More

    ವಚನಕಾರರ ಪ್ರಭಾವದಿಂದ ಸತ್ವಯುತ ಸಾಹಿತ್ಯ

    ರಾಯಚೂರು: ಎಲ್ಲ ಪ್ರಕಾರದ ಸಾಹಿತ್ಯದ ಮೇಲೆ ವಚನಕಾರರ ದಟ್ಟ ಪ್ರಭಾವ ಬೀರಿದೆ. ರಮೇಶಬಾಬು ಯಾಳಗಿ ಸಾಹಿತ್ಯದ ಮೇಲೆ ವಚನಕಾರರ ಪ್ರಭಾವ ಬೀರಿದ್ದರಿಂದ ಸತ್ವಯುತ ಸಾಹಿತ್ಯ ರಚನೆಗೆ ಕಾರಣವಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಿ.ಎಂ.ಶರಭೇಂದ್ರಯ್ಯಸ್ವಾಮಿ ಹೇಳಿದರು.

    ಸ್ಥಳೀಯ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗುರುವಾರ ಸಂಜೆ ಏರ್ಪಡಿಸಿದ್ದ ಕಸಾಪ ಸಂಸ್ಥಾಪನಾ ದಿನಾಚರಣೆ ಹಾಗೂ ‘ಹಿಮದೊಳಗಿನ ಬೆಂಕಿ’, ಆಧುನಿಕ ವಚನ ಸಂಕಲನ ‘ವಚನಸಿರಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾಳಗಿಯವರ ಕೃತಿಗಳಲ್ಲಿ ಸಾಮಾಜಿಕ ಕಾಳಜಿ, ಕೌಟುಂಬಿಕ ಪ್ರೀತಿ ಎದ್ದು ಕಾಣುತ್ತದೆ ಎಂದರು.

    ಹಿರಿಯ ಸಾಹಿತಿ ವೀರ ಹನುಮಾನ ಮಾತನಾಡಿ, ಯಾಳಗಿ ಎಲ್ಲ ಪ್ರಕಾರದ ಸಾಹಿತ್ಯದಲ್ಲಿ ಕೃಷಿಯನ್ನು ಮಾಡಿದ್ದು, ವ್ಯಕ್ತಿತ್ವದಿಂದ ಬರೆದಂತೆ ಬದುಕುವ ಮಾದರಿ ಬರಹಗಾರರಾಗಿದ್ದಾರೆ. ಜತೆಗೆ ಉತ್ತಮ ವಾಗ್ಮಿಗಳಾಗಿದ್ದಾರೆ ಎಂದರು. ಸಾಹಿತಿ ಡಾ.ರಾಜಶ್ರೀ ಕಲ್ಲೂರಕರ್ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಅಧ್ಯಕ್ಷತೆ ವಹಿಸಿದ್ದರು. ಎಸ್.ದೇವೇಂದ್ರಗೌಡ ವಿಶೇಷ ಉಪನ್ಯಾಸ ನೀಡಿದರು. ಡಾ.ಬಾಬು ಜಗಜೀವನರಾಮ್ ಪ್ರಶಸ್ತಿ ಪುರಸ್ಕೃತ ಸಿ.ದಾನಪ್ಪ, ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಚನ್ನಬಸವ ಹಿರೇಮಠ ಮತ್ತು ಕನ್ನಡಕ್ಕಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ, ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts