More

    ಮೊದಲು ಎಲ್ಲರಿಗೂ ಲಸಿಕೆ ಕೊಡಿ, ಆಮೇಲೆ ಮನ್ ಕೀ ಬಾತ್ ಮಾಡಬಹುದು: ರಾಹುಲ್ ಗಾಂಧಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರದಂದು ಮನ್​ ಕೀ ಬಾತ್​ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಆದರೆ ಅದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೊದಲು ಎಲ್ಲರಿಗೂ ಲಸಿಕೆ ಕೊಟ್ಟು ಆಮೇಲೆ ಮನ್​ ಕೀ ಬಾತ್ ಮಾಡಿ ಎಂದು ಟಾಂಟ್​ ಕೊಟ್ಟಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, “ಮೊದಲು ಈ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಕರೊನಾ ಲಸಿಕೆ ತಲುಪುವಂತೆ ಮಾಡಿ. ಆಮೇಲೆ ನಿಮ್ಮ ಮನಸ್ಸು ಬಯಸಿದರೆ ಮನ್​ ಕೀ ಬಾತ್ ನಡೆಸಿ” ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಅದರ ಜತೆ ಕರೊನಾ ಲಸಿಕೆ ಬಗೆಗಿನ ಸತ್ಯಗಳು ಎಂಬ ಚಾರ್ಟ್​ ಒಂದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    ಕೇಂದ್ರ ಸರ್ಕಾರದ ಪ್ರತಿ ನಿಲುವಿಗೂ ಪ್ರತಿಕ್ರಿಯೆಗಳನ್ನು ಕೊಡುತ್ತಲೇ ಬಂದಿರುವ ರಾಹುಲ್ ಗಾಂಧಿ ಅವರು, ಕರೊನಾ ನಿಯಂತ್ರಣದಲ್ಲಿ ಕೇಂದ್ರ ಎಡವಿದೆ ಎಂದು ಸಾಕಷ್ಟು ಬಾರಿ ಹೇಳಿದ್ದರು. ಟ್ವಿಟ್ಟರ್​ನಲ್ಲಿ ಆ್ಯಕ್ಟಿವ್ ಇರುವ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಸದಾ ಹೇಳಿಕೆ ನೀಡುತ್ತಲೇ ಇರುತ್ತಾರೆ.

    ತಮ್ಮ ರೇಡಿಯೋ ಕಾರ್ಯಕ್ರಮ ಮನ್​ ಕಿ ಬಾತ್​ನ 78ನೇ ಆವೃತ್ತಿಯಲ್ಲಿ ಇಂದು ಮಾತನಾಡಿದ ಮೋದಿ, “ನಿಮಗೆಲ್ಲಾ ಕೇಳಿಕೊಳ್ಳುತ್ತೇನೆ – ವಿಜ್ಞಾನವನ್ನು ನಂಬಿರಿ. ನಮ್ಮ ವಿಜ್ಞಾನಿಗಳನ್ನು ನಂಬಿರಿ. ಇಡೀ ದೇಶದಲ್ಲಿ 31 ಕೋಟಿಗೂ ಹೆಚ್ಚು ಜನರು ಲಸಿಕೆ ತೆಗೆದುಕೊಂಡಿದ್ದಾರೆ. ಲಸಿಕೆಗೆ ಸಂಬಂಧಿಸಿದ ನಕಾರಾತ್ಮಕ ವದಂತಿಗಳನ್ನು ನಾವು ಎಂದಿಗೂ ನಂಬಬಾರದು” ಎಂದು ಮನವಿ ಮಾಡಿದ್ದರು. (ಏಜೆನ್ಸೀಸ್)

    11 ವಯಸ್ಸಿಗೇ ಮಗುವಿಗೆ ಜನ್ಮವಿತ್ತ ಬಾಲಕಿ! ಇದು ಹೇಗಾಗಿದ್ದು ಎಂದು ತಲೆ ಕೆಡಿಸಿಕೊಂಡಿರುವ ಕುಟುಂಬ

    ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts