More

    ರಾಹುಲ್ ಗಾಂಧಿ ಜತೆಗಿನ ಸಂವಾದದಲ್ಲಿ ವಲಸೆ ಕಾರ್ಮಿಕರು ಬಿಚ್ಚಿಟ್ಟ ನೋವಿನ ಸಂಗತಿ ಏನು?

    ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಯ ಸುಖದೇವ್ ವಿಹಾರ್​​​ನಲ್ಲಿ ವಲಸೆ ಕಾರ್ಮಿಕರೊಂದಿಗೆ ಅವರು ನಡೆಸಿದ ಸಂವಾದದ ವಿಡಿಯೊವನ್ನು ಶನಿವಾರ ಹಂಚಿಕೊಂಡಿದ್ದಾರೆ.
    ಅಂದಾಜು 20 ಜನರ ಗುಂಪು ಹರಿಯಾಣದಲ್ಲಿನ ತಮ್ಮ ಕೆಲಸದ ಸ್ಥಳದಿಂದ ಉತ್ತರ ಪ್ರದೇಶದ ಝಾನ್ಸಿ ಬಳಿ ಇರುವ ತಮ್ಮ ಹಳ್ಳಿಗೆ ನೂರಾರು ಕಿಮೀ ನಡೆದುಕೊಂಡು ಹೋಗುತ್ತಿತ್ತು. ‘ಭಾರೀ ಸಂಕಷ್ಟ, ಹಿಂಸೆ ಮತ್ತು ಅನ್ಯಾಯವನ್ನು ಅನುಭವಿಸಿದ ನಮ್ಮ ವಲಸೆ ಸಹೋದರ ಸಹೋದರಿಯರೊಂದಿಗಿನ ಸಂಭಾಷಣೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
    “ಕೊರೊನಾವೈರಸ್ ಜನರಿಗೆ ನೋವು ತಂದಿದೆ, ಆದರೆ ಇದು ನಮ್ಮ ವಲಸೆ ಸಹೋದರ ಸಹೋದರಿಯರ ಮೇಲೆ ಗಂಭೀರ ಪರಿಣಾಮ ಬೀರಿದೆ. ಅವರು ತಮ್ಮ ಊರು ಸೇರಲು ಅನ್ನ ಆಹಾರವಿಲ್ಲದೆ ಸಾವಿರಾರು ಕಿಮೀ ಗಟ್ಟಲೆ ನಡೆಯುತ್ತಿದ್ದಾರೆ. ಮಾರ್ಗ ಮಧ್ಯೆ ಅವರನ್ನು ನಿಲ್ಲಿಸಿ, ಬೆದರಿಕೆ ಹಾಕಲಾಗಿದೆ, ಇಷ್ಟಾದರೂ ಅವರು ತಮ್ಮ ಮನೆ ಸೇರಲು ತವಕಿಸಿ ಮುನ್ನಡೆಯುತ್ತಲೇ ಇದ್ದಾರೆ. ಅವರು ಏನು ಯೋಚಿಸುತ್ತಿದ್ದಾರೆ, ಅವರು ಏನು ನಿರೀಕ್ಷಿಸುತ್ತಾರೆ ಮತ್ತು ಅವರು ಎಷ್ಟು ಹೆದರುತ್ತಾರೆ ಎಂಬುದನ್ನು ನಾನು ನಿಮಗೆ ತೋರಿಸುತ್ತೇನೆ.” ಎಂದು ರಾಹುಲ್ ಗಾಂಧಿ ವಿಡಿಯೋದಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಕಲೆಗೆ ಧರ್ಮದ ಹಂಗಿಲ್ಲ ಎಂದು ಸಾಬೀತುಪಡಿಸಿದ ಮುಸ್ಲಿಂ ಮಹಿಳೆ

    ವಿಡಿಯೋದಲ್ಲಿ ಝಾನ್ಸಿಯ ವಲಸೆ ಕಾರ್ಮಿಕ ಮಹೇಶ್ ಕುಮಾರ್ ಮಾತನಾಡಿದ್ದು, “ನಾವು ಈಗಾಗಲೇ ಅಂದಾಜು 150 ಕಿ.ಮೀ. ನಡೆದಿದ್ದೇವೆ. ನಾವು ಇನ್ನು ಮುಂದೆಯೂ ನಡೆಯಲು ಬದ್ಧರಾಗಿದ್ದೇವೆ” ಎಂದಿದ್ದಾರೆ. ಇನ್ನೊಬ್ಬ ವಲಸಿಗ ಮಹಿಳೆ ಮಾತನಾಡಿ, “ಶ್ರೀಮಂತ ಜನರು ತೊಂದರೆಯಲ್ಲಿಲ್ಲ, ನಿಜವಾದ ಸಮಸ್ಯೆಯನ್ನು ಎದುರಿಸುತ್ತಿರುವವರು ನಾವು, ಬಡವರು. ನಾವು ಮತ್ತು ನಮ್ಮ ಮಕ್ಕಳು ಸಹ ಕಳೆದ ಮೂರು ದಿನಗಳಿಂದ ಹಸಿದಿದ್ದೇವೆ.” ಎಂದಿದ್ದಾರೆ.
    ನಾವು ಕೆಲಸ ಮಾಡುವ ಪ್ರದೇಶದಲ್ಲಿ ನಮ್ಮ ಮನೆ ಬಾಡಿಗೆ ತಿಂಗಳಿಗೆ 2500 ರೂ.ಇತ್ತು. ನಮ್ಮ ಹತ್ರ ಒಂದು ಪೈಸೆಯೂ ಇಲ್ಲ. ಮುಂದೇನಾಗುತ್ತದೋ ಗೊತ್ತಿಲ್ಲ. ನಮ್ಮ ಮನೆ ಸೇರಲು ನಾವು ನಡೆಯುತ್ತಿದ್ದೇವೆ. ದಾರಿಯಲ್ಲಿ ಯಾರಾದರೂ ಏನಾದರೂ ಕೊಟ್ಟರೆ ತಿನ್ನುತ್ತೇವೆ. ನಾವು ನಮ್ಮ ಜೀವವನ್ನು ರಕ್ಷಿಸಿಕೊಳ್ಳಬೇಕಿದೆ ಎಂದಿದ್ದಾರೆ ವಲಸೆ ಕಾರ್ಮಿಕರು.

    ಇದನ್ನೂ ಓದಿ: ವೈದ್ಯರು ಮತ್ತು ದಾದಿಯರಿಗಿಲ್ಲ ಹೊಟೆಲ್ ಕ್ವಾರಂಟೈನ್…!

    ಕರೊನಾ ವೈರಸ್  ಕೇವಲ ರೋಗವನ್ನಷ್ಟೇ ಕೊಡುತ್ತಿಲ್ಲ ಜತೆಗೆ ಅಸಹನೀಯ ಹಸಿವನ್ನೂ ಕೊಡುತ್ತಿದೆ. ಸರ್ಕಾರ ಸದ್ಯ ನಮ್ಮನ್ನು ನಮ್ಮ ಊರಿಗೆ ತಲುಪಿಸಿ ಜೀವನೋಪಾಯಕ್ಕೊಂದು ಕೆಲಸ ಕೊಟ್ಟರೆ ಸಾಕು ಎಂದಿದ್ದಾರೆ.
    ರಾಹುಲ್ ಗಾಂಧಿ ಸಂವಾದದ ಕೊನೆಗೆ ಝಾನ್ಸಿಗೆ ಹೋಗಲು ವಲಸೆ ಕಾರ್ಮಿಕರ ಕೋರಿಕೆಯ ಮೇರೆಗೆ ಕಾರು ಮತ್ತು ಮಿನಿ ಬಸ್ ವ್ಯವಸ್ಥೆ ಮಾಡಿದರು.

    VIDEO ] ಮಾತೃಶಕ್ತಿಗೆ ಸೋತ ನಾಗರಹಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts