More

    ಸಾಕಪ್ಪಾ ಸಾಕು, ಇನ್ನು ಯಾವತ್ತೂ ಕಾಂಗ್ರೆಸ್ ಅಧ್ಯಕ್ಷ ಆಗುವುದಿಲ್ಲ ಎಂದ ರಾಹುಲ್ ಗಾಂಧಿ!

    ನವದೆಹಲಿ: ಚುನಾವಣೆಗಳಲ್ಲಿ ಸೋಲಿನ ಮೇಲೆ ಸೋಲು ಕಂಡ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದ ಬಗ್ಗೆಯೇ ಭ್ರಮನಿರಸನಗೊಂಡಿದ್ದ ರಾಹುಲ್ ಗಾಂಧಿ, ಈಗಲೂ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳಲು ಸುತರಾಂ ಒಪ್ಪುತ್ತಿಲ್ಲ.
    ಶುಕ್ರವಾರ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ತಾವು ಮತ್ತೊಮ್ಮೆ ಯಾವತ್ತೂ ಕಾಂಗ್ರೆಸ್ ಅಧ್ಯಕ್ಷರಾಗುವುದಿಲ್ಲ ಎಂದು ಹೇಳಿದ್ದಾರೆ.

    ‘‘ನನ್ನ ನಿಲುವು ಸ್ಪಷ್ಟವಿದೆ. ಈ ಹಿಂದೆ ನೀಡಿದ ರಾಜೀನಾಮೆ ಪತ್ರದಲ್ಲಿ ಹೇಳಿದಂತೆ ನಡೆದುಕೊಳ್ಳುತ್ತೇನೆ’’ ಎಂದು ಸ್ಪಷ್ಟಪಡಿಸಿದ್ದಾರೆ.

    2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಳಿಕ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ರಾಜೀನಾಮೆ ನೀಡಿದ್ದರು.

    ಇದನ್ನೂ ಓದಿ ಪತ್ರಕರ್ತರು, ವಿತರಕರು, ಏಜೆಂಟರಿಗೆ 1 ಕೋಟಿ ರೂ. ಕರೊನಾ ಪರಿಹಾರಕ್ಕಾಗಿ ಹೈಕೋರ್ಟ್‌ಗೆ ಪಿಐಎಲ್

    ಲಾಕ್‌ಡೌನ್ ಸಮಯದಲ್ಲಿ ದೇಶದ ಕೆಲ ಪ್ರಮುಖ ವ್ಯಕ್ತಿಗಳ ಜತೆ ಅವರು ವಿಡಿಯೋ ಕಾನ್ಫರೆನ್ಸ್‌ಗಳನ್ನು ನಡೆಸುತ್ತಿದ್ದಾರೆ. ಆರ್ಥಿಕ ತಜ್ಞ ರಘುರಾಂ ರಾಜನ್ ಮತ್ತು ಅಭಿಜಿತ್ ಬ್ಯಾನರ್ಜಿ ಜತೆ ಚರ್ಚೆ ನಡೆಸಿದ್ದಾರೆ.

    ಹೀಗೆ ಏಕಾಏಕಿ ಅವರು ಸಕ್ರಿಯರಾಗಿದ್ದು ಹಲವರ ಹುಬ್ಬೇರುವಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು.

    ಅದಕ್ಕೆ ಅವರೇ ಉತ್ತರ ನೀಡಿದ್ದಾರೆ. ‘‘ಜನರಿಗೆ ಮಾಹಿತಿ ನೀಡುವ ಸಲುವಾಗಿ ಚರ್ಚೆ ನಡೆಸಿದ್ದೇನೆ. ಇದರ ಹಿಂದೆ ಬೇರೆ ಉದ್ದೇಶವಿಲ್ಲ’’ ಎಂದು ರಾಹುಲ್ ಸ್ಪಷ್ಟನೆ ನೀಡಿದ್ದಾರೆ.

    ಮದ್ಯ ಮಾರಲು ಬಾರ್-ಕ್ಲಬ್‌ಗಳಿಗೂ ಗ್ರೀನ್ ಸಿಗ್ನಲ್; ಆದರೆ ಪಾರ್ಸೆಲ್ ಒಯ್ಯುವುದಕ್ಕೆ ಮಾತ್ರ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts