ಮಂಡ್ಯ ರೈತನಿಗೆ ಬಂಪರ್​: ಹಳ್ಳಿಕಾರ್ ತಳಿಯ ಈ ಎತ್ತು ಮಾರಾಟವಾದ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

23

ಮಂಡ್ಯ: ಅಬ್ಬಾಬ್ಬಾ ಅಂದರೆ ಒಂದು ಎತ್ತಿನ ಬೆಲೆ 50 ಸಾವಿರದಿಂದ 1 ಲಕ್ಷದವರೆಗೂ ಇರುತ್ತದೆ. ಆದರೆ, ಇಲ್ಲೊಂದು ಎತ್ತು, ಮಾರಾಟವಾದ ಬೆಲೆಯನ್ನು ಕೇಳಿದರೆ ನಿಮ್ಮ ಹುಬ್ಬೇರುವುದಂತೂ ಖಚಿತ. ಇಂಥದ್ದೊಂದು ವಿಶೇಷ ಕ್ಷಣಕ್ಕೆ ಸಕ್ಕರೆ ನಾಡು ಮಂಡ್ಯ ಸಾಕ್ಷಿಯಾಗಿದೆ.

9 ಲಕ್ಷ 20 ಸಾವಿರ ರೂಪಾಯಿ

ಶ್ರೀರಂಗಪಟ್ಟಣದ ಶ್ರೀನಿವಾಸ ಅಗ್ರಹಾರ ಗ್ರಾಮದ ನವೀನ್ ಎಂಬುವರು ಸಾಕಿದ್ದ ಹಳ್ಳಿಕಾರ್ ತಳಿಯ ಒಂಟಿ ಎತ್ತು ಬರೋಬ್ಬರಿ 9 ಲಕ್ಷ 20 ಸಾವಿರ ರೂಪಾಯಿಗೆ ಮಾರಾಟವಾಗಿದೆ. ಇದನ್ನು ನೋಡಿ ಜನರು ಬಾಯಿ ಮೇಲೆ ಬೆರಳಿಡುವಂತೆ ಆಗಿದೆ.

ಇದನ್ನೂ ಓದಿ: ಸಹೋದರನ ಆರೈಕೆಗೆ ನೇಮಿಸಿದ ಮಹಿಳೆಯಿಂದ ಯುವಿ ತಾಯಿಗೆ ಬೆದರಿಕೆ: ವಂಚಕಿ ಸಿಕ್ಕಿಬಿದ್ದಿದ್ದೇ ರೋಚಕ!

ವೇಗದಿಂದಲೇ ಪ್ರಸಿದ್ಧಿ

ಈ ಎತ್ತನ್ನು ತಮಿಳುನಾಡು ಮೂಲದ ಸರವಣಪಟ್ಟಿ ಗ್ರಾಮದ ಸಿರವೈ ತಂಬಿ ಎಂಬುವರು 9.2 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಬ್ರಾಂಡ್ ಜಾಗ್ವಾರ್ ಹೆಸರಿನ ಈ ಎತ್ತು ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಎತ್ತಿನ ಗಾಡಿ ರೇಸ್​ನಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿಗಳನ್ನು ಗಳಿಸಿದೆ. ತಮಿಳುನಾಡಿನಲ್ಲಿ ನಡೆದ ರೇಸ್​ನಲ್ಲಿ ಈ ಎತ್ತು ತನ್ನ ವೇಗದಿಂದಲೇ ಸಾಕಷ್ಟು ಪ್ರಸಿದ್ದಿ ಪಡೆದಿತ್ತು.

ಅದ್ಧೂರಿ ಬೀಳ್ಕೊಡಿಗೆ

ರೇಸ್​ನಲ್ಲಿ ಈ ಎತ್ತಿನ ವೇಗ ನೋಡಿ ಭಾರೀ ಮೊತ್ತವನ್ನು ಕೊಟ್ಟು ಸಿರವೈ ತಂಬಿ ಎಂಬುವರು ಖರೀದಿ ಮಾಡಿದ್ದಾರೆ. ಈ ಹಿಂದೆ 1.2 ಲಕ್ಷ ರೂಪಾಯಿಗೆ ಮಂಡ್ಯದ ಇಂಡವಾಳು ಗ್ರಾಮದ ಅಜಿತ್​ ಅವರಿಂದ ನವೀನ್​ ಖರೀದಿ ಮಾಡಿದ್ದರು. ಇದೀಗ ದಾಖಲೆ ಬೆಲೆಗೆ ಮಾರಾಟವಾದ ಈ ಎತ್ತುನ್ನು ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆ ಮಾಡಿ ಬೀಳ್ಕೊಟ್ಟಿದ್ದಾರೆ.

ಇದನ್ನೂ ಓದಿ: ಬಿಪಿಎಲ್ ಹೆಲ್ತ್ ಕಾರ್ಡ್| ಹೊಸ ಅರ್ಜಿದಾರರಿಗೆ ಸಿಹಿ ಸುದ್ದಿ; ಚಿಕಿತ್ಸಾ ಸೌಲಭ್ಯಕ್ಕೆ ಬಳಕೆ

ಬೀಳ್ಕೊಡಿಗೆ ವೇಳೆ ಎತ್ತಿಗೆ ಆರತಿ ಬೆಳಗಿ, ಕಾಲಿಗೆ ಬಿದ್ದು ನಮಸ್ಕರಿಸಿ ಭಾರದ ಮನಸ್ಸಿನಿಂದಲೇ ನವೀನ್​ ಕುಟುಂಬಸ್ಥರು ಕಳುಹಿಸಿಕೊಟ್ಟಿದ್ದಾರೆ. ದುಬಾರಿ ಬೆಲೆಗೆ ಮಾರಾಟವಾಗುವ ಮೂಲಕ ಈ ಜಾಗ್ವಾರ್​, ಜನರು ಹುಬ್ಬೇರಿಸುವಂತೆ ಮಾಡಿದೆ. (ದಿಗ್ವಿಜಯ ನ್ಯೂಸ್​)

ಅವಿಶ್ವಾಸ ನೋಟಿಸ್ ಸ್ವೀಕಾರ; ಸದನ ಮುಂದುವರಿಕೆ

ನೀವು ಆಗಾಗ ಮಲಬದ್ಧತೆಯಿಂದ ಬಳಲುತ್ತಿರಾ? ತಕ್ಷಣ ಪರಿಹಾರಕ್ಕಾಗಿ ಇಲ್ಲಿವೆ ಮಹತ್ವದ ಸಲಹೆಗಳು

ಚಂದ್ರಯಾನಕ್ಕೆ ದೇವಯಾನದ ಶ್ರೀರಕ್ಷೆ ಅದೇ ವಿಜ್ಞಾನ…