More

    15 ದಿನದೊಳಗೆ ಮಾವಿನಕೆರೆ ಕಾಮಗಾರಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಡಿಸಿ ಚಂದ್ರಶೇಖರ ನಾಯಕ ಸೂಚನೆ

    ರಾಯಚೂರು: ಮಾವಿನ ಕೆರೆ ಅಭಿವೃದ್ಧಿ ಕಾರ್ಯದ ಕುರಿತು ಸಂಪೂರ್ಣ ವರದಿಯನ್ನು ಸೆ.30ರೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾವಿನ ಕೆರೆ ಅಭಿವೃದ್ಧಿ ಕಾಮಗಾರಿ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರದ ಮಾವಿನಕೆರೆ ಹಾಗೂ ಉದ್ಯಾನವನ್ನು ಅಭಿವೃದ್ಧಿಪಡಿಸಲು ಕೈಗೊಂಡಿರುವ ಯೋಜನೆಗಳನ್ನು 15 ದಿನಗಳೊಳಗಾಗಿ ಸಲ್ಲಿಸುವಂತೆ ತಿಳಿಸಿದರು.

    ಬೆಂಗಳೂರಿನ ಲಾಲ್‌ಬಾಗ್ ಉದ್ಯಾನದ ವಿನ್ಯಾಸಕಾರರೊಂದಿಗೆ ಚರ್ಚಿಸಿ, ಅಭಿವೃದ್ಧಿಪಡಿಸಿದ ನಂತರ ಕಾಣುವ ಕೆರೆಯ ಪರಿಪೂರ್ಣ ಚಿತ್ರಣವನ್ನು 3ಡಿ ವಿನ್ಯಾಸದೊಂದಿಗೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಬೇಕು. ಪ್ರಾಧಿಕಾರದವರು ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದರು.

    ನಂತರ ಕೆರೆಯನ್ನು ನೈಜತೆ ಹಾಗೂ ನಿಖರವಾಗಿ ಸರ್ವೇ ಮಾಡಿ, ಕೆರೆ ಒತ್ತುವರಿ ತೆರವುಗೊಳಿಸಿ ಸುತ್ತಲೂ ಹದ್ದುಬಸ್ತು ಮಾಡುವಂತೆ ನಗರಸಭೆ, ತಹಸೀಲ್ದಾರ್ ಹಾಗೂ ಭೂ ಸಮೀಕ್ಷೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    25 ಕೋಟಿ ರೂ. ವೆಚ್ಚದಲ್ಲಿ ಮಾವಿನೆ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲು ಈಗಾಗಲೇ ತಿರ್ಮಾನ ಕೈಗೊಳ್ಳಲಾಗಿದ್ದು, ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಕೆರೆಯ ಮಧ್ಯೆ ಬ್ರಿಡ್ಜ್ ನಿರ್ಮಿಸುವ ಯೋಜನೆ ಇದೆ. ಅದಕ್ಕೂ ಮೊದಲು ಕೆರೆ ಸುತ್ತಲೂ ವಿದ್ಯುತ್ ದೀಪ, ಶೌಚಗೃಹ ಸೇರಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

    ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ, ತಹಸೀಲ್ದಾರ್ ರಾಜಶೇಖರ, ಪೌರಯುಕ್ತ ಗುರುಲಿಂಗಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಯಪಾಲ ರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts