More

    ವೀರಶೈವ ಲಿಂಗಾಯತ ಎರಡೂ ಒಂದೇ; ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಹೇಳಿಕೆ

    ಸಿರಿ ಬೆಳಕು ಪ್ರಶಸ್ತಿ ಪ್ರದಾನ

    ರಾಯಚೂರು: ವೀರಶೈವ ಲಿಂಗಾಯತರು ಒಳ ಪಂಗಡಗಳನ್ನು ಮರೆತು ಒಗ್ಗಟ್ಟಾದರೆ ಯಾರನ್ನೂ ಏನೂ ಕೇಳಬೇಕಾಗಿಲ್ಲ. ಎಲ್ಲರೂ ನಮ್ಮಲ್ಲಿಗೆ ಬಂದು ನಾವು ಕೇಳಿದ್ದನ್ನು ಮಾಡಿಕೊಡುತ್ತಾರೆ. ಅಷ್ಟು ಶಕ್ತಿ ಒಗ್ಗಟ್ಟಲ್ಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಹೇಳಿದರು.

    ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಹಾಸಭಾ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಬಯಲ ಸಿರಿ ಬೆಳಕು ಪ್ರಶಸ್ತಿ ಪ್ರದಾನ ಹಾಗೂ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಎಲ್ಲ ಪಕ್ಷಗಳ ನಾಯಕರು ಸಮುದಾಯದ ಏಳಿಗೆ ಬಗ್ಗೆ ಮಾತನಾಡುತ್ತಾರೆ. ಅವರ ಮೇಲೆ ಅವಲಂಬಿತರಾಗದೆ ನಮ್ಮ ಶಕ್ತಿ ತೋರಿಸುವ ಕೆಲಸವಾಗಬೇಕು ಎಂದರು.

    ವೀರಶೈವ ಮತ್ತು ಲಿಂಗಾಯತ ಎರಡು ಒಂದೇ ಆಗಿದ್ದು, ಕೆಲವು ತಾತ್ವಿಕ ವಿಚಾರಗಳನ್ನು ಮುಂದಿಟ್ಟು ಕೆಲವರು ಸಮುದಾಯವನ್ನು ಒಡೆಯುವ ಕೆಲಸ ಮಾಡಿದ್ದರು. ಇದರಿಂದ ಸಮುದಾಯಕ್ಕೂ ಪೆಟ್ಟು ಬಿತ್ತು. ಮಹಾಸಭಾದಿಂದ ಹೊರಹೋಗಿರುವವರನ್ನು ಕರೆತರುವ ಕೆಲಸ ನಡೆಯುತ್ತಿದ್ದು, ಜಿಲ್ಲಾ ಮತ್ತು ತಾಲೂಕು ಘಟಕಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts