More

    ಇಂದು ಲಖನೌ ಸೂಪರ್​ಜೈಂಟ್ಸ್​-ಪಂಜಾಬ್​ ಕಿಂಗ್ಸ್​ ಮುಖಾಮುಖಿ; ಗೆಲುವಿನ ಖಾತೆ ತೆರೆಯುವುದೇ ಕೆಎಲ್​ ರಾಹುಲ್​ ಬಳಗ?

    ಲಖನೌ: ಆಲ್ರೌಂಡ್​ ಪ್ರದರ್ಶನದ ಮೂಲಕ ಮೊದಲ ಜಯದ ನಿರೀೆಯಲ್ಲಿರುವ ಕನ್ನಡಿಗ ಕೆಎಲ್​ ರಾಹುಲ್​ ಸಾರಥ್ಯದ ಲಖನೌ ಸೂಪರ್​ಜೈಂಟ್ಸ್​ ತಂಡ ಐಪಿಎಲ್​&17ರಲ್ಲಿ ಏಕನಾ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡದ ಸವಾಲು ಎದುರಿಸಲಿದೆ. ಟೂರ್ನಿಯ ಆರಂಭಿಕ 9 ಪಂದ್ಯಗಳಲ್ಲಿ ಆತಿಥೇಯ ಗೆಲುವು ಸಾಧಿಸಿದ್ದು, ಲಖನೌ ತಂಡ ತವರಿನಲ್ಲಿ ಖಾತೆ ತೆರೆಯುವ ತವಕದಲ್ಲಿದೆ.

    ಮೊದಲ ಲೀಗ್​ ಪಂದ್ಯದಲ್ಲಿ ಲಖನೌ ತಂಡ ರಾಜಸ್ಥಾನ ಎದುರು 20 ರನ್​ಗಳಿಂದ ಸೋಲು ಅನುಭವಿಸಿದ್ದರೆ, ಮೊದಲ ಪಂದ್ಯದಲ್ಲಿ ಗೆದ್ದು 2ನೇ ಪಂದ್ಯದಲ್ಲಿ ಆರ್​ಸಿಬಿ ಎದುರು ಆಘಾತ ಕಂಡಿರುವ ಶಿಖರ್​ ಧವನ್​ ಬಳಗ ಜಯದ ಹಳಿಗೆ ಮರಳುವ ವಿಶ್ವಾಸದಲ್ಲಿದೆ. ಟಿ20 ವಿಶ್ವಕಪ್​ಗೆ ಟೀಮ್​ ಇಂಡಿಯಾದ ವಿಕೆಟ್​ ಕೀಪರ್​ ಸ್ಥಾನದ ರೇಸ್​ನಲ್ಲಿರುವ ರಾಹುಲ್​, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ (ಎನ್​ಸಿಎ) ವೈದ್ಯರ ಸಲಹೆ ನಡುವೆಯೂ ಕೀಪಿಂಗ್​ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಗಾಯದ ಬಳಿಕ ಆಡಿದ ಮೊದಲ ಪಂದ್ಯದಲ್ಲಿ ಅರ್ಧಶತಕದ ಮೂಲಕ ಫಾರ್ಮ್​ಗೆ ಮರಳಿರುವ ರಾಹುಲ್​ಗೆ ಇತರ ಬ್ಯಾಟರ್​ಗಳ ಸಮರ್ಥ ಬೆಂಬಲಬೇಕಿದೆ. ಜತೆಗೆ ಟಿ20 ಟೀಮ್​ ಇಂಡಿಯಾಗೆ ಫಿನಿಷರ್​ ಸ್ಥಾನ ತುಂಬುವ ಅವಕಾಶವನ್ನು ಪಡೆಯುವ ಚಾಲೆಂಜ್​ ರಾಹುಲ್​ ಮುಂದಿದೆ.

    ಎಲ್​ಎಸ್​ಜಿಗೆ ಬ್ಯಾಟಿಂಗ್​ ಚಿಂತೆ
    ಮೊದಲ ಪಂದ್ಯದಲ್ಲಿ ನೀರಸ ಬ್ಯಾಟಿಂಗ್​ ನಿರ್ವಹಣೆ ಲಖನೌ ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಕ್ವಿಂಟನ್​ ಡಿಕಾಕ್​, ಕನ್ನಡಿಗ ದೇವದತ್​ ಪಡಿಕ್ಕಲ್​ ವೈಫಲ್ಯ ತಂಡಕ್ಕೆ ಹಿನ್ನಡೆ ತಂದಿತ್ತು. ರಾಹುಲ್​ ಅರ್ಧಶತಕ ಸಿಡಿಸಿ ಪುನರಾಗಮನ ಕಂಡರೂ ಪಂದ್ಯಕ್ಕೆ ಫಿನಿಷಿಂಗ್​ ಟಚ್​ ನೀಡುವಲ್ಲಿ ವಿಲರಾದರು. ಆರಂಭದಲ್ಲಿ ರಾಹುಲ್​ ನಿಧಾನಗತಿಯ ಬ್ಯಾಟಿಂಗ್​ ಹಿನ್ನಡೆ ಎನಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್​ ಕೃನಾಲ್​ ಪಾಂಡ್ಯ, ದೀಪಕ್​ ಹೂಡಾ ಅವರಿಂದ ನಿರೀತ ಪ್ರದರ್ಶನ ಮೂಡಿಬರಬೇಕಿದೆ. ಆಸೀಸ್​ ಆಲ್ರೌಂಡರ್​ ಮಾರ್ಕಸ್​ ಸ್ಟೋಯಿನಿಸ್​ ನಿರ್ವಹಣೆ ತಂಡಕ್ಕೆ ಪರಿಣಾಮಕಾರಿ ಎನಿಸಿದೆ. ವೇಗಿ ಮಾರ್ಕ್​ ವುಡ್​, ಡೇವಿಡ್​ ವಿಲ್ಲಿ ಅನುಪಸ್ಥಿತಿ ತಂಡಕ್ಕೆ ಕಾಡುತ್ತಿದೆ. ಮೊಹ್ಸಿನ್​ ಖಾನ್​, ನವೀನ್​ ಉಲ್​ ಹಕ್​ ಪ್ರಮುಖ ವೇಗಿಗಳಾಗಿದ್ದು, ವೆಸ್ಟ್​ ಇಂಡೀಸ್​ ಸೆನ್ಸೇಷನ್​ ಶಮರ್​ ಜೋಸೆಫ್​ ಪದಾರ್ಪಣೆ ನಿರೀಕ್ಷೆಯಲ್ಲಿದ್ದಾರೆ.

    ಪಂಜಾಬ್​ಗೆ ಆಲ್ರೌಂಡರ್ಸ್​ ಬಲ
    ನಾಯಕ ಶಿಖರ್​ ಧವನ್​ ಐಪಿಎಲ್​ನಲ್ಲಿ ಸಾಧಾರಣ ಸ್ಟ್ರೈಕ್​ರೇಟ್​ ಹೊಂದಿದ್ದು, ಪವರ್​ ಪ್ಲೇಯಲ್ಲಿ ಬಿರುಸಿನ ಬ್ಯಾಟಿಂಗ್​ ಅವಶ್ಯಕತೆ ಎಂದು ಸ್ವತ@ ಒಪ್ಪಿಕೊಂಡಿದ್ದಾರೆ. ಜಾನಿ ಬೇರ್​ಸ್ಟೋ ಕಳಪೆ ಫಾರ್ಮ್​ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಜಿತೇಶ್​ ಶರ್ಮ ಉಪನಾಯಕರಾದ ಬಳಿಕ ರನ್​ಬರ ಎದುರಿಸಿದ್ದಾರೆ. ಆಲ್ರೌಂಡರ್​ಗಳಾದ ಲಿಯಾಮ್​ ಲಿವಿಂಗ್​ಸ್ಟೋನ್​, ಸ್ಯಾಮ್​ ಕರನ್​ ಮೇಲೆ ಪಂಜಾಬ್​ ಹೆಚ್ಚು ಅವಲಂಬಿತವಾಗಿದೆ. ಬೌಲಿಂಗ್​ನಲ್ಲಿ ಕಗಿಸೊ ರಬಾಡಗೆ ಇತರ ವೇಗಿಗಳಿಂದ ಸಾಥ್​ ಬೇಕಿದೆ. ಅರ್ಷದೀಪ್​ ಸಿಂಗ್​ ಹಾಗೂ ಹರ್ಷಲ್​ ಪಟೇಲ್​ ಹಿಂದಿನ ಪಂದ್ಯದಲ್ಲಿ ದುಬಾರಿ ಎನಿಸಿದ್ದರು. ಅನುಭವಿ ಸ್ಪಿನ್ನರ್​ಗಳ ಕೊರತೆ ತಂಡಕ್ಕಿದೆ.

    ಮುಖಾಮುಖಿ: 3
    ಲಖನೌ: 2
    ಪಂಜಾಬ್​: 1
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಸಿನಿಮಾ

    ಮುಂಬೈ ಇಂಡಿಯನ್ಸ್​ ತಂಡದೊಳಗೆ ಎರಡು ಬಣ! ಹಾರ್ದಿಕ್​-ರೋಹಿತ್​ ಪರ ಗುಂಪುಗಳಲ್ಲಿ ಆಟಗಾರರ ವಿಭಜನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts