More

    ರಾಜಕೀಯ ಮೀಸಲಾತಿಗಾಗಿ ಚಿಂತನ-ಮಂಥನ

    ರಾಯಚೂರು: ಅಂಗವಿಕಲರಿಗೆ ರಾಜಕೀಯ ಮೀಸಲಾತಿ ನೀಡಲು ಆಗ್ರಹಿಸಿ ಮಾ.5 ಮತ್ತು 6ರಂದು ಬೆಂಗಳೂರಿನಲ್ಲಿ ಚಿಂತನ-ಮಂಥನ ಸಭೆ ಆಯೋಜಿಸಿದ್ದು, ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಂಗವಿಕಲರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಶಿವಗೇನಿ ಅತ್ತನೂರು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. 2016ರಲ್ಲಿ ಸರ್ಕಾರ ಅಂಗವಿಕಲರ ಕಾಯ್ದೆ ರೂಪಿಸಿ ರಾಜಕೀಯ ಮೀಸಲಾತಿ ನೀಡಬೇಕೆಂದು ಉಲ್ಲೇಖಿಸಿದ್ದು, ಅದು ಪಾಲನೆಯಾಗುತ್ತಿಲ್ಲ. ರಾಜಕೀಯ ಮೀಸಲಾತಿ ಜಾರಿಗೊಳಿಸುವಂತೆ ಸರ್ಕಾರದ ಗಮನ ಸೆಳೆಯಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳ ಅಂಗವಿಕಲರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗವಿಕಲರಿಗೆ ಕಾನೂನು ಬದ್ಧವಾಗಿ ನೀಡಬೇಕಾಗಿರುವ ಅನುದಾನ ನೀಡುತ್ತಿಲ್ಲ. ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಅಂಗವಿಕಲರನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಯಾವುದೇ ಯೋಜನೆ, ವಿಶೇಷ ಅನುದಾನ ಘೋಷಣೆ ಮಾಡಿಲ್ಲ ಎಂದು ಶಿವಗೇನಿ ಅತ್ತನೂರು ದೂರಿದರು.

    ಸಂಘದ ಸದಸ್ಯ ಶಿವಶಂಕರ ಬಳೆ ಮಾತನಾಡಿ, 1996ರ ಬಜೆಟ್‌ನಲ್ಲಿ ಅಂಗವಿಕಲರಿಗೆ ಯೋಜನೆಗಳನ್ನು ರೂಪಿಸಿ ಅನುದಾನ ನೀಡಲಾಯಿತು. ಆದರೆ, ನಂತರ ಬಂದ ಸರ್ಕಾರಗಳು ಅನುದಾನ ಕಡಿತಗೊಳಿಸುತ್ತಿವೆ. ಅಂಗವಿಕಲರನ್ನು ರಾಜಕೀಯವಾಗಿ ಪ್ರತಿನಿಧಿಸುವವರೇ ಇಲ್ಲದಂತಾಗಿದೆ. ಮೀಸಲಾತಿ ನೀಡುವಂತೆ ಇಲಾಖೆ ಆಯುಕ್ತರು ಹಾಗೂ ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಪದಾಧಿಕಾರಿಗಳಾದ ಹೊನ್ನಪ್ಪ, ಭೀಮೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts