More

    ಅಡುಗೆ ಮನೆಯೇ ಆರೋಗ್ಯದ ಅರಮನೆ

    ರಾಯಚೂರು: ಆರೋಗ್ಯ ಹೊಂದುವುದು ಅವರವರ ಕೈಯಲ್ಲಿಯೇ ಇದೆ. ನಮ್ಮ ಆಹಾರ ಪದ್ಧತಿ ಉತ್ತಮವಾಗಿದ್ದಾಗ ಮಾತ್ರ ಆರೋಗ್ಯವೂ ಸದೃಢವಾಗಿರಲಿದೆ. ಅಡುಗೆ ಮನೆಯೇ ಆರೋಗ್ಯದ ಅರಮನೆ ಎಂದು ಡಾ.ವಸುಂಧರಾ ಭೂಪತಿ ಹೇಳಿದರು.

    ನಗರದ ಎಸ್‌ಎಸ್‌ಆರ್‌ಜಿ ಮಹಿಳಾ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಸಾಹಿತ್ಯ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಡುಗೆಯಲ್ಲಿ ಹೆಚ್ಚು ತರಕಾರಿ, ಸೊಪ್ಪು ಬಳಸುವುದರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮಗಳು ಇರುವುದಿಲ್ಲ. ಪ್ರಸ್ತುತ ನಿತ್ಯದ ಊಟದಲ್ಲಿ ಸಿರಿಧಾನ್ಯಗಳ ಬಳಕೆ ಅತಿಮುಖ್ಯ. ಜಂಕ್‌ಫುಡ್‌ಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾದರೆ ಸಿರಿಧಾನ್ಯಗಳು ದೇಹಕ್ಕೆ ಪೌಷ್ಟಿಕಾಂಶ ನೀಡುವುದರ ಜತೆಗೆ ಆರೋಗ್ಯವನ್ನು ಉತ್ತಮವಾಗಿಡುತ್ತದೆ ಎಂದು ತಿಳಿಸಿದರು.

    ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾಣಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಂದಾಪುರ, ವೈದ್ಯ ಡಾ.ಸುರೇಶ ಸಗರದ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ರಾಮಾಂಜನೇಯ, ಆಡಳಿತ ಮಂಡಳಿ ಪದಾಧಿಕಾರಿಗಳಾದ ಬಿ.ದೇವರೆಡ್ಡಿ, ವೀರ ಹನುಮಾನ, ಪ್ರಾಚಾರ್ಯರಾದ ವೆಂಕಟೇಶ ದೊಡ್ಡಮನಿ, ಡಾ.ವೆಂಕಟಪ್ಪ ನಾಯಕ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts