜ್ಯ ಹಾಗೂ ಅಂತಾರಾಜ್ಯ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಇನ್ನಷ್ಟು ವಿಶೇಷ ರೈಲುಗಳ ಸಂಚಾರ ಆರಂಭಿಸಲಿದೆ. ಕೇಂದ್ರ ಸರ್ಕಾರದ ಅನ್​ಲಾಕ್​ 4 ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಹೆಚ್ಚು ವಿಶೇಷ ರೈಲುಗಳನ್ನು ಓಡಿಸಲು ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜತೆಗೆ, ಕೇಂದ್ರ ಗೃಹ ಸಚಿವಾಲಯದ ಅಂತಿಮ ಸೂಚನೆಗೆ ಕಾಯಲಾಗುತ್ತಿದೆ.

    ಇದನ್ನೂ ಓದಿ; ವಿದ್ಯಾರ್ಥಿಗಳ ರಿಯಾಯ್ತಿ ಬಸ್​ಪಾಸ್​ಗೆ ಕತ್ತರಿ…? ಕರೊನಾ ಆರ್ಥಿಕ ಸಂಕಷ್ಟದಿಂದ ಸಂಬಳಕ್ಕೇ ಕಾಸಿಲ್ಲ

    ಸೆಪ್ಟಂಬರ್​ 21ರ ನಂತ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಜತೆಗೆ, ಸೆಪ್ಟಂಬರ್​ 7ರಿಂದ ಮೆಟ್ರೋ ರೈಲುಗಳ ಸಂಚಾರವೂ ಶುರುವಾಗಲಿದೆ. ಈ ಕಾರಣಕ್ಕೆ ರೈಲುಗಳ ಸಂಚಾರವನ್ನು ಹೆಚ್ಚಿಸಲಾಗುತ್ತಿದೆ.

    ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮಾರ್ಚ್​ 25ರಿಂದ ಎಲ್ಲ ರೈಲುಗಳ ಓಡಾಟವನ್ನು ಬಂದ್​ ಮಾಡಲಾಗಿತ್ತು. ಮೇ 1ರ ನಂತರ ಶ್ರಮಿಕ್​ ರೈಲುಗಳನ್ನು ಆರಂಭಿಸಲಾಯಿತು. ಬಳಿಕ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದೀಗ ಬೇಡಿಕೆಗೆ ಅನುಗುಣವಾಗಿ ನೂರು ವಿಶೇಷ ರೈಲಗಳ ಸಂಚಾರಕ್ಕೆ ಯೋಜನೆ ರೂಪಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

    ಆಕಾಶದಿಂದ ‘ಹಣದ ಮಳೆ’ಯೇ ಸುರಿಯಿತು; ರಾತ್ರೋರಾತ್ರಿ ಲಕ್ಷಾಧೀಶರಾದ ಗ್ರಾಮಸ್ಥರು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts