More

    ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆ

    ರಾಯಚೂರು: ನಗರದ ಎಪಿಎಂಸಿ ಆವರಣದಲ್ಲಿ ಮುನ್ನೂರು ಕಾಪು ಸಮಾಜದಿಂದ ಜೂ.13 ರಿಂದ 15ರ ವರೆಗೆ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಆಯೋಜಿಸಲಾಗಿದ್ದು, ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಎ.ಪಾಪಾರೆಡ್ಡಿ ತಿಳಿಸಿದರು.

    ಜೂ.13ರಂದು ಕರ್ನಾಟಕದ ಎತ್ತುಗಳಿಗಾಗಿ 1.50 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ನಡೆಯಲಿದೆ. 1ನೇ (55 ಸಾವಿರ ರೂ.), 2ನೇ (45 ಸಾವಿರ ರೂ.), 3ನೇ (35 ಸಾವಿರ ರೂ.), 4ನೇ (25 ಸಾವಿರ ರೂ.) ಮತ್ತು 5ನೇ ಬಹುಮಾನ (20 ಸಾವಿರ ರೂ.) ನೀಡಲಾಗುತ್ತಿದೆ. ಜೂ.14ರಂದು ಅಖಿಲ ಭಾರತ ಮುಕ್ತ 2 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ನಡೆಯಲಿದೆ. 1ನೇ (70 ಸಾವಿರ ರೂ.), 2ನೇ (55 ಸಾವಿರ ರೂ.), 3ನೇ (45 ಸಾವಿರ ರೂ.), 4ನೇ (35 ಸಾವಿರ ರೂ.), 5ನೇ (30 ಸಾವಿರ ರೂ.) ಮತ್ತು 6ನೇ ಬಹುಮಾನ (20 ಸಾವಿರ ರೂ.) ನೀಡಲಾಗುವುದು.

    ಜೂ.15ರಂದು ಅಖಿಲ ಭಾರತ ಮುಕ್ತ 2.50 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರಥಮ (80 ಸಾವಿರ ರೂ.), 2ನೇ (65 ಸಾವಿರ ರೂ.), 3ನೇ (55 ಸಾವಿರ ರೂ.), 4ನೇ (45 ಸಾವಿರ ರೂ.), 5ನೇ (35 ಸಾವಿರ ರೂ.), 6ನೇ ಬಹುಮಾನ (25 ಸಾವಿರ ರೂ.) ನೀಡಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಜೂ.15ರಂದು 5ಕ್ಕೆ ಕುಸ್ತಿ ಬಲ ಪ್ರದರ್ಶನ ನಡೆಯಲಿದೆ. 25ಕ್ಕೂ ಹೆಚ್ಚು ಪೈಲ್ವಾನರು ಭಾಗವಹಿಸಲಿದ್ದು, ವಿಜೇತರಿಗೆ ಒಂದು ಲಕ್ಷ ರೂ. ನಗದು ಬಹುಮಾನ ನೀಡಲಾವುದು ಎಂದರು. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರು ಮಾಹಿತಿಗೆ 9845309596 ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts