More

    ಜಾಗತಿಕ ತಾಪಮಾನದಿಂದ ಕೃಷಿ ಕ್ಷೇತ್ರಕ್ಕೆ ಬಿಕ್ಕಟ್ಟು ಎಂದು ಐಸಿಎಆರ್‌ನ ಡಿಡಿಜಿ ಡಾ.ಆರ್.ಸಿ.ಅಗರವಾಲ್ ಆತಂಕ

    ರಾಯಚೂರು: ಈ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನ ಹೆಚ್ಚಳವಾಗಿ ಪ್ರವಾಹ, ಬರಗಾಲ, ಬಿರುಗಾಳಿ ಸೇರಿದಂತೆ ಹವಾಮಾನದ ಏರಿಳಿತಗಳು ಉಂಟಾಗಲಿದೆ. ಇದರಿಂದ ಕೃಷಿ ಕ್ಷೇತ್ರ ಸಾಕಷ್ಟು ಬಿಕ್ಕಟ್ಟು ಎದುರಿಸಲಿದೆ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಶಿಕ್ಷಣ ವಿಭಾಗ (ಐಸಿಎಆರ್)ದ ಉಪ ಮಹಾನಿರ್ದೇಶಕ ಡಾ.ಆರ್.ಸಿ.ಅಗರವಾಲ್ ಹೇಳಿದರು.

    ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಶನಿವಾರ 10ನೇ ಘಟಿಕೋತ್ಸವದಲ್ಲಿ ಮಾತನಾಡಿ, ಜಾಗತಿಕ ತಾಪಮಾನ 1.8 ಡಿಗ್ರಿಯಿಂದ 4 ಡಿಗ್ರಿಗೆ ಹೆಚ್ಚಳವಾಗುವ ಆತಂಕವಿದೆ. ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪ ಹೆಚ್ಚಾಗುವ ಸಾಧ್ಯತೆಗಳಿದೆ. ಇದು ಆಹಾರ ಉತ್ಪಾದನೆಯಲ್ಲಿ ಹೆಚ್ಚಿನ ಅಸ್ಥಿರತೆಗೆ ಕಾರಣವಾಗಲಿದೆ. ಬದಲಾಗುತ್ತಿರುವ ಹವಾಮಾನದ ಸನ್ನಿವೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರವನ್ನು ಉತ್ಪಾದಿಸುವುದು ಕೃಷಿ ಸಂಶೋಧನೆಗೆ ಸವಾಲಿನ ಕೆಲಸವಾಗಿದೆ. 2000ರಲ್ಲಿ 192 ದಶಲಕ್ಷ ಟನ್ ಆಹಾರದ ಬೇಡಿಕೆಯಿದ್ದರೆ, 2030ರ ವೇಳೆಗೆ 345 ದಶಲಕ್ಷ ಟನ್‌ಗೆ ಏರಿಕೆಯಾಗಲಿದೆ. ಮಾಹಿತಿ ಪ್ರಕಾರ 120.72 ದಶಲಕ್ಷ ಹೆಕ್ಟೇರ್ ಜಮೀನು ಮಣ್ಣಿನ ಸವಕಳಿಯಿಂದ ಹಾನಿಗೊಳಗಾದರೆ, ನೀರಿನ ಅತಿಯಾದ ಬಳಕೆಯಿಂದ ಮಣ್ಣಿನಲ್ಲಿ ಲವಣಾಂಶ ಹೆಚ್ಚಾಗಿ 8.4 ದಶಲಕ್ಷ ಹೆಕ್ಟೇರ್ ಭೂಮಿ ಫಲವತ್ತತೆ ಕಳೆದುಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ವಿವಿ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಮಾತನಾಡಿ, ಕಲಬುರಗಿ ಮತ್ತು ಭೀಮರಾಯನಗುಡಿಯಲ್ಲಿ ಸ್ನಾತಕೋತ್ತರ ಪದವಿ ಪ್ರಾರಂಭ, ಚಿಂಚೋಳಿಯಲ್ಲಿ ಅರಣ್ಯ ಮಹಾ ವಿದ್ಯಾಲಯ, ಬಳ್ಳಾರಿ ಮತ್ತು ಔರಾದ್‌ನಲ್ಲಿ ಕೃಷಿ ಪದವಿ ಮಹಾವಿದ್ಯಾಲಯಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಈ ಸಂದರ್ಭ 122 ವಿದ್ಯಾರ್ಥಿಗಳಿಗೆ ಸ್ನಾತಕ, 72 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ, 14 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಸೇರಿದಂತೆ 208 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸಾಧಕ 48 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಕುಲಸಚಿವ ಡಾ.ಎಂ.ಜಿ.ಪಾಟೀಲ್, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ತ್ರಿವಿಕ್ರಮ ಜೋಷಿ, ಕೊಟ್ರೇಶಪ್ಪ ಕೋರಿ, ಮಹಾಂತೇಶಗೌಡ ಪಾಟೀಲ್, ಶ್ರೀಧರ ಕೆಸರಟ್ಟಿ, ಸುನಿಲ್ ಹಾಗೂ ವಿವಿಧ ವಿಭಾಗಗಳ ನಿರ್ದೇಶಕರು, ಮುಖ್ಯಸ್ಥರು ಉಪಸ್ಥಿತರಿದ್ದರು.

    ಜಾಗತಿಕ ತಾಪಮಾನದಿಂದ ಕೃಷಿ ಕ್ಷೇತ್ರಕ್ಕೆ ಬಿಕ್ಕಟ್ಟು ಎಂದು ಐಸಿಎಆರ್‌ನ ಡಿಡಿಜಿ ಡಾ.ಆರ್.ಸಿ.ಅಗರವಾಲ್ ಆತಂಕ
    ಜಾಗತಿಕ ತಾಪಮಾನದಿಂದ ಕೃಷಿ ಕ್ಷೇತ್ರಕ್ಕೆ ಬಿಕ್ಕಟ್ಟು ಎಂದು ಐಸಿಎಆರ್‌ನ ಡಿಡಿಜಿ ಡಾ.ಆರ್.ಸಿ.ಅಗರವಾಲ್ ಆತಂಕ
    ಜಾಗತಿಕ ತಾಪಮಾನದಿಂದ ಕೃಷಿ ಕ್ಷೇತ್ರಕ್ಕೆ ಬಿಕ್ಕಟ್ಟು ಎಂದು ಐಸಿಎಆರ್‌ನ ಡಿಡಿಜಿ ಡಾ.ಆರ್.ಸಿ.ಅಗರವಾಲ್ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts