More

    ಒಡಿಶಾ ರೈಲು ದುರಂತ ನಡೆದಿದ್ದು ಯಾಕೆ?

    ನವದೆಹಲಿ: ಜೂನ್ 2ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ಮತ್ತು ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಎಂಬ ಎರಡು ಎಕ್ಸ್‌ಪ್ರೆಸ್ ರೈಲುಗಳು ಡಿಕ್ಕಿ ಹೊಡೆದಿದ್ದು ಭೀಕರ ರೈಲು ಅಪಘಾತ ನಡೆದಿದೆ. ಈ ಪ್ರಕರಣದಲ್ಲಿ ಸಾವಿನ ಸಂಖ್ಯೆ 288ಕ್ಕೆ ತಲುಪಿದ್ದು 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

    ಇದನ್ನೂ ಓದಿ: ಒಡಿಶಾ ರೈಲು ದುರಂತ: ಮೃತರ ಕುಟುಂಬಕ್ಕೆ ರೈಲ್ವೆ ಸಚಿವರು ಘೋಷಿಸಿದ ಪರಿಹಾರ ಎಷ್ಟು? ಇಲ್ಲಿದೆ ನೋಡಿ ಮಾಹಿತಿ

    ಅಪಘಾತ ಸ್ಥಳದಲ್ಲಿ 200 ಆಂಬ್ಯುಲೆನ್ಸ್‌ಗಳು, 50 ಬಸ್‌ಗಳು ಮತ್ತು 45 ಮೊಬೈಲ್ ಆರೋಗ್ಯ ಘಟಕಗಳು, ಭುವನೇಶ್ವರದ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿವೆ. ಜೊತೆಗೆ 1,200 ಸಿಬ್ಬಂದಿಗಳು. ಎಸ್‌ಸಿಬಿಯ ಇಪ್ಪತ್ತೈದು ವೈದ್ಯರ ತಂಡಗಳು, ಫೋರೆನ್ಸಿಕ್ ಮೆಡಿಸಿನ್ ತಜ್ಞರನ್ನು ಸಹ ಸಜ್ಜುಗೊಳಿಸಲಾಗಿದ್ದು ಟ್ರ್ಯಾಕ್ಟರ್ ಸೇರಿದಂತೆ ಎಲ್ಲಾ ರೀತಿಯ ವಾಹನಗಳಲ್ಲಿ ಮೃತದೇಹಗಳನ್ನು ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗುತ್ತಿದೆ.

    ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಹಲವಾರು ಕೋಚ್‌ಗಳು ಹೌರಾಕ್ಕೆ ಹೋಗುವ ಮಾರ್ಗದಲ್ಲಿ ಹಳಿತಪ್ಪಿ ಪಕ್ಕದ ಹಳಿಗಳ ಮೇಲೆ ಬಿದ್ದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು “ಈ ಹಳಿತಪ್ಪಿದ ಕೋಚ್‌ಗಳು 12841 ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿದ್ದು ಅದರ ಬೋಗಿಗಳು ಕೂಡ ಮಗುಚಿ ಬಿದ್ದವು. ಇದೆಲ್ಲದಕ್ಕೂ ಪ್ರಮುಖ ಕಾರಣ, ರೈಲು ಸಂಚರಿಸುತ್ತಿದ್ದ ಮಾರ್ಗದಲ್ಲಿ ‘ಕವಚ್’ ಎಂಬ ಸುರಕ್ಷತಾ ವ್ಯವಸ್ಥೆ ಇಲ್ಲದ್ದು” ಎಂದು ಮಾಹಿತಿ ನೀಡಿದರು.

    ಏನಿದು ‘ಕವಚ್’?

    ಕವಚ್ ಭಾರತೀಯ ರೈಲ್ವೆಯ ಸ್ವಯಂಚಾಲಿತ ರೈಲು ಸುರಕ್ಷತಾ ಸಾಧನವಾಗಿದೆ . ಇದು ದೇಶಿಯವಾಗಿ ಅಭಿವೃದ್ಧಿ ಹೊಂದಿದ ತಂತ್ರಜ್ಞಾನವಾಗಿದೆ. ಈ ತಂತ್ರಜ್ಞಾನವನ್ನು ರೈಲ್ವೇಯ ವಿನ್ಯಾಸ ಸಂಶೋಧನಾ ಸಂಸ್ಥೆ RTSO ಅಭಿವೃದ್ಧಿಪಡಿಸಿದೆ. 

    ಇದನ್ನೂ ಓದಿ: ಒಡಿಶಾ ರೈಲು ಅಪಘಾತ | ತೀರ್ಥಯಾತ್ರೆಗೆ ತೆರಳಿದ್ದ 110 ಕನ್ನಡಿಗರ ಜೀವ ಉಳಿಸಿದ್ದು ಹಿಂದಿನ ಸ್ಟೇಷನ್​ನಲ್ಲಿ ನಡೆದ ಘಟನೆ!

    ಈ ವ್ಯವಸ್ಥೆ ಹೊಂದಿರುವ ರೈಲಿನಲ್ಲಿ ಕೆಲ ರೇಡಿಯೋ ತರಂಗಗಳನ್ನು ಗುರುತಿಸುವ ಮಶೀನ್​ಗಳು ಇರುತ್ತವೆ. ಇವು ಕಾರ್ಯನಿರ್ವಹಿಸಲು ರೈಲ್ವೇ ಟ್ರ್ಯಾಕ್​ ಮೇಲೂ ಇದೇ ರೀತಿಯ ಸಾಧನಗಳು ಇರುತ್ತವೆ. ಇವುಗಳನ್ನು ಪ್ರತೀ ಒಂದು ಕಿಮೀಗೂ ಅಳವಡಿಸಲಾಗುತ್ತದೆ. ಈ ಸಾಧನಗಳ ನಡುವೆ ಸಂವಹನ ನಡೆದು ಒಂದೇ ಹಳಿಯಲ್ಲಿ ಎರಡು ರೈಲುಗಳು ಇರುವ ಮಾಹಿತಿ ಸಿಕ್ಕಾಗ ರೈಲಿನ ಇಂಜಿನಿಯರ್​ಗೆ ಸೂಚಿಸಲಾಗುತ್ತದೆ. ಆಗ ಎರಡೂ ರೈಲುಗಳನ್ನು ನಿಲ್ಲಿಸಿ ಪರಿಸ್ಥಿತಿಯನ್ನು ನಿರ್ವಹಿಸಲಾಗುತ್ತದೆ.

    ಈ ಟೆಕ್ನಾಲಜಿ, ಮಂಜು ತುಂಬಿದ ವಾತಾವರಣ, ಕತ್ತಲೆಯಲ್ಲಿ, ಮಳೆಯಲ್ಲಿ ಮುಂತಾದ ವಾತಾವರಣಗಳಲ್ಲಿ ರೈಲು ಚಾಲಕರಿಗೆ ಸಹಾಯ ಮಾಡುತ್ತದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts