More

    ಗುಡ್​ ನ್ಯೂಸ್ .. 90 ಹೊಸ ರೈಲುಗಳ ಆರಂಭಕ್ಕೆ ಭಾರತೀಯ ರೈಲ್ವೆ ಚಿಂತನೆ

    ನವದೆಹಲಿ: ಭಾರತೀಯ ರೈಲ್ವೆ ಮುಂದಿನ ವಾರದಿಂದ 45 ಜೋಡಿ ರೈಲುಗಳನ್ನು ಅಂದರೆ 90 ಹೊಸ ವಿಶೇಷ ರೈಲುಗಳನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.
    ಈ ಉದ್ದೇಶಿತ ವಿಶೇಷ ರೈಲುಗಳ ಮೊದಲ ಪಟ್ಟಿಯನ್ನು ಗೃಹ ಸಚಿವಾಲಯಕ್ಕೆ ಅನುಮೋದನೆಗಾಗಿ ಕಳುಹಿಸಲಾಗಿದೆ.
    ಅಗತ್ಯ ಅನುಮತಿ ಸಿಕ್ಕ ನಂತರ ಮುಂದಿನ ವಾರದಲ್ಲಿ ಹೊಸ ವಿಶೇಷ ರೈಲುಗಳು ಪ್ರಾರಂಭಗೊಳ್ಳಲಿವೆ ಎಂದು ತಿಳಿದುಬಂದಿದೆ.

    ಇದನ್ನು ಓದಿ: ಮಹಾರಾಷ್ಟ್ರದಲ್ಲಿ ಸಮುದಾಯ ಹರಡುವಿಕೆ ಇಲ್ಲ :ಆರೋಗ್ಯ ಸಚಿವ ರಾಜೇಶ್ ಟೋಪೆ ಸ್ಪಷ್ಟನೆ


    ಈ ರೈಲುಗಳಲ್ಲಿ ಪ್ರಯಾಣಿಸಲು, ಪ್ರಯಾಣದ ದಿನಾಂಕದಿಂದ 120 ದಿನಗಳ ಮುಂಚಿತವಾಗಿ ಐಆರ್​​​​ಸಿಟಿಸಿಯಲ್ಲಿ ಟಿಕೆಟ್ ಕಾಯ್ದಿರಿಸಬಹುದು. ಈ ರೈಲುಗಳಲ್ಲಿನ ಕೆಲವು ಆಸನಗಳನ್ನು ತತ್ಕಾಲ್ ಕೋಟಾ ಅಡಿ ಕಾಯ್ದಿರಿಸಲು ಅನುಮತಿ ಇದೆ. ಅಂದರೆ ಈ ವಿಶೇಷ ರೈಲುಗಳಲ್ಲಿ ತುರ್ತು ಬುಕಿಂಗ್ ಸೌಲಭ್ಯವೂ ಇರುತ್ತದೆ.
    ಕರೊನಾವೈರಸ್ ತಡೆಗಟ್ಟುವಿಕೆಗಾಗಿ ರೈಲ್ವೆ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳನ್ನು ಈ ರೈಲು ಪ್ರಯಾಣದ ವೇಳೆ ಕಟ್ಟುನಿಟ್ಟಾಗಿ ಅನುಸರಿಸಲಾಗುವುದು.

    ಇದನ್ನೂ ಓದಿ: ರಾಜೀನಾಮೆ ತೂಗುಗತ್ತಿಯಿಂದ ತಪ್ಪಿಸಿಕೊಳ್ಳಲು ಅಧಿವೇಶವನ್ನೇ ಮುಂದೂಡಿದ ಓಲಿ


    ತತ್ಕಾಲ್ ಅಡಿ ಟಿಕೆಟ್ ಕಾಯ್ದಿರಿಸಲು, ಪ್ರಯಾಣಿಕರು ಎಸಿ ಬುಕಿಂಗ್​​ಗಾಗಿ ನಿಗದಿತ ಪ್ರಯಾಣದ ದಿನಕ್ಕೆ ಒಂದು ದಿನ ಮೊದಲು ಬೆಳಗ್ಗೆ 10 ಗಂಟೆ ನಂತರ ಹಾಗೂ ಸ್ಲೀಪರ್ ಕ್ಲಾಸ್​​​​ಗೆ ಬೆಳಗ್ಗೆ 11 ಗಂಟೆಯ ನಂತರ ಟಿಕೆಟ್ ಕಾಯ್ದಿರಿಸಬೇಕು. 

    ಕರೊನಾದಿಂದ ಗುಣಮುಖನಾದರೂ ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣಾದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts