More

    ಸಸ್ಪೆನ್ಸ್​ ಥ್ರಿಲ್ಲರ್​ನಲ್ಲಿ ರಾಘಣ್ಣ, ಶ್ರುತಿ … ನೈಜ ಘಟನೆಯನ್ನಾಧರಿಸಿದ ’13’ ಪ್ರಾರಂಭ

    ಬೆಂಗಳೂರು: “ಗೆಲುವಿನ ಸರದಾರ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು ರಾಘವೇಂದ್ರ ರಾಜಕುಮಾರ್​ ಮತ್ತು ಶ್ರುತಿ. ಈ 26 ವರ್ಷಗಳಲ್ಲಿ ಇಬ್ಬರೂ ಜತೆಯಾಗಿ ನಟಿಸುವ ಅವಕಾಶ ಮತ್ತೆ ಬಂದಿರಲಿಲ್ಲ. ಈಗ “13′ ಎಂಬ ಚಿತ್ರದ ಮೂಲಕ ಇಬ್ಬರೂ ಮತ್ತೆ ಜತೆಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಮುಹೂರ್ತ ಸಹ ನಡೆದಿದೆ.

    ಇದನ್ನೂ ಓದಿ: ದ್ವಿಪಾತ್ರಗಳು ಶುರುವಾಗಿದ್ದೇ ಡಾ. ರಾಜ್ ಚಿತ್ರಗಳಿಂದ…

    “ಪಲ್ಲಕ್ಕಿ’, “ಓ ಗುಲಾಬಿಯೇ’, “ಅಮೃತವಾಹಿನಿ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ನರೇಂದ್ರ ಬಾಬು ಈ ಚಿತ್ರದ ನಿರ್ದೇಶಕರು. ನೈಜ ಘಟನೆಯೊಂದನ್ನು ಆಧರಿಸಿ ಈ ಚಿತ್ರ ಮಾಡುತ್ತಿದ್ದಾರೆ. ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಎನ್ನುವ ಅವರು, “ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ “13′ ಎಂಬ ಹೆಸರಿಟ್ಟಿದ್ದೇವೆ. ಪ್ರೇಕ್ಷಕರ ಹಾರ್ಟ್​ಬೀಟ್​ ಹೆಚ್ಚಾಗಿಸುವಂತಹ ಸಿನಿಮಾ ಇದಾಗಲಿದೆ’ ಎನ್ನುತ್ತಾರೆ.

    ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್​ ಮತ್ತು ಶ್ರುತಿ ಪ್ರೀತಿಸಿ ಮದುವೆಯಾದ ದಂಪತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ರಾಘಣ್ಣ ಗುಜರಿ ಅಂಗಡಿ ವ್ಯಾಪಾರಿ ಮೋಹನ್​ ಕುಮಾರ್​ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರೆ, ಟೀ ಅಂಗಡಿ ಇಟ್ಟುಕೊಂಡಿರುವ ಸಾಹಿರಾ ಬೇಗಂ ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಎರಡನೇ ಮದುವೆಗೆ ರೆಡಿಯಾದ ನಾಗಚೈತನ್ಯ! ಹುಡುಗಿ ಯಾರು? ಯಾವಾಗ ಮದುವೆ? ಇಲ್ಲಿದೆ ಮಾಹಿತಿ

    ಕೊಟ್ಟಿಗೆಹಾರ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರದ ಬಹುಭಾಗ ಚಿತ್ರೀಕರಣ ನಡೆಯಲಿದ್ದು, ಜೂನ್​ ವೇಳೆಗೆ ಚಿತ್ರವನ್ನು ಪೂರ್ಣಗೊಳಿಸಿ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ. ಶೋಗನ್​ ಬಾಬು ಸಂಗೀತ, ಅಜಯ್​ ಮಂಜು ನಾಯ್ಕ ಛಾಯಾಗ್ರಹಣವಿರುವ ಈ ಚಿತ್ರವನ್ನು ಕೆ. ಸಂಪತ್​ ಕುಮಾರ್​, ಮಂಜುನಾಥ ಗೌಡ ಹಾಗೂ ಹೆಚ್​. ಎಸ್​ ಮಂಜುನಾಥ್​ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

    ನಾಲ್ಕೇ ದಿನಕ್ಕೆ 500 ಕೋಟಿ ರೂ.ಕ್ಲಬ್​ ಸೇರಿದ ಕೆಜಿಎಫ್​​-2!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts