More

    ಜ್ಯೋತಿರಾದಿತ್ಯ ಸಿಂಧಿಯಾರನ್ನು ನೆನೆದು ಕಣ್ಣೀರಾದ್ರು ರಾಹುಲ್ ಗಾಂಧಿ…

    ನವದೆಹಲಿ: ರಾಹುಲ್ ಗಾಂಧಿ ಭೇಟಿಗೆ ಅಪಾಯಿಂಟ್​ಮೆಂಟೇ ಸಿಗುತ್ತಿಲ್ಲ. ಕಾಂಗ್ರೆಸ್ ಪಕ್ಷ ಮೊದಲಿನಂತಿಲ್ಲ ಎಂದು ಪಕ್ಷ ತ್ಯಜಿಸಿದ ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾರನ್ನು ನೆನೆದು ಕಾಂಗ್ರೆಸ್ ಕಣ್ಮಣಿ ರಾಹುಲ್ ಗಾಂಧಿ ಬುಧವಾರ ಭಾವುಕರಾದರು. ಟ್ವೀಟ್ ಮಾಡಿ ಫೋಟೋವನ್ನೂ ಹಂಚಿಕೊಂಡ್ರು.

    ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿ ಸೇರಿದ ನಂತರ ರಾಹುಲ್ ಗಾಂಧಿ ನೀಡಿದ ಮೊದಲ ಪ್ರತಿಕ್ರಿಯೆ ಇದು. ವಾಸ್ತವದಲ್ಲಿ ಸಿಂಧಿಯಾ ಅವರ ನಡೆಯ ಬಗ್ಗೆ ಸಾಕಷ್ಟು ಚರ್ಚೆಗಳು ರಾಜಕೀಯ ವಲಯದಲ್ಲಾಗಿವೆ. ಅವರ ನಡೆಯನ್ನು ಸಮರ್ಥಿಸಿಕೊಂಡು ತ್ರಿಪುರ ಮಾಣಿಕ್ಯ ರಾಜವಂಶಸ್ಥ, ಸಿಂಧಿಯಾ ಅವರ ಸೋದರ ಸಂಬಂಧಿ ಪ್ರದ್ಯೋತ್ ಮಾಣಿಕ್ಯ ದೇವವರ್ಮ ಕೂಡ ಪ್ರತಿಕ್ರಿಯಿಸಿದ್ದರು.

    ಪ್ರದ್ಯೋತ್ ಮಾಣಿಕ್ಯ ದೇವವರ್ಮ ಪ್ರತಿಕ್ರಿಯೆ ಹೀಗಿತ್ತು ‘ಸಿಂಧಿಯಾ ರಾಹುಲ್​ ಗಾಂಧಿ ಭೇಟಿಗಾಗಿ ತಿಂಗಳಾನುಗಟ್ಟಲೆ ಕಾದಿದ್ದರು..ಈಗಂತೂ ಕಾಂಗ್ರೆಸ್​ನಲ್ಲಿ ಯುವ ನಾಯಕರಿಗೆ ಅನಾಥ ಭಾವ ಕಾಡುತ್ತಿದೆ…’

    ರಾಹುಲ್ ಗಾಂಧಿ ಭೇಟಿಗೆ ತಿಂಗಳಾನುಗಟ್ಟಲೆ ಕಾಯುವ ಹಂತಕ್ಕೆ ಸಿಂಧಿಯಾ ತಲುಪಿದ್ದರು ಎಂಬ ಅಂಶ ಬೆಳಕಿಗೆ ಬಂದ ಬೆನ್ನಲ್ಲೇ ರಾಹುಲ್ ಗಾಂಧಿ ನೀಡಿರುವ ಭಾವುಕ ಹೇಳಿಕೆ ಅಚ್ಚರಿ ಮೂಡಿಸಿದೆ. ಆದರೆ, ಅವರ ಈ ಪ್ರತಿಕ್ರಿಯೆ ಸಿಂಧಿಯಾ ಅವರು ಬಿಜೆಪಿ ಸೇರಿದ ನಂತರ ವ್ಯಕ್ತವಾದುದು ಎಂಬುದು ಇನ್ನೂ ವಿಶೇಷ.

    ಖಾಸಗಿ ಟಿವಿಗೆ ನೀಡಿದ ಹೇಳಿಕೆಯಲ್ಲಿ ಅವರು, ನನ್ನ ಮನೆಗೆ ಯಾವುದೇ ಅಡೆತಡೆ ಇಲ್ಲದೆ ಯಾವುದೇ ಸಮಯದಲ್ಲೂ ನೇರವಾಗಿ ಪ್ರವೇಶಿಸಬಹುದಾಗಿದ್ದ ಏಕೈಕ ವ್ಯಕ್ತಿಯಾಗಿದ್ದ ಜ್ಯೋತಿರಾದಿತ್ಯ. ಕಾಲೇಜು ದಿನಗಳಲ್ಲಿ ನನ್ನ ಜತೆಗಿದ್ದ ಆತ ಎಂದು ಹೇಳಿ ಭಾವುಕರಾದುದು ಕಂಡುಬಂತು. (ಏಜೆನ್ಸೀಸ್)

    ಬಿಜೆಪಿ ಸೇರುತ್ತಿದ್ದಂತೆ ಪ್ರಧಾನಿ ಮೋದಿಯವರನ್ನು ಕೊಂಡಾಡಿದ ಸಿಂಧಿಯಾ; ಕಾಂಗ್ರೆಸ್​ನಲ್ಲಿ ಏನಾಗ್ತಿದೆ ಎಂಬ ವಾಸ್ತವ ಬಿಚ್ಚಿಟ್ಟರು…!

    ಸಿಂಧಿಯಾ ಪಕ್ಷ ಬಿಟ್ಟು ಹೋದ ಬೆನ್ನಲ್ಲೇ ಆರ್ಥಿಕತೆ ವಿಚಾರವಿಟ್ಟುಕೊಂಡು ಮೋದಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ..

    ಮಧ್ಯಪ್ರದೇಶ ಬಿಕ್ಕಟ್ಟಿಗೆ ಒಂದು ಟ್ವಿಸ್ಟ್ ಕಾದಿದೆ ನೋಡಿ ಎಂದ ಕಾಂಗ್ರೆಸ್ ನಾಯಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts