More

    ಮೋದಿಯಿಂದ ಪುಣ್ಯಕ್ಷೇತ್ರಗಳ ಪುನರುತ್ಥಾನ; ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಗುಣಗಾನ

    ‘ಭವ್ಯ ಕಾಶಿ ದಿವ್ಯ ಕಾಶಿ’ ಯೋಜನೆ ಲೋಕಾರ್ಪಣೆ ನಿಮಿತ್ತ ವಿಶೇಷ ಪೂಜೆ

    ರಾಯಚೂರು: ದೇಶದಲ್ಲಿನ ಪುಣ್ಯಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಪುನರುತ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದು, ಪುಣ್ಯಕ್ಷೇತ್ರಗಳ ವೈಭವವನ್ನು ಪುನರ್ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.

    ಸ್ಥಳೀಯ ಈಶ್ವರ ದೇವಸ್ಥಾನದಲ್ಲಿ ‘ಭವ್ಯ ಕಾಶಿ ದಿವ್ಯ ಕಾಶಿ’ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಇತಿಹಾಸದಲ್ಲಿ ಮೊದಲ ಬಾರಿಗೆ ಕಾಶಿ ವಿಶ್ವನಾಥನ ಸನ್ನಿಧಿಯನ್ನು ಅಭಿವೃದ್ಧಿಗೆ ಪ್ರಧಾನಿ ಮುಂದಾಗಿದ್ದಾರೆ ಎಂದರು.

    ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ ಮಾತನಾಡಿ, ದೇಶದಲ್ಲಿ ಹಿಂದೂ ಧರ್ಮದ ನಾಶಕ್ಕೆ ಅನೇಕ ದಾಳಿಗಳು ನಡೆದಿವೆ. ದೇವಾಲಯಗಳನ್ನು ನಾಶ ಮಾಡಲು ಪ್ರಯತ್ನಗಳು ನಡೆದಿವೆ. ಆದರೆ, ಅದೆಲ್ಲವನ್ನೂ ಮೆಟ್ಟಿ ನಿಂತು ಹಿಂದು ಧರ್ಮ ಬೆಳೆದು ಬಂದಿದೆ. ಯಾರಿಗೂ ತೊಂದರೆಯಾಗದಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಕಾಶಿ ವಿಶ್ವನಾಥನ ಕ್ಷೇತ್ರದವನ್ನು ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಮುಂದಾಗಿರುವುದು ಸ್ವಾಗತಾರ್ಹ ಎಂದರು.

    ಇದಕ್ಕೂ ಮುಂಚೆ ಈಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸೋಮವಾರಪೇಟೆ ಹಿರೇಮಠ ಅಭಿನವ ರಾಚೋಟವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಶಿವಬಸಪ್ಪ ಮಾಲಿಪಾಟೀಲ್, ಬಿ.ಗೋವಿಂದ, ವಿಜಯಕುಮಾರ ಸಜ್ಜನ್, ಶಿವನಗೌಡ ಪಾಟೀಲ್, ವಾಣಿಶ್ರೀ, ತಿರುಮಲರೆಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts