More

    ಚಿಕ್ಕಮಗಳೂರು- ಬೆಂಗಳೂರು ಪ್ರತಿದಿನ ರೈಲು ಸಂಚಾರಕ್ಕೆ ರೈಲ್ವೆ ಸಚಿವಾಲಯ ತಾತ್ವಿಕ ಒಪ್ಪಿಗೆ

    ಚಿಕ್ಕಮಗಳೂರು: ನಗರದಿಂದ ಬೆಂಗಳೂರಿಗೆ ಪ್ರತಿದಿನ ರಾತ್ರಿ ರೈಲು ವ್ಯವಸ್ಥೆ ಕಲ್ಪಿಸಲು ರೈಲ್ವೆ ಸಚಿವಾಲಯ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

    ಪ್ರಧಾನಿ ಮೋದಿ ಹಾಗೂ ಎನ್​ಡಿಎ ಸರ್ಕಾರದ ಎರಡನೆ ಅವಧಿಯಲ್ಲಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಜತೆ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ನಗರದಿಂದ ಬೆಂಗಳೂರಿಗೆ ಬೆಳಗ್ಗೆ 6.30ಕ್ಕೆ ಹೊರಡುವ ರೈಲು ಜನರಿಗೆ ಅನುಕೂಲವಾಗಿಲ್ಲ. ಬೆಂಗಳೂರು ತಲುಪಲು ತೆಗೆದುಕೊಳ್ಳುವ ಅವಧಿಯೂ ಹೆಚ್ಚಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ರೈಲ್ವೆ ಸಚಿವ ಪೀಯೂಷ್ ಗೋಯೆಲ್ ಹಾಗೂ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಗಮನ ಸೆಳೆದಿದ್ದರಿಂದ ಈ ವ್ಯವಸ್ಥೆ ಕಲ್ಪಿಸಲು ಸಮ್ಮತಿಸಿದ್ದಾರೆ ಎಂದು ತಿಳಿಸಿದರು.

    ಕರೊನಾ ಸೋಂಕು ಭೀತಿಯಿಂದಾಗಿ ಈ ರೈಲು ಸಂಚಾರದ ಘೊಷಣೆ ವಿಳಂಬವಾಗುತ್ತಿದೆ. ಜಿಲ್ಲೆಯ ರೈಲು ಸಂಪರ್ಕ ವ್ಯವಸ್ಥೆಯನ್ನು ಇನ್ನಷ್ಟು ಸುಗಮಗೊಳಿಸಲು ಹಾಗೂ ವಿಸ್ತರಿಸುವ ಬಗ್ಗೆ ಮಾತುಕತೆ ನಡೆಸಲಾಗಿದೆ. ನಗರದಿಂದ ದೇವನೂರು ಮಾರ್ಗ ಹಾಗೂ ಶೃಂಗೇರಿ-ಶಿವಮೊಗ್ಗ ಸಂರ್ಪಸುವ ರೈಲು ಮಾರ್ಗಕ್ಕೂ ಸರ್ವೆ ನಡೆದಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts