More

    ಕೆಇಎ ದಾಖಲೆ ಪರಿಶೀಲನೆ ಮುಂದೂಡಿ

    ರಾಯಚೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸುತ್ತಿರುವ ಪಿಜಿ, ಸಿಇಟಿಗಾಗಿ ದಾಖಲಾ ಪರಿಶೀಲನಾ ಕಾರ್ಯ ಮುಂದೂಡಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸೋಮವಾರ ಮನವಿ ಸಲ್ಲಿಸಿತು.

    ಗುಲ್ಬರ್ಗಾ ವಿವಿಯ ಇನ್ನು 6ನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟಿಸಿಲ್ಲ. ಆದರೆ, ಕೆಇಎಯು ಪಿಜಿ, ಸಿಇಟಿಗಾಗಿ ದಾಖಲೆಗೆ ಪರಿಶೀಲನೆ ಮುಂದಾಗಿದೆ. ಅಲ್ಲದೆ, ಫಲಿತಾಂಶ ಪ್ರಕಟಿಸದ ಕಾರಣಕ್ಕೆ ಗುಲ್ಬರ್ಗಾದ ವಿವಿ ವಿದ್ಯಾರ್ಥಿಗಳ ದಾಖಲೆ ಪರಿಶೀಲನೆ ಮಾಡಲು ನಿರಾಕರಿಸಿದೆ. ಇದು ಯುವಕರ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಗುಲ್ಬರ್ಗಾ ವಿವಿಯು ಸರಿಯಾಗಿ ಪರೀಕ್ಷೆಗಳನ್ನು ನಡೆಸುತ್ತಿಲ್ಲ. ಹೀಗಾಗಿ ಫಲಿತಾಂಶ ಪ್ರಕಟಿಸಲು ವಿಳಂಬವಾಗುತ್ತಿದೆ. ಜ.15ರೊಳಗೆ ಪ್ರಕಟಿಸುವುದಾಗಿ ವಿವಿ ತಿಳಿಸಿದೆ. ಆದರೆ, 13ಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 13 ರಂದು ದಾಖಲೆಗಳ ಪರಿಶೀಲನೆ ಮಾಡುವ ಕೊನೆಯ ದಿನವಾಗಿದೆ. 1500 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪರೀಕ್ಷೆ ಬರೆದಿದ್ದು, ಫಲಿತಾಂಶ ವಿಳಂಬದಿಂದಾಗಿ ಭವಿಷ್ಯ ಅತಂತ್ರದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

    10ರ ಒಳಗೆ ಫಲಿತಾಂಶ ಪ್ರಕಟ ಮಾಡಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಾಖಲೆಗಳ ಪರಿಶೀಲನೆ ದಿನವನ್ನ್ನು ಮುಂದೂಡಬೇಕು. ಈ ಕುರಿತು ಸರ್ಕಾರ ಪ್ರಾಧಿಕಾರಕ್ಕೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts