More

    ಒಡಿಶಾ ರೈಲು ಅಪಘಾತ | ತೀರ್ಥಯಾತ್ರೆಗೆ ತೆರಳಿದ್ದ 110 ಕನ್ನಡಿಗರ ಜೀವ ಉಳಿಸಿದ್ದು ಹಿಂದಿನ ಸ್ಟೇಷನ್​ನಲ್ಲಿ ನಡೆದ ಘಟನೆ!

    ಬೆಂಗಳೂರು: ಒಡಿಶಾದ ಬಾಲಸೋರ್ ಬಳಿ ಶುಕ್ರವಾರ ಸಂಜೆ ಭೀಕರ ರೈಲು ಅಪಘಾತ ಸಂಭವಿಸಿದ್ದು ಸಾವಿನ ಸಂಖ್ಯೆ 288ಕ್ಕೆ ಏರಿದೆ. 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೆ ಅದೃಷ್ಟವಶಾತ್ ಯಶವಂತಪುರ-ಹೌರಾ ರೈಲಿನಲ್ಲಿದ್ದ 110 ಮಂದಿ ಕನ್ನಡಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಚಿಕ್ಕಮಗಳೂರಿನ ನಿವಾಸಿಗಳಾದ 110ಕ್ಕೂ ಹೆಚ್ಚು ಕನ್ನಡಿಗರು ಬೆಂಗಳೂರಿನಿಂದ ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಜೈನತೀರ್ಥ ಕ್ಷೇತ್ರವಾದ ಜಾರ್ಖಂಡ್‌ನ ಸಮ್ಮೇದ ಶಿಖರಕ್ಕೆ ತೆರಳಿದ್ದರು.

    ಇದನ್ನೂ ಓದಿ: ರೈಲು ಅಪಘಾತ | ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಒಡಿಶಾಗೆ ಸಂತೋಷ್ ಲಾಡ್

    ಬಾಲಸೋರ್‌ನಲ್ಲಿ ನಡೆದ ಸರಣಿ ಅಪಘಾತದ ಸಂದರ್ಭದಲ್ಲಿ, ಯಶವಂತಪುರ-ಹೌರಾ ರೈಲಿನ ಕೊನೆಯ ಮೂರು ಬೋಗಿಗಳಿಗೆ ಮತ್ತೊಂದು ರೈಲು ಡಿಕ್ಕಿ ಹೊಡೆದಾಗ ಈ ಬೋಗಿಗಳು ಎದುರಿನ ಬೋಗಿಗಳಿಗಿಂತ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿದ್ದವು. ಈ ಬೋಗಿಗಳಲ್ಲಿದ್ದ ಅನೇಕ ಪ್ರಯಾಣಿಕರು ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ರೈಲಿನಲ್ಲಿ ಅಪಘಾತದಿಂದ ಬದುಕುಳಿದ ಕನ್ನಡಿಗರು ವಿವರಿಸಿದರು. ಸ್ವಲ್ಪ ಸಮಯದ ನಂತರ ಯಶವಂತಪುರ-ಹೌರಾ ರೈಲು 12-30 ರಾವೆಲ್‌ಗೆ ತನ್ನ ಪ್ರಯಾಣವನ್ನು ಪುನರಾರಂಭಿಸಿತು ಎಂದು ಅವರು ಹೇಳಿದರು.

    ಹಿಂದಿನ ಸ್ಟೇಷನ್​ನಲ್ಲಿ ನಡೆದಿದ್ದ ಆ ಘಟನೆ ಪ್ರಾಣ ಉಳಿಸಿತು!

    ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ 110 ಜನ ಬೈಯಪ್ಪನಹಳ್ಳಿ ಸರ್​​ ಎಂ ವಿಶ್ವೇಶ್ವರಯ್ಯ ಟರ್ಮಿನಲ್​-ಹೌರಾ ಎಕ್ಸಪ್ರೆಸ್​​​​ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇವರು ಬೆಂಗಳೂರಿನಿಂದ ಕೊನೆಯ S5, S6, S7 ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದರು.

    ಇದನ್ನೂ ಓದಿ: ಒಡಿಶಾ ರೈಲು ದುರಂತ: ಏರುತ್ತಲೇ ಇದೆ ಸಾವಿನ ಸಂಖ್ಯೆ, 238 ಮಂದಿ ಮೃತ, 900ಕ್ಕೂ ಹೆಚ್ಚು ಮಂದಿಗೆ ಗಾಯ

    ರೈಲು ನಿನ್ನೆ (ಜೂ.02) ಮಧ್ಯಾಹ್ನ ಕೋಲ್ಕತ್ತಾ ಬಳಿ ಇಂಜಿನ್​ ಬದಲಿಸಿದೆ. ಇದರಿಂದಾಗಿ ಕಳಸ ತಾಲೂಕಿನ 110 ಜನರ ಬೋಗಿ ರೈಲಿನ ಮೊದಲ ಬೋಗಿಗಳಾಗಿದ್ದವು. ಇವರು ಮೊದಲ ಬೋಗಿಗೆ ಶಿಫ್ಟ್ ಆದ ಹಿನ್ನೆಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಕೊನೆಯ 4 ಬೋಗಿಗಳಿಗೆ ರೈಲು ಡಿಕ್ಕಿ ಹೊಡೆದಿದೆ. ಈ ನಿಲ್ದಾಣದ ರೈಲಿನಲ್ಲಿ 1294 ಪ್ರಯಾಣಿಕರು ತೆರಳಿದ್ದರು. 1294 ಪ್ರಯಾಣಿಕರ ಪೈಕಿ 994 ಜನ ಟಿಕೆಟ್‌ ಬುಕ್ ಮಾಡಿಸಿದ್ದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts