More

    ಸಂಸತ್ತಿನಲ್ಲಿ ನನಗೆ ಮಾತನಾಡಲು ಬಿಡಲಿಲ್ಲ: ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

    ಕೋಲಾರ: ಇತ್ತೀಚೆಗಷ್ಟೇ ರಾಹುಲ್ ಗಾಂಧಿ ವಿರುದ್ಧ ಎರಡು ವರ್ಷಗಳ ಹಿಂದಿನ ಮಾನನಷ್ಟ ಪ್ರಕರಣದಲ್ಲಿ ತೀರ್ಪು ಪ್ರಕಟಗೊಂಡಿತ್ತು. ಅದರಿಂದಾಗಿ ನ್ಯಾಯಾಲಯದಲ್ಲಿ ಅವರ ಸಂಸದ ಸ್ಥಾನವೂ ಹೋಗಿತ್ತು. ಅದಲ್ಲದೇ ಮತ್ತೇ ಕರ್ನಾಟಕದಿಂದಲೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ರಾಹುಲ್ ಗಾಂಧಿ ಎಂದಿನಂತೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು ಅದಾನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

    ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ “ಇವತ್ತು ರಾಜ್ಯದ ಜನತೆ ಮುಂದೆ ನೇರವಾಗಿ ಮಾತನಾಡಲು ಇಚ್ಚೆ ಪಡುವೆ. ಕೆಲವೇ ಕೆಲ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬರಲಿದೆ. ಮಹಿಳೆಯರಿಗೆ ರೈತರಿಗೆ ವಿಶೇಷ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುವುದು.

    ಹಿಮಾಚಲ್ ಮಧ್ಯಪ್ರದೇಶ ಛತ್ತಿಸ್ ಘಡ್ ದಲ್ಲಿ ಜನಸಾಮಾನ್ಯರಿಗೆ ಏನೂ ಮಾಡಬಹುದು ಎಂದು ಪ್ರಶ್ನೆ ಮಾಡಿದ್ರು. ಭರವಸೆ ಕೊಟ್ಟ ನಂತರ ತತ್ಕ್ಷಣ ಭರವಸೆಗಳನ್ನ ಈಡೇಡಿಸಬೇಕೆಂದು ಹೇಳಿದೆ.  ಅದೇ ರೀತಿ ರಾಜ್ಯದ ನಾಯಕರಿಗೂ ಸಹ ಹೇಳುತ್ತಿದ್ದೀನಿ. ರಾಜ್ಯದ ಜನತೆಗೆ ನಾಲ್ಕು ಭರವಸೆಗಳನ್ನ ಕೊಟ್ಟಿದ್ದೇವೆ.  ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಅನ್ನಭಾಗ್ಯ ಹತ್ತು ಕೆಜಿ ಅಕ್ಕಿ. ಭರವಸೆಗಳನ್ನ ನಾವು ಕೊಟ್ಟಿದ್ದೇವೆ ಅದು ಆರು ಒಂದು ವರ್ಷ ಆಗಬಾರದು. ಸರ್ಕಾರ ಬಂದ ತಕ್ಷಣ ಜಾರಿಗೆ ಬರಬೇಕೆಂದು ಹೇಳುತ್ತಿದ್ದೇನೆ.  ಪ್ರಧಾನ ಮಂತ್ರಿ ಅವರ ಹಣ ಜನಸಾಮಾನ್ಯರಿಗೆ ಸಲ್ಲಬೇಕು. ಅದಾನಿ ಅವರಿಗೆ ಸಾವಿರಾರು ಕೋಟಿ ಉಚಿತವಾಗಿ ಕೊಡುವಾಗ, ನಾವು ಈ ಕಾರ್ಯಕ್ರಮ ಗಳನ್ನ ಬಡವರಿಗೆ ಯುವಕರಿಗೆ ಮಹಿಳೆಯರಿಗೆ ನೀಡುತ್ತಿದ್ದೇವೆ. ಅದಾನಿಯವರಿಗೆ ಮನಃಪೂರಕವಾಗಿ ಸಹಾಯ ಮಾಡಿದ ಹಾಗೆ ಬಡವರಿಗೆ ನಾವು ಮಾಡ್ತೇವೆ.

    40% ಸರ್ಕಾರದ ಆರೋಪ

    ರಾಜ್ಯದಲ್ಲಿ ಬಿಜೆಪಿ ಏನೂ ಕೆಲಸ ಮಾಡಿಲ್ಲ. 40% ಕಮಿಷನ್ ಆಗಿರುವುದು ಅಷ್ಟೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬಡವರ ಯುವಕರ ಹಣವನ್ನ ಕಳ್ಳತನ ಮಾಡಿದ್ದಾರೆ. ಯಾವುದೇ ಕೆಲಸಕ್ಕೆ 40% ಲಂಚ ಇರುತ್ತೆ. ಇದು ನಾನು ಹೇಳ್ತಿರೋದಲ್ಲ, ಹೇಳ್ತಿರೋದು ಕಾಂಟ್ರಕ್ಟರ್ಸ್. ಈ ಕುರಿತು ಪ್ರಧಾನ ಮಂತ್ರಿ ಅವರಿಗೆ ತಿಳಿಸಿದ್ದಾರೆ. ಆದರೆ ಇಲ್ಲಿವರೆಗೂ ಪ್ರಧಾನ ಮಂತ್ರಿ ಅವರು ಉತ್ತರ ನೀಡಿಲ್ಲ. ಹಗರಣದ ಸರಮಾಲೆ ಇದೆ, ಟೀಚರ್ಸ್ ಪೊಲೀಸ್ ನೇಮಕಾತಿಯಲ್ಲಿ ಭ್ರಷ್ಟಾಚಾರ ಇದೆ.

    ಪ್ರಶ್ನೆ ಕೇಳುವ ಮುನ್ನವೇ ರಾಹುಲ್ ಗಾಂಧಿ ಯ ಮೈಕ್ ಆಫ್ ಮಾಡಿದ್ರು?

    ನಾನು ಈ ವಿಚಾರವನ್ನು ಪಾರ್ಲಿಮೆಂಟ್ಅಲ್ಲಿ ಮಂಡಿಸಿದಾಗ, ಪ್ರಶ್ನೆ ಕೇಳುವ ಮೊದಲೇ ಮೈಕ್ ಆಫ್ ಮಾಡಿದ್ರು. ನಾನು ಕೇಳಿದ್ದು, ನಿಮಗೆ ಅದಾನಿಗೆ ಯಾವ ಸಂಭಂದ ಇದೆ ಪ್ರಧಾನಿಯವರೆ ಎಂದಷ್ಟೆ. ನಾನು ಪಾರ್ಲಿಮೆಂಟ್ ಅಲ್ಲಿ ಒಂದು ಚಿತ್ರವನ್ನು ತೋರಿಸಿದೆ. ಅದರಲ್ಲಿ ಮೋದಿ ಅದಾನಿ ಒಂದು ಫ್ಲೈಟ್ ನಲ್ಲಿ ಕುಳಿತಿದ್ದು.

    ವಿಮಾನ ನಿಲ್ದಾಣಗಳನ್ನ ಕಾನೂನನ್ನು ಬದಲಾವಣೆ ಮಾಡಿ ಅದಾನಿ ಅವರಿಗೆ ನೀಡಿದ್ದಾರೆ ಎಂದು ಕೇಳಿದೆ. ಅದಾನಿ ಅವರಿಗೆ ಯಾವುದೇ ಅನುಭವ ಇಲ್ಲ ಅವರಿಗೆ ಯಾಕೆ ಕೊಡ್ತಿದ್ದೀರ ಎಂದು ಕೇಳಿದೆ.  ಪ್ರಧಾನಿ ಮಂತ್ರಿ ಅಧಿಕೃತವಾಗಿ ಆಸ್ಟ್ರೇಲಿಯಾ ಗೆ ಭೇಟಿ ಕೊಟ್ಟಾಗ ಜತೆಗೆ ಅದಾನಿ ಅವರು ಕುಳಿತಿದ್ದು ನೋಡಿದ್ದೇವೆ.

    ಎಲ್ಲಿ ಹೋದರೂ ಅವಕಾಶ ಅದಾನಿಗೆ ಎಂದ ರಾಹುಲ್ ಗಾಂಧಿ

    ಆ ಸಭೆ ನಡೆದ ನಂತರ ಸಾವಿರಾರು ಕೋಟಿ ರೂಪಾಯಿಗಳು ಸ್ಟೇಟ್ ಬ್ಯಾ.ಕ್ ಅವರು ನೀಡುತ್ತಾರೆ. ಇದು ಹೇಗೆ ಕೊಟ್ಟಿರಿ ಎಂದು ಕೇಳಿದೆ. ಬಾಂಗ್ಲಾ ದೇಶಕ್ಕೆ ಹೋದ ತಕ್ಷಣ ಕಾಂಟ್ರಾಕ್ಟ್ ಅದಾನಿಗೆ ಸಿಗುತ್ತೆ. ಇಸ್ರೇಲ್ ಗೆ ಹೋದರೂ ಅಲ್ಲಿ ಅದಾನಿಗೆ ಸಿಗುತ್ತೆ. ಅದಾನಿ ಅವರ ನಕಲಿ ಕಂಪನಿಗಳು ಇವರ ಬೇನಾಮಿ‌ ಹೆಸರಲಿನಲ್ಲಿ‌ಇವೆ ಎಂದು ಕೇಳಿದೆ. ಇಲ್ಲಿ ಇರುವ 20 ಸಾವಿರ ಕೋಟಿ ಯಾರದ್ದು ಎಂದು ಕೇಳಿದೆ.  ಇಡೀ ಇತಿಹಾಸದಲ್ಲಿ ಸರ್ಕಾರ ಪಾರ್ಲಿಮೆಂಟ್ ನಡೆಸಲು ಬಿಡಲಿಲ್ಲ” ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts