More

    ರಾಜೀನಾಮೆ ತೂಗುಗತ್ತಿಯಿಂದ ತಪ್ಪಿಸಿಕೊಳ್ಳಲು ಅಧಿವೇಶನವನ್ನೇ ಮುಂದೂಡಿದ ಓಲಿ

    ಕಾಠ್ಮಂಡು: ತಮ್ಮ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿರುವಂತೆ ಅದರಿಂದ ತಪ್ಪಿಸಿಕೊಳ್ಳಲು ರಾಜಕೀಯ ಸಂಚು ರೂಪಿಸಿರುವ ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಓಲಿ, ಸದ್ಯ ನಡೆಯುತ್ತಿರುವ ಸಂಸತ್​ ಅಧಿವೇಶವನ್ನೇ ಮುಂದೂಡಿದ್ದಾರೆ.

    ಗುರುವಾರ ಬೆಳಗ್ಗೆ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿ ಅವರನ್ನು ಭೇಟಿಯಾಗಿದ್ದ ಪ್ರಧಾನಿ ಓಲಿ, ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಸಚಿವ ಸಂಪುಟ ಸಭೆ ನಡೆಸಿದ್ದ ಅವರು, ಸಂಸತ್​ ಅನ್ನು ಬರ್ಖಾಸ್ತುಗೊಳಿಸದೆ, ಅಧಿವೇಶನವನ್ನು ಮುಂದೂಡಲು ರಾಷ್ಟ್ರಪತಿಯವರ ಅನುಮತಿ ಪಡೆಯುವ ನಿರ್ಣಯ ಕೈಗೊಳ್ಳಲಾಯಿತು. ಈ ನಿರ್ಣಯಕ್ಕೆ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿ ಅನುಮತಿ ನೀಡಿದರು ಎಂದು ಹೇಳಲಾಗಿದೆ. ಈ ರೀತಿಯಾಗಿ ಓಲಿ ಸದ್ಯ ರಾಜೀನಾಮೆಯ ತೂಗುಗತ್ತಿಯಿಂದ ತಪ್ಪಿಸಿಕೊಂಡಿದ್ದಾರೆ.

    ಓಲಿ ಅವರ ವಿರುದ್ಧ ಅಪಸ್ವರ ಎತ್ತಿರುವ ನೇಪಾಳ ಕಮ್ಯುನಿಸ್ಟ್​ ಪಾರ್ಟಿಯ ಸಹ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಪುಷ್ಪ ಕಮಲ್​ ದಹಾಲ್​ ಪ್ರಚಂಡಾ, ಬುಧುವಾರ ನಡೆದ ಪಕ್ಷದ ಸಭೆಯಲ್ಲಿ ಪಕ್ಷದ ಸ್ಥಾಯಿ ಸಮಿತಿಯ 44 ಸದಸ್ಯರ ಪೈಕಿ 31 ಸದಸ್ಯರು ಓಲಿ ವಿರುದ್ಧವಾಗಿ ನಿಂತಿದ್ದಾರೆ. ಹಾಗಾಗಿ ಅವರು ತಕ್ಷಣವೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ನೇಪಾಳದ ಗೃಹ ಸಚಿವ ರಾಮ್​ ಬಹಾದ್ದೂರ್​ ಥಾಪಾ ಕೂಡ ಓಲಿಯ ರಾಜೀನಾಮೆಗೆ ಆಗ್ರಹಿಸಿದವರಲ್ಲಿ ಸೇರಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಪಕ್ಕದ ಮನೆಯವರ ಆಸ್ತಿ ಕಬಳಿಸಲು ಬಾಲಕಿ ಮೇಲೆ ಅತ್ಯಾಚಾರ !

    ಸಂಸತ್​ ಅಧಿವೇಶವನ್ನು ಮುಂದೂಡಲ್ಪಟ್ಟಿರುವುದರಿಂದ ಸದನದಲ್ಲಿ ತಕ್ಷಣವೇ ಬಲಾಬಲ ಪರೀಕ್ಷೆಗೆ ಇಳಿಯುವ ಸಮಸ್ಯೆಯಿಂದ ಓಲಿ ಪಾರಾಗಿದ್ದಾರೆ. ಅಷ್ಟೇ ಅಲ್ಲ, ವಿಭಜಿತ ಪಕ್ಷಕ್ಕೆ ಅನುಮೋದನೆ ನೀಡುವ ನಿಟ್ಟಿನಲ್ಲಿ ಇರುವ ನಿಯಮವನ್ನು ಸಡಿಲಗೊಳಿಸುವ ಸುಗ್ರೀವಾಜ್ಞೆಯನ್ನು ಸದನದಲ್ಲಿ ಮತ್ತೊಮ್ಮೆ ಮಂಡಿಸಲು ಅವಕಾಶ ದೊರೆಯಲಿದೆ.

    ಸಂಸದೀಯ ಪಕ್ಷ ಅಥವಾ ಪಾರ್ಟಿಯ ಕೇಂದ್ರೀಯ ಸಮಿತಿಯ ಶೇ.40 ಸದಸ್ಯರ ಬೆಂಬಲ ಹೊಂದಿರುವ ಹೊಸ ಪಕ್ಷವನ್ನು ಚುನಾವಣಾ ಆಯೋಗದಲ್ಲಿ ತಕ್ಷಣವೇ ನೋಂದಣಿ ಮಾಡಿಸಲು ಅವಕಾಶ ನೀಡುವಂತೆ ರಾಜಕೀಯ ಪಕ್ಷಗಳ ಕಾಯ್ದೆಗೆ ತಿದ್ದುಪಡಿ ತರುವುದು ಈ ಸುಗ್ರೀವಾಜ್ಞೆಯ ಉದ್ದೇಶವಾಗಿದೆ. ಈ ಹಿಂದೆ ಕೂಡ ಈ ಸುಗ್ರೀವಾಜ್ಞೆಗೆ ಸಂಸತ್​ನ ಅನುಮೋದನೆ ಪಡೆಯಲು ಪ್ರಯತ್ನಿಸಲಾಗಿತ್ತು. ಆದರೆ, ಇದಕ್ಕೆ ಸದಸ್ಯರಿಂದ ಭಾರಿ ಟೀಕೆ ವ್ಯಕ್ತವಾಗಿದ್ದರಿಂದ ಅದನ್ನು ಅಲ್ಲಿಯೇ ಕೈಬಿಡಲಾಗಿತ್ತು.

    ಚೀನಾದ ತಾಳಕ್ಕೆ ಕುಣಿಯುತ್ತಿದ್ದ ನೇಪಾಳ ಪಿಎಂ ಕೆ.ಪಿ. ಶರ್ಮ ಓಲಿ ರಾಜೀನಾಮೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts