More

    ವೈಟಿಪಿಎಸ್ ನಿರ್ವಹಣೆ ಖಾಸಗೀಕರಣಕ್ಕೆ ರೈತರ ಆಕ್ರೋಶ, ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ

    ರಾಯಚೂರು: ವೈಟಿಪಿಎಸ್ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವ ನಿರ್ಧಾರ ಕೈ ಬಿಡಬೇಕು, ಸರ್ಕಾರವೇ ಜವಬ್ದಾರಿ ಹೊರಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ (ನಂಜುಂಡಸ್ವಾಮಿ) ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿ, ನಗರದ ಡಿಸಿ ಕಚೇರಿ ಬಳಿ ಎಡಿಸಿ ದುರಗೇಶ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ಈಗಾಗಲೇ ವೈಟಿಪಿಎಸ್ ಕೇಂದ್ರದಲ್ಲಿ ವಿದ್ಯುತ್ ಉತ್ಪಾದನೆ ಸಮಸ್ಯೆ ಇಲ್ಲದೆ ಆರಂಭವಾಗಿದೆ. ಈ ಮಧ್ಯೆ ಸರ್ಕಾರ ಏಕಾಏಕಿ ಖಾಸಗಿ ಕಂಪನಿಗೆ ಗುತ್ತಿಗೆ ನೀಡುವ ತೀರ್ಮಾನ ಮಾಡಿದ್ದು, ಸ್ಥಳೀಯರಿಗೆ ಹಾಗೂ ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ದೂರಿದರು. 2250 ಎಕರೆ ಮೇಲ್ಪಟ್ಟು ಭೂಮಿ ನೀಡಿದ ರೈತನ ಕುಟುಂಬಕ್ಕೆ ಕೆಲಸ ನೀಡುವ ಭರವಸೆ ಈಡೇರಿಸಿಲ್ಲ. ಭೂಮಿ ಕಳೆದುಕೊಂಡ 525ಕ್ಕೂ ಹೆಚ್ಚು ಭೂ ಸಂತ್ರಸ್ತರ ಕುರಿತು ಜಿಲ್ಲಾಧಿಕಾರಿ ವರದಿ ನೀಡಿದರೂ, ಇದುವರೆಗೂ ಯಾವೊಬ್ಬರಿಗೂ ಉದ್ಯೋಗ ನೀಡಿಲ್ಲ ಎಂದು ಆರೋಪಿಸಿದರು.

    ಸಂಘದ ಜಿಲ್ಲಾಧ್ಯಕ್ಷ ವಾಸುದೇವ ಮೇಟಿ, ಮಹಿಳಾ ಘಟಕ ತಾಲೂಕಾಧ್ಯಕ್ಷೆ ಮಾಧವಿ ಮುಖಂಡರಾದ ಶಿವಪ್ಪ, ಬಾನುಬೀ, ಶ್ರೀನಿವಾಸ, ಮಾರೆಪ್ಪ, ವೀರೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts