More

    ಗೂಡ್ಸ್​ ರೈಲುಗಳ ಸುರಕ್ಷತೆಗಾಗಿ ಸಶಸ್ತ್ರ ಕಾವಲಿಗೆ ಸಮ್ಮತಿ ಸೂಚಿಸಿದ ರೈಲ್ವೆ

    ನವದೆಹಲಿ: ಗೂಡ್ಸ್​ ರೈಲುಗಳ ಸುರಕ್ಷತೆಗಾಗಿ ಸಶಸ್ತ್ರ ಕಾವಲು ಅಳವಡಿಸಲು ರೈಲ್ವೆ ಸಚಿವಾಲಯ ಅನುಮತಿ ನೀಡಿದೆ. ರೈಲ್ವೆ ಇತಿಹಾಸದಲ್ಲಿ ಈ ರೀತಿ ಕ್ರಮ ಇದೇ ಮೊದಲನೆಯದು. ಇದರಂತೆ, ಸರಕು, ಸರಂಜಾಮುಗಳ ಭದ್ರತೆಯನ್ನು ಖಾತರಿಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಮಹತ್ವದ್ದೆನಿಸಿಕೊಂಡಿದೆ.

    ಈಸ್ಟರ್ನ್ ರೈಲ್ವೆ ಜೋನ್​ನಲ್ಲಿ ಆರಂಭಿಕವಾಗಿ ಸಶಸ್ತ್ರ ಕಾವಲು ಅಳವಡಿಸಲಾಗುತ್ತಿದ್ದು, ಆರು ತಿಂಗಳ ಕಾಲ ಇದರ ಕಾರ್ಯನಿರ್ವಹಣೆ, ಫಲಿತಾಂಶವನ್ನು ಪರಿಶೀಲಿಸಲಾಗುತ್ತದೆ. ಇದರ ಪರಾಮರ್ಶೆಯ ಬಳಿಕ ಉಳಿದ ರೈಲ್ವೆ ಜೋನ್​ಗಳಿಗೂ ಇದನ್ನು ವಿಸ್ತರಿಸಲಾಗುತ್ತದೆ ಎಂದು ರೈಲ್ವೆ ಹೊರಡಿಸಿರುವ ಜನವರಿ 29ರ ಆದೇಶದಲ್ಲಿ ತಿಳಿಸಿದೆ.

    ಸರಕುಗಳನ್ನು ಸಾಗಿಸುವ ರೈಲಿನಲ್ಲಿ ಬ್ರೇಕ್​ ವ್ಯಾನ್​ನಲ್ಲಿ ಸಶಸ್ತ್ರ ಕಾವಲುಗಾರರು ಇರುವುದಕ್ಕೆ ಅವಕಾಶ ನೀಡಿರುವ ರೈಲ್ವೆ, ಸರಕು ಕಳವು ತಡೆಯುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬಹುದು. ಮತ್ತು ಸರಕುಗಳ ಭದ್ರತೆಯನ್ನು ಖಾತರಿಪಡಿಸಬೇಕು ಎಂದು ಹೇಳಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts