More

    ಆನ್‌ಲೈನ್ ಪ್ರಪಂಚ ಬಹುತೇಕ ಅಸುರಕ್ಷಿತ; ಎಸ್ಪಿ ಬಿ.ನಿಖಿಲ್ ಅಭಿಪ್ರಾಯ

    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಚಾರ ಸಂಕಿರಣ

    ರಾಯಚೂರು: ಇಂದಿನ ದಿನಮಾನದಲ್ಲಿ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರು ಸೈಬರ್ ಅಪರಾಧಗಳಿಗೆ ಬಲಿಪಶುಗಳಾಗುತ್ತಿದ್ದಾರೆ. ಅನ್‌ಲೈನ್ ಪ್ರಪಂಚ ಬಹುತೇಕ ಎಲ್ಲರಿಗೂ ಅಸುರಕ್ಷಿತವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅಭಿಪ್ರಾಯಪಟ್ಟರು.

    ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸೈಬರ್ ಸುರಕ್ಷಿತ ಮಹಿಳೆ ಹಾಗೂ ಸೈಬರ್ ಸುರಕ್ಷಿತ ಜೀವನ ವಿಷಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ ಮತ್ತು ಜಾಗೃತಿ ಬೆಳೆಸಿಕೊಳ್ಳುವುದೆ ಅವುಗಳಿಂದ ಪಾರಾಗಲು ಇರುವ ಉಪಾಯ. ಮಹಿಳೆಯರು, ವಿದ್ಯಾರ್ಥಿನಿಯರು ಮೊಬೈಲ್ ಕರೆ, ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಕ್ಕೆ ಬರುವ ಅಪರಿಚಿತರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಖಚಿತ ಅಥವಾ ಸ್ಪಷ್ಟತೆ ಇಲ್ಲದೆ ಬೆಳೆಯುವ ಸಂವಹನ, ಸ್ನೇಹಗಳಿಂದ ಆನಾಹುತಗಳಾಗುತ್ತಿವೆ. ಸಾಮಾಜಿಕ ಜಾಲತಾಣ ಬಳಸುವ ಮಹಿಳೆಯರು ತಮ್ಮ ಫೋಟೊಗಳನ್ನು ಷೇರ್ ಮಾಡುವಾಗ ಜಾಗ್ರತೆಯಿಂದ ಇರಬೇಕು. ಫೋಟೊ ಎಡಿಟ್ ಮಾಡಿ ಮಾನಹಾನಿ ಮಾಡಲಾಗುತ್ತಿದೆ. ಮಹಿಳೆಯರು ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts