More

    ಅಧ್ಯಾತ್ಮದಿಂದ ಸಂತೃಪ್ತ ಜೀವನ ಸಾಧ್ಯ, ಆಕಾಶವಾಣಿ ಕೇಂದ್ರದ ನಿವೃತ್ತ ಮುಖ್ಯಸ್ಥ ಡಾ.ಬಿ.ಎಂ.ಶರಭೇಂದ್ರಸ್ವಾಮಿ ಹೇಳಿಕ

    ರಾಯಚೂರು: ನಮ್ಮ ಅಂತರಂಗದ ನಿಯಂತ್ರಣದಿಂದ ಷಟ್‌ಸ್ಥಳಗಳನ್ನು ಮುಟ್ಟಲು ಸಾಧ್ಯವಾಗಲಿದೆ. ಆಧ್ಯಾತ್ಮಿಕ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಸಂತೃಪ್ತಿಯ ಜೀವನ ಸಾಗಿಸಲು ಸಾಧ್ಯ ಎಂದು ಆಕಾಶವಾಣಿ ಕೇಂದ್ರದ ನಿವೃತ್ತ ಮುಖ್ಯಸ್ಥ ಡಾ.ಬಿ.ಎಂ.ಶರಭೇಂದ್ರಸ್ವಾಮಿ ಹೇಳಿದರು.

    ಬಸವಕೇಂದ್ರದಲ್ಲಿ ಸನ್ಮಾನ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು. ಬಸವಾದಿ ಶರಣರು ನೀಡಿದ ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಳಗನ್ನು ಮುಟ್ಟಲು ಬಸವ ಕೇಂದ್ರಗಳು ಸಹಕಾರಿಯಾಗಿವೆ ಎಂದರು.

    ಇದನ್ನೂ ಓದಿ: ಬಸವಾದಿ ಶರಣರಿಂದ ಕಾಯಕ ಜೀವಿಗಳಿಗೆ ಗೌರವ

    ನಿವೃತ್ತ ಪ್ರಾಚಾರ್ಯ ಡಾ.ಪರಮೇಶ್ವರಪ್ಪ ಸಾಲಿಮಠ ಮಾತನಾಡಿ, ಬಸವಾದಿ ಶರಣರ ಚಿಂತನೆಗಳು ಇಂದಿಗೂ ಮಹತ್ವ ಪಡೆದಿದ್ದು, ಅವರ ಚಿಂತನೆ, ತತ್ತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು.

    ಡಾ.ಬಿ.ಎಂ.ಶರಭೇಂದ್ರಸ್ವಾಮಿ, ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ವಿ.ಜಿ.ಬಾವಲತ್ತಿ ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು, ಕಾರ್ಯದರ್ಶಿ ಚೆನ್ನಬಸವಣ್ಣ ಮಹಾಜನಶೆಟ್ಟಿ, ಪದಾಧಿಕಾರಿಗಳಾದ ಸಿ.ಬಿ.ಪಾಟೀಲ್, ಚನ್ನಬಸವ, ವೆಂಕಣ್ಣ ಆಶಾಪುರ, ಸರೋಜಮ್ಮ, ಲಕ್ಷ್ಮೀ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts