More

    ರೇವ್ ಪಾರ್ಟಿ ಮೇಲೆ ದಾಳಿ : 9 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ ವಶ

    ಪಣಜಿ: ಡ್ರಗ್ಸ್ ಬಳಕೆ ಶಂಕೆ ಹಿನ್ನೆಲೆಯಲ್ಲಿ ಉತ್ತರ ಗೋವಾ ಜಿಲ್ಲೆಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಅಪರಾಧ ಶಾಖೆ ದಾಳಿ ನಡೆಸಿ ಮೂವರು ವಿದೇಶಿಯರು ಸೇರಿ 23 ಜನರನ್ನು ಬಂಧಿಸಿದೆ.
    ಶನಿವಾರ ರಾತ್ರಿ ಅಂಜುನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಗೇಟರ್ ಗ್ರಾಮದ ವಿಲ್ಲಾದಲ್ಲಿ ಈ ಘಟನೆ ನಡೆದಿದೆ.
    ಕೋವಿಡ್ -19 ನಂತಹ ಈ ವಿಷಮ ಸ್ಥಿತಿ ಮಧ್ಯೆ ನಡೆಯುತ್ತಿದ್ದ ಪಾರ್ಟಿ ವೇಳೆ ಒಂಬತ್ತು ಲಕ್ಷ ರೂ.ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಭೂಕುಸಿತದ ಜಾಗದಲ್ಲಿ ರಾಶಿರಾಶಿ ತಲೆಬುರುಡೆ- ಮೂಳೆ, ಕಿವಿಯೋಲೆ ಪತ್ತೆ!

    ಬಂಧನಕ್ಕೊಳಗಾದವರಲ್ಲಿ ರಷ್ಯಾದ ಇಬ್ಬರು ಮಹಿಳೆಯರು ಮತ್ತು ಜೆಕ್ ಗಣರಾಜ್ಯದ ಒಬ್ಬಾತ ಸೇರಿದ್ದಾರೆ. ಪೊಲೀಸ್ ದಾಳಿಯ ಸಮಯದಲ್ಲಿ ನಿಷೇಧಿತ ವಸ್ತುವನ್ನು ಹೊಂದಿದ್ದರೆಂದು ಆರೋಪಿಸಿ ಅವರನ್ನು ಹಾಗೂ ಪಾರ್ಟಿ ಆಯೋಜಿಸಿದ್ದ ಭಾರತೀಯ ವ್ಯಕ್ತಿಯನ್ನೂ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    ಪಾರ್ಟಿಯಲ್ಲಿ ಹಾಜರಿದ್ದ ಇತರ 19 ಜನರನ್ನು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲಾಯಿತು. ಅವರಲ್ಲಿ ಹೆಚ್ಚಿನವರು ದೇಶೀಯ ಪ್ರವಾಸಿಗರಾಗಿದ್ದು, ಅವರು ಕರಾವಳಿ ರಾಜ್ಯಕ್ಕೆ ವಿಹಾರಕ್ಕೆ ಬಂದಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

    ಇದನ್ನೂ ಓದಿ : ಲಸಿಕೆಗಳು ಶೇ.50 ಯಶಸ್ಸು ಪಡೆದರೂ ಕರೊನಾ ನಿಗ್ರಹ; ಅಮೆರಿಕ ತಜ್ಞ ಅಭಿಮತ; ಆಶಾದಾಯಕ ಬೆಳವಣಿಗೆ

    ಮಾದಕ ದ್ರವ್ಯ ಬಳಕೆಗೆ ಸಂಬಂಧಿಸಿದಂತೆ ಶೂನ್ಯ ಸಹಿಷ್ಣುತೆ ಮತ್ತು ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಗೋವಾ ಪೋಲಿಸ್ ಅಪರಾಧ ವಿಭಾಗವು ಅಂಜುನಾದಲ್ಲಿ ತಡರಾತ್ರಿ ನಡೆದ ಪಾರ್ಟಿ ಮೇಲೆ ದಾಳಿ ಮಾಡಿ 9 ಲಕ್ಷ ರೂ.ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಗೋವಾ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಕುಮಾರ್ ಮೀನಾ ಟ್ವೀಟ್‌ ಮಾಡಿದ್ದಾರೆ.
    ಕರಾವಳಿ ತೀರದಲ್ಲಿ ರೇವ್ ಪಾರ್ಟಿಗಳು ಯತೇಚ್ಛವಾಗಿ ನಡೆಯುತ್ತಿವೆ ಎಂದು ಶಾಸಕ ವಿನೋದ್ ಪಾಲ್ಯೇಕರ್ ಹೇಳಿದ್ದಾರೆ.
    “ಸ್ಥಳೀಯ ಪೊಲೀಸ್ ಠಾಣೆಗಳಿಗೆ ಲಂಚ ನೀಡಲಾಗುತ್ತದೆ” ಎಂದು ಅವರು ಆರೋಪಿಸಿದ್ದಾರೆ, “ಅಂಜುನ ಪೊಲೀಸ್ ಠಾಣೆಯಲ್ಲಿ ಬಹಳಷ್ಟು ಬದಲಾವಣೆ ತರಲು ಇದು ಸೂಕ್ತ ಸಮಯವಾಗಿದೆ ಎಂದು ಹೇಳಿದರು.

    ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಹಳ್ಳಿಗರು; ಸ್ಥಳಕ್ಕೆ ಹೋದ ಅಧಿಕಾರಿಗಳನ್ನೂ ಅವರೇ ಕಾಪಾಡಬೇಕಾಯ್ತು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts