More

    ರಾಹುಲ್​ ಗಾಂಧಿ ಕೋಲಾರ ಪ್ರವಾಸ; ಮತ್ತೊಮ್ಮೆ ಮುಂದೂಡಿಕೆ

    ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಏಪ್ರಿಲ್​ 10ರಂದು ಕೋಲಾರದಲ್ಲಿ ನಡೆಯಬೇಕಿದ್ದ ಜೈ ಭಾರತ್​ ಸಮಾವೇಶವನ್ನು ಮುಂದೂಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

    ಈ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್​ ಏಪ್ರಿಲ್​ 10ರಂದು ಕೋಲಾರದಲ್ಲಿ ರಾಹುಲ್​ ಗಾಂಧಿ ಅವರು ಜೈ ಭಾರತ್​​ ಸಮಾವೇಶವನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಕಾರ್ಯಕ್ರಮವನ್ನು ಏಪ್ರಿಲ್​ 16ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

    ಎರಡು ಬಾರಿ ದಿನಾಂಕ ಬದಲು

    ಈ ಮೊದಲು ಏಪ್ರಿಲ್​ 5ರಂದು ಕೋಲಾರದಲ್ಲಿ ಸಮಾವೇಶ ನಡೆಸಲಾಗುವುದು ಎಂದು ಕಾಂಗ್ರೆಸ್​ ನಾಯಕರು ಹೇಳಿದ್ದರು. ಆ ನಂತರ ಏಪ್ರಿಲ್​ 10 ಎಂದು ಹೇಳಲಾಗಿತ್ತು.

    ಒಟ್ಟಾರೆಯಾಗಿ ಎರಡು ಬಾರಿ ದಿನಾಂಕ ಬದಲಿಸುವ ಕಾಂಗ್ರೆಸ್​​ ನಾಯಕರು ಇದೀಗ ಏಪ್ರಿಲ್​ 16ರಂದು ಸಮಾವೇಶ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಪಾಲ್ಗೊಳಲಿದ್ದಾರೆ ಎಂದು ಹೇಳಿದ್ಧಾರೆ.

    ಇದನ್ನೂ ಓದಿ: ತೆಲಂಗಾಣದ ಅಭಿವೃದ್ಧಿಗೆ ತೊಡಕಾಗಬೇಡಿ; ಕೆಸಿಆರ್​ ಕುಟುಕಿದ ಪ್ರಧಾನಿ ಮೋದಿ

    ರಾಹುಲ್​​ ಗಾಂಧಿ ಅನರ್ಹ; ಸಂವಿಧಾನ-ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ

    ಸಂಸತ್​ ಸ್ಥಾನದಿಂದ ಅನರ್ಹಗೊಂಡ ಬಳಿಕ ರಾಹುಲ್​ ಗಾಂಧಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ಮೊದಲ ಸಭೆ ಇದು. ಮೋದಿ ಉಪನಾಮ ಕುರಿತು ವ್ಯಂಗ್ಯವಾಡಿ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಕಾರಣ ಅವರನ್ನು ಸಂಸತ್​ ಸ್ಥಾನದಿಂದ ಅನರ್ಹ ಮಾಡಿರುವುದು ಸಂವಿಧಾನ-ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಡಿ.ಕೆ.ಶಿವಕುಮಾರ್​ ಕಿಡಿಕಾರಿದ್ದಾರೆ.

    ಏಳು ಲಕ್ಷ ಮತಗಳ ಅಂತರದಿಂದ ಜಯ ಗಳಿಸಿರುವ ರಾಹುಲ್​ ಗಾಂಧಿ ಅವರನ್ನು ಸಂಸತ್​ ಸ್ಥಾನದಿಂದ ಅನರ್ಹ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿರುವ ಅವಮಾನ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts