More

    ಸರ್ಕಾರಿ ಬಂಗಲೆ ಖಾಲಿ ಮಾಡಿ: ಕೇಂದ್ರದ ನೋಟಿಸ್​ಗೆ​​​ ರಾಹುಲ್​ ಗಾಂಧಿ ಪ್ರತಿಕ್ರಿಯೆ ಹೀಗಿದೆ…

    ನವದೆಹಲಿ: ಸಂಸತ್​ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ನೀಡಲಾಗಿದ್ದ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಸೋಮವಾರ ನೋಟಿಸ್​​ ನೀಡಲಾಗಿತ್ತು.

    ಇನ್ನು ತಮಗೆ ನೋಟಿಸ್​ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ರಾಹುಲ್​ ಸರ್ಕಾರಿ ಬಂಗಲೆಯನ್ನ ಖಾಲಿ ಮಾಡುವುದಾಗಿ ತಿಳಿಸಿದ್ದಾರೆ.

    ಈ ಕುರಿತು ಲೋಸಕಭೆ ಕಾರ್ಯದರ್ಶಿ ಮೋಹಿತ್​ ರಾಜನ್​ಗೆ ಪತ್ರ ಬರೆದಿರುವ ರಾಹುಲ್​ ಕಳೆದ ನಾಲ್ಕು ಅವಧಿಗಳಲ್ಲಿ ಲೋಕಸಭೆಯ ಚುನಾಯಿತ ಸದಸ್ಯನಾಗಿ ನಾನು ಇಲ್ಲಿ ಕಳೆದ ಸಂತೋಷದ ಸಮಯ ಜನರ ಆದೇಶವಾಗಿತ್ತು. ನನ್ನ ಹಕ್ಕುಗಳಿಗೆ ಧಕ್ಕೆಯಾಗದಂತೆ ನಿಮ್ಮ ಪತ್ರದಲ್ಲಿ ತಿಳಿಸಿರುವ ವಿಚಾರಕ್ಕೆ ಬದ್ಧನಾಗಿರುತ್ತೇನೆ ಎಂದು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

    ಸರ್ಕಾರಿ ಬಂಗಲೆ ಖಾಲಿ ಮಾಡಿ: ಕೇಂದ್ರದ ನೋಟಿಸ್​ಗೆ​​​ ರಾಹುಲ್​ ಗಾಂಧಿ ಪ್ರತಿಕ್ರಿಯೆ ಹೀಗಿದೆ...

    ಇದನ್ನೂ ಓದಿ: ಸಂಸತ್​ ಸ್ಥಾನದಿಂದ ರಾಹುಲ್​ ಗಾಂಧಿ ಅನರ್ಹ; ಅಧಿಕೃತ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ನೋಟಿಸ್​

    ರಾಹುಲ್​ ಗಾಂಧಿ ಹಾಲಿ ಲುಟೆನ್ಸ್​ ಪ್ರದೇಶದ ತುಘಲಕ್​ ಲೇನ್​​ನಲ್ಲಿರುವ ನಂ 12 ಬಂಗಲೆಯಲ್ಲಿ ವಾಸವಿದ್ದಾರೆ. 2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮೋದಿ ಉಪನಾಮದ ಬಗ್ಗೆ ವ್ಯಂಗ್ಯವಾಡಿದ್ದ ಆರೋಪದ ಮೇಲೆ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಳೆದ ವಾರ ಸೂರತ್​ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿತ್ತು.

    ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ರಾಹುಲ್​ ಗಾಂಧಿ ಅವರನ್ನು ಸಂಸತ್​ ಸದಸ್ಯತ್ವದಿಂದ ಅನರ್ಹಗೊಳಿ ಲೋಕಸಭಾ ಕಾರ್ಯಾಲಯ ಆದೇಶ ಹೊರಡಿಸಿತ್ತು. ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ತಿಂಗಳೊಳಗೆ ಅಧಿಕೃತ ಸರ್ಕಾರಿ ಬಂಗಲೆಯನ್ನ ಖಾಲಿ ಮಾಡಬೇಕು ಎಂದು ಸೋಮವಾರ ನೋಟಿಸ್​​ ಜಾರಿ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts