More

    ಇನ್ನೆರಡು ವಾರದ ಬಳಿಕ ಐಎಎಫ್​ಗೆ ರಫೇಲ್ ಜೆಟ್​ಗಳ ಸೇರ್ಪಡೆ

    ನವದೆಹಲಿ: ಪ್ರಾನ್ಸ್​ನಿಂದ ಆಗಮಿಸಿರುವ ಅತ್ಯಾಧುನಿಕ ಐದು ರಫೇಲ್ ಜೆಟ್​ಗಳು ಸೆ.10ಕ್ಕೆ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿವೆ. ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಚಾಲನೆ ನೀಡಲಿದ್ದಾರೆ.

    ಫ್ರಾನ್ಸ್ ರಕ್ಷಣಾ ಸಚಿವ ಫ್ಲೊರೆನ್ಸ್ ಪಾರ್ಲೆ ಕೂಡ ಭಾಗವಹಿಸುವ ಸಾಧ್ಯತೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಈ ಮೊದಲು ಕೆಲ ವರದಿಗಳು ತಿಳಿಸಿದ್ದವು. ಈ ರಫೇಲ್ ಜೆಟ್​ಗಳನ್ನು ಲಡಾಖ್ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ (ಎಲ್​ಎಸಿ) ಬಳಿ ನಿಯೋಜಿಸಲಾಗುತ್ತದೆ ಎಂದು ತಿಳಿದುಬಂದಿದೆ. ಕಳೆದ ಜುಲೈ 29ರಂದು ಫ್ರಾನ್ಸ್​ನಿಂದ ಈ ಜೆಟ್​ಗಳು ಭಾರತದ ಅಂಬಾಲಾ ವಾಯುನೆಲೆಗೆ ಬಂದಿವೆ.

    ಇದನ್ನೂ ಓದಿ: ಸಾಯುವುದಕ್ಕೆ ಮುನ್ನ ಸುಶಾಂತ್ ಗೂಗಲ್​ನಲ್ಲಿ ಏನು ಹುಡುಕುತ್ತಿದ್ದರು?

    59 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 36 ರಫೇಲ್ ಜೆಟ್​ಗಳನ್ನು ಭಾರತ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. 2021ರ ಅಂತ್ಯದ ವೇಳೆಗೆ ಎಲ್ಲ 36 ಯುದ್ಧ ವಿಮಾನಗಳೂ ಭಾರತಕ್ಕೆ ಹಸ್ತಾಂತರವಾಗಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. (ಏಜೆನ್ಸೀಸ್)

    ಫ್ಯೂಯೆಲ್ ಇಕಾನಮಿಯ ಸ್ಟೈಲಿಶ್​ ಕಿಯಾ ಸೋನೆಟ್​ ಬುಕ್ಕಿಂಗ್ ಶುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts