More

    ಬಸವಾದಿ ಶರಣರಿಂದ ಕಾಯಕ ಜೀವಿಗಳಿಗೆ ಗೌರವ

    ಸಿಂಧನೂರು: ಕಸಾಪದಿಂದ ಕಾಯಕ ಜೀವಿಗಳನ್ನು ಗುರುತಿಸಿ, ಗೌರವಿಸಿರುವುದು ಶ್ಲಾಘನೀಯ ಕಾರ್ಯ ಎಂದು ಬಸವಕೇಂದ್ರ ಜಿಲ್ಲಾಧ್ಯಕ್ಷ ಪಿ.ವೀರಭದ್ರಪ್ಪ ಕುರುಕುಂದಿ ಹೇಳಿದರು.

    ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಜಗತ್ತಿನಲ್ಲಿ ದೊಡ್ಡವರು, ಅನ್ನದಾತರು, ಸೈನಿಕರು, ಕಾಯಕ ಜೀವಿಗಳಾದ ಮಡಿವಾಳ, ಹಡಪದ, ಸಮಗಾರ, ನಿರ್ವಾಹಕ, ಅಂಚೆ ಚೀಟಿ ಹಂಚುವವರು, ಶಿಕ್ಷಕ, ಆರಕ್ಷಕ, ವೈದ್ಯರು ಹಾಗೂ ಕಾರ್ಮಿಕರನ್ನು ಗೌರವಿಸಿರುವುದು ಹೆಮ್ಮೆಯ ವಿಷಯ. 12ನೇ ಶತಮಾನದ ಬಸವಾದಿ ಶರಣರು ಸಹ ಇಂಥ ಕಾರ್ಯವನ್ನು ಮಾಡಿದ್ದರು ಎಂದರು.

    ಕಸಾಪ ನಡೆದು ಬಂದ ದಾರಿ ಕುರಿತು ಉಪನ್ಯಾಸಕ ಶರಣಪ್ಪ ಹೊಸಳ್ಳಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಅಸ್ಮಿತೆ ಹೊಂದಿರುವ ಸಂಸ್ಥೆಯಾಗಿದೆ. ಕಸಾಪ ಅಧಿಕ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಣಿ ಮಾಡುವ ಮೂಲಕ ತನ್ನ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಂಡಿದೆ ಎಂದು ಹೇಳಿದರು.

    ಡಾ. ಶರೀಫ್ ಹಸ್ಮಕಲ್ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ಸಾವಿತ್ರಿ ಎಲೆಕೂಡ್ಲಗಿ, ಸಂಗೀತ ಸಾರಂಗಮಠ, ಶಾಂತಾ ಒಳಗಿನಮನಿ, ಶರಭಯ್ಯ ಸ್ವಾಮಿ ಹಿರೇಮಠ, ಯಮನೂರಪ್ಪ ಕುರುಕುಂದಿ, ಮುಕೇಶ್ ಭೋಗಾಪೂರ, ದುರುಗಪ್ಪ ಗುಡದೂರ ಕವಿತೆ ವಾಚನ ಮಾಡಿದರು.

    ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಡಿ.ಎಚ್.ಕಂಬಳಿ, ಗಂಗಾವತಿಯ ಸಾಹಿತಿ ಡಾ.ಶಿವಕುಮಾರ ಮಾಲಿ ಪಾಟೀಲ ಅವರು ರಚಿಸಿದ ನನ್ನ ಮತ ಮಾರಾಟಕ್ಕಿಲ್ಲ ಕೃತಿಯನ್ನು ಬಿಡುಗಡೆಗೊಳಿಸಿದರು. ಯದ್ದಲದೊಡ್ಡಿ ಮಹಾಲಿಂಗಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ರಾಮಣ್ಣ ಬೇರ‌್ಗಿ, ನಿವೃತ್ತ ಪ್ರಾಚಾರ್ಯ ಶಾಶ್ವತಸ್ವಾಮಿ ಮುಕ್ಕುಂದಿಮಠ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಸುಮಂಗಲಾ ಚಿಂಚರಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts