More

    ಇಡೀ ದೇಶದಲ್ಲಿ ಕೇವಲ ಮೂರು ಚಿತ್ರಮಂದಿರಗಳಲ್ಲಿ ರಾಧೇ ಬಿಡುಗಡೆ …

    ಮುಂಬೈ: ಸಲ್ಮಾನ್​ ಖಾನ್​ ಚಿತ್ರಗಳೆಂದರೆ ಬರೀ ಅಭಿಮಾನಿಗಳಿಗಷ್ಟೇ ಅಲ್ಲ, ಚಿತ್ರಮಂದಿರದವರಿಗೂ ದೊಡ್ಡ ಹಬ್ಬ ಎಂದರೆ ತಪ್ಪಿಲ್ಲ. ಏಕೆಂದರೆ, ಸಲ್ಮಾನ್​ ಅಭಿನಯದ ಚಿತ್ರಗಳು ಇಡೀ ದೇಶದಲ್ಲಿ 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದವು. ಮೊದಲ ದಿನದ ಕಲೆಕ್ಷನ್​ ನೂರು ಕೋಟಿ ದಾಟಿರುತ್ತಿತ್ತು. ಆದರೆ, ರಾಧೇ ವಿಚಾರದಲ್ಲಿ ಅವೆಲ್ಲವೂ ಸುಳ್ಳಾಗಿದೆ.

    ಇದನ್ನೂ ಓದಿ: ಜೀ಼ಕನ್ನಡದಲ್ಲಿ ವೀಕೆಂಡ್​ ಮನರಂಜನೆ: “ಕಥಾಸಂಗಮ” ಹಾಗೂ “ರಾಮಾರ್ಜುನ” ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್

    ರಾಧೇ ಚಿತ್ರವನ್ನು ಈದ್​ ಮಿಲಾದ್​ ಹಬ್ಬದ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಎಂದು ಆರು ತಿಂಗಳುಗಳ ಹಿಂದೆಯೇ ಸಲ್ಮಾನ್​ ಪ್ಲಾನ್​ ಮಾಡಿಕೊಂಡಿದ್ದರು. ಅದರಂತೆ, ಡಿಸೆಂಬರ್​ನಲ್ಲೇ ಈ ಚಿತ್ರವನ್ನು ಮೇ 13ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆದರೆ, ಕ್ರಮೇಣ ಬಿಡುಗಡೆಯ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಕರೊನಾ ಎರಡನೇ ಅಲೆ ಪ್ರಾರಂಭವಾಗಿ ಒಂದೊಂದೇ ರಾಜ್ಯದಲ್ಲಿ ಲಾಕ್​ಡೌನ್​ ಹೇರಲಾಯಿತು. ಇದೀಗ ಇಡೀ ದೇಶದಲ್ಲಿ ತ್ರಿಪುರಾದಲ್ಲಿ ಮಾತ್ರ ಲಾಕ್​ಡೌನ್​ ಇಲ್ಲದಿರುವುದರಿಂದ, ಅಲ್ಲಿನ ಮೂರು ಚಿತ್ರಮಂದಿರಗಳಲ್ಲಿ ಮಾತ್ರ ಚಿತ್ರ ಬಿಡುಗಡೆಯಾಗುತ್ತಿದೆ.

    ಹೌದು, ಇಡೀ ದೇಶದಲ್ಲಿ ಕೇವಲ ಮೂರು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಅಗರ್ತಾಲದ ಎಸ್​ಎಸ್​ಆರ್​ ರೂಪಸಿ ಮತ್ತು ಬಾಲಕ ಚಿತ್ರಮಂದಿರಗಳಲ್ಲದೆ, ಧರ್ಮನಗರದ ಎಸ್​ಎಸ್​ಆರ್​ ಧರ್ಮನಗರ್​ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾತನಾಡಿರುವ ಎಸ್​ಎಸ್​ಆರ್​ ಸಿನಿಮಾದ ಸಿಇಓ ಆಗಿರುವ ಸತದೀಪ್​ ಸಹಾ, ರಾಧೇ ಚಿತ್ರವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಿ, ಓಟಿಟಿಯಲ್ಲಿ ಬೇಡ ಎಂದು ಮೊದಲು ಮನವಿ ಮಾಡಿದವನೇ ನಾನು. ನನ್ನ ಮೂರು ಚಿತ್ರಮಂದಿರಗಳಲ್ಲೂ ಚಿತ್ರ ಬಿಡುಗಡೆ ಮಾಡುವುದಾಗಿ ಪ್ರಾಮಿಸ್​ ಮಾಡಿದ್ದೆ. ಅದರಂತೆ ನನ್ನ ಪ್ರಾಮಿಸ್​ ಉಳಿಸಿಕೊಂಡಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    ತ್ರಿಪುರಾ ರಾಜ್ಯದಲ್ಲಿ ಲಾಕ್​ಡೌನ್​ ಇಲ್ಲದಿದ್ದರೂ ನೈಟ್​ ಕರ್ಫ್ಯೂ ಇದೆ. ಹಾಗಾಗಿ, ಆರು ಗಂಟೆಯ ಹೊತ್ತಿಗೆ ಚಿತ್ರಮಂದಿರ ಬಂದ್​ ಮಾಡಬೇಕಿರುವುದರಿಂದ, ಮೂರು ಗಂಟೆಯ ಪ್ರದರ್ಶನವೇ ಕೊನೆಯಾಗಲಿದೆ. ಮೂರು ಚಿತ್ರಮಂದಿರಗಳಿಂದ ಮೂರು ಪ್ರದರ್ಶನ ಎಂದಿಟ್ಟುಕೊಂಡರೂ, ಕೇವಲ 9 ಪ್ರದರ್ಶನಗಳು ಈ ಚಿತ್ರ ಕಾಣಲಿದೆ.

    ಇದನ್ನೂ ಓದಿ: ತಮಿಳುನಾಡು ಸರ್ಕಾರಕ್ಕೆ 1 ಕೋಟಿ ರೂಪಾಯಿ ನೀಡಿದ ನಟ ಸೂರ್ಯ ಮತ್ತು ಸಹೋದರ ಕಾರ್ತಿ!

    ಬಾಕ್ಸ್​ಆಫೀಸ್​ ವಿಚಾರಕ್ಕೆ ಬಂದರೆ, ತಮ್ಮ ಚಿತ್ರಗಳಲ್ಲೇ ಅತ್ಯಂತ ಕಡಿಮೆ ಕಲೆಕ್ಷನ್​ ಮಾಡುವ ಚಿತ್ರ ಎಂದರೆ ಅದು “ರಾಧೇ’ ಎಂದು ಸಲ್ಮಾನ್​ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, 10ರಿಂದ 15 ಕೋಟಿ ಕಲೆಕ್ಷನ್​ ಮಾಡುವುದು ಸಂಶಯ ಎಂದು ಹೇಳಿದ್ದರು. ಅದರಂತೆ, ಚಿತ್ರವು ಸಲ್ಮಾನ್​ ಖಾನ್​ ಕೆರಿಯರ್​ನಲ್ಲೇ ಅತೀ ಕಡಿಮೆ ಗಳಿಗೆ ಮಾಡಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಕೊನೆಗೂ ಅಣ್ಣಾತ್ತೆ ಚಿತ್ರೀಕರಣ ಮುಗಿಸಿ ಚೆನ್ನೈಗೆ ವಾಪಸ್ಸಾದ ರಜನಿಕಾಂತ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts