More

    ಇ-ಕೆವೈಸಿ ಕಡ್ಡಾಯ ಮಾಡಿಸಿ; ರೈತರಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾ ಮಾಹಿತಿ

    ರಾಯಚೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ-ರಾಜ್ಯ ಸರ್ಕಾರದಿಂದ ರೈತರಿಗೆ ಆರ್ಥಿಕ ಬೆಂಬಲ ನೀಡುತ್ತಿದೆ. ಅದಕ್ಕಾಗಿ ರೈತರು ಸೆ.14ರೊಳಗಾಗಿ ಪಿಎಂ ಕಿಸಾನ್ ಇ-ಕೆವೈಸಿ ಮಾಡಿಸಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾ ತಿಳಿಸಿದರು.

    ಸ್ಥಳೀಯ ಜಂಟಿ ಕೃಷಿ ನಿದೇರ್ಶಕ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2022ರ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 5,36,641 ಹೆಕ್ಟೆರ್ ಪ್ರದೇಶದ ಗುರಿ ಹೊಂದಲಾಗಿತ್ತು. ಇದರಲ್ಲಿ 5,05,582 ಹೆಕ್ಟೆರ್ ಪ್ರದೇಶ ಬಿತ್ತನೆಯಾಗುವ ಮೂಲಕ ಶೇ.94.21 ಗುರಿ ತಲುಪಿದೆ. ಮೇನಲ್ಲಿ ಅತಿ ಹೆಚ್ಚು ಮಳೆಯಾಗಿದ್ದರ ಪರಿಣಾಮ ಜಿಲ್ಲೆಯಲ್ಲಿ ಬೆಳೆ ಹಾನಿ ಉಂಟಾಗಿದೆ. ಮಾನ್ವಿ ತಾಲೂಕಿನಲ್ಲಿ ಹೆಚ್ಚು (999.80 ಹೆಕ್ಟೆರ್ ಪ್ರದೇಶ) ಹಾನಿಗೊಳಗಾಗಿದೆ. ಜಿಲ್ಲೆಯಲ್ಲಿ 1,805.53 ಹೆಕ್ಟೆರ್ ಪ್ರದೇಶದ ಬೆಳೆಹಾನಿ ಕುರಿತು ವರದಿಯಾಗಿದೆ ಎಂದರು.

    ಕೃಷಿ ಇಲಾಖೆಯಿಂದ ರಿಯಾಯತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ.50 ರಿಯಾಯತಿ ಹಾಗೂ ಪಜಾ, ಪಪಂ ರೈತರಿಗೆ ಶೇ.75 ರಿಯಾಯತಿ ದರದಲ್ಲಿ ಗರಿಷ್ಠ ಎರಡು ಹೆಕ್ಟೆರ್‌ಗಾಗಿ ಬೀಜಗಳನ್ನು ಪೂರೈಸಲಾಗುವುದು. 2022-23ನೇಸಾಲಿನಲ್ಲಿ ಮುಂಗಾರು ಹಂಗಾಮಿಗಾಗಿ 5,445.73 ಕ್ವಿಂಟಾಲ್ ಬೀಜವನ್ನು 26,155 ಫಲಾನುಭವಿಗಳಿಗೆ ನೀಡಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts