More

    ಸಾಧಾರಣ ಉದ್ಯೋಗಿಯಾಗಿ ಸೇರಿ ಉದ್ಯಮಿಯಾದ ರಾಧಾವೆಂಬು..!

    ಚೆನ್ನೈ: ರಾಧಾವೆಂಬು ವಿಜಯಪಥಾಕೆ ನೋಡಿದ ನಂತರ “ಪ್ರತಿಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ” ಎಂಬ ನಾಣ್ಣುಡಿ ಜತೆಗೆ ಮತ್ತೊಂದು ಮಾತು ಸೇರಿಸಬಹುದೇನೋ. ಅದು “ಪ್ರತಿ ಉದ್ಯಮದ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ” ಎಂದು. ಸಾಧಾರಣ ಉದ್ಯೋಗಿಯಾಗಿ ಸಾಫ್ಟ್‌ವೇರ್ ಡೆವಲಪ್​ಮೆಂಟ್​ ಕಂಪೆನಿ ಚೆನ್ನೈನ “ಜೋಹೋ ಕಾರ್ಪೋರೇಷನ್​”ಗೆ ಸೇರಿದ ರಾಧಾವೆಂಬು ಸ್ವಂತ ಶ್ರಮದಿಂದ ಮೇಲೆ ಬಂದ ಮಹಿಳೆ, ಪ್ರಸ್ತುತ “ಜೊಹೊಕಾರ್ಪೊರೇಶನ್‌”ನ ಸಹ ಸಂಸ್ಥಾಪಕಿಯಾಗಿದ್ದಾರೆ.

    ತಾಜಾ ಸುದ್ದಿಯೇನೆಂದರೆ “ಉದ್ಯಮಿ ಮತ್ತು ಸೇವಾ ಉದ್ಯಮ”ದಲ್ಲಿ ಎರಡನೇ ಶ್ರೀಮಂತ ಮಹಿಳೆ ಎಂದು ಇತ್ತೀಚೆಗೆ ಬಿಡುಗಡೆಯಾದ 2023ರ ಹುರುನ್ ಗ್ಲೋಬಲ್ ಇಂಡಿಯಾ ರಿಚ್ ಲಿಸ್ಟ್​ ನಲ್ಲಿ ಅವರು 2ನೇಸ್ಥಾನ ಪಡೆದಿದ್ದಾರೆ. ಅವರ ಸಂಪತ್ತು ಕಳೆದ ವರ್ಷದಲ್ಲಿ ಹೆಚ್ಚಾಗಿ ಬೆಳೆದಿದೆ ಮತ್ತು ಅವರು ಪಟ್ಟಿಯಲ್ಲಿ ಬ್ಯೂಟಿ ಮತ್ತು ಲೈಫ್​ ಸ್ಟೈಲ್​ ರಟೈಲ್​ ಕಂಪೆನಿ ನೈಕಾ ಫೌಂಡರ್​ ಪಾಲ್ಗುಣಿ ನಾಯರ್​ ಅವರನ್ನು ಹಿಂದಿಕ್ಕಿದ್ದಾರೆ.

    ಇದನ್ನೂ ಓದಿ: ದೇವಭೂಮಿಯಲ್ಲಿ ಅಭಿವೃದ್ಧಿ ಮಂತ್ರ, ಆದಿಕೈಲಾಸದಲ್ಲಿ ಧ್ಯಾನ: 4,200 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ

    ಗೆಲುವು ಸ್ವಂತ ಮಾಡಿಕೊಂಡಿರುವ ರಾಧಾವೆಂಬು ಕುರಿತು ನಾನೇಕೆ ಕೇಳದೆ ಹೋದೆ ಎಂದು ಆಶ್ಚರ್ಯವಾಗುತ್ತದೆ ಎಂದು ಸಾಮಾಜಿಕ ಲಾಲತಾಣದ ಫ್ಲಾಟ್​ ಫಾಮ್​ನಲ್ಲಿ ಜೋಹೋ ಕನ್ಸಲ್ಟೆಂಟ್ ಇಂಗ್ಲೆಂಡ್​ನ ಆಡಿಸನ್​ ಬರೆದುಕೊಂಡಿದ್ದಾರೆ. ಈತನಿಗಷ್ಟೇ ಅಲ್ಲ, ತುಂಬಾ ಜನಕ್ಕೆ ರಾಧಾವೆಂಬು ಗೆಲುವಿನ ಕಥೆ ತಿಳಿದಿಲ್ಲ.

    ಚೆನ್ನೈನ ನ್ಯಾಷನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ನಂತರ, ಅವರು ಕೈಗಾರಿಕಾ ನಿರ್ವಹಣೆಯಲ್ಲಿ ಪದವಿ ಪಡೆದು ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಸೇರಿಕೊಂಡರು. ರಾಧಾ ವೆಂಬು ಸಹೋದರ ಶ್ರೀಧರ್ ವೆಂಬು 1996 ರಲ್ಲಿ ಇಂಜಿನಿಯರ್‌ಗಳ ತಂಡದೊಂದಿಗೆ ಅದ್ವೇನ್​ ನೆಟ್​ ಸ್ಥಾಪಿಸಿದರು. ಬಳಿಕ ಅದು ಜೊಹೊ ಕಾರ್ಪೊರೇಷನ್ ನಲ್ಲಿ ವಿಲೀನ ಮಾಡಲಾಯಿತು. ಆಗ ರಾಧಾ ವೆಂಬು ಪ್ರಾಜೆಕ್ಟ್​ ಮ್ಯಾನೇಜರ್​ ಆಗಿ ಕಂಪೆನಿಗೆ ಸೇರಿಕೊಂಡರು.

    ಪ್ರತಿಭಾವಂತೆಯಾದ ರಾಧವೆಂಬು ಮೊದಲು ಮಾಡಿದ ಕೆಲಸವೇನೆಂದರೆ ಕಂಪೆನಿ ಕುರಿತು ಅಧ್ಯಯನ ನಡೆಸಿ. ಅಭಿವೃದ್ಧಿಗೆ ಪ್ರಣಾಳಿಕೆ ತಯಾರಿಸಿಕೊಳ್ಳುತ್ತಾರೆ. ಉನ್ನತ ಹುದ್ದೆಗೆ ಹೋಗುವ ಅವಕಾಶವಿದ್ದರೂ ಅವರು ಅದೇ ಹುದ್ದೆಯಲ್ಲಿ ಮುಂದುವರಿದು ತಮ್ಮ ಕಂಪೆನಿಯನ್ನು ಮುಂದೆ ತರಲು ಶಕ್ತಿ ಮೀರಿ ಶ್ರಮಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಅವರು “ಇನ್​ ವಿಜಿಬುಲ್​ ಫೋರ್ಸ್” ಎಂದೇ ಪ್ರಸಿದ್ಧಿಪಡೆದುಕೊಂಡಿದ್ದಾರೆ. ಪ್ರಸ್ತುತ ಜೋಹೋ ಕಂಪೆನಿಯು 16ಸಾವಿರ ಉದ್ಯೋಗಿಗಳಿಗೆ ಉದ್ಯೋಗ ನೀಡಿದೆ.

    ಫೋರ್ಬ್ಸ್‌ನ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಏಪ್ರಿಲ್ 2023 ರ ಹೊತ್ತಿಗೆ ರಾಧಾವೆಂಬು ಅವರ ನಿವ್ವಳ ಸಂಪತ್ತಿನ ಮೌಲ್ಯವು ಸರಿಸುಮಾರು $2.2 ಶತಕೋಟಿ ಎಂದು ಅಂದಾಜಿಸಲಾಗಿದೆ, ಇದರಿಂದಾಗಿ ಅವರು ಭಾರತದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.

    ಇಸ್ರೇಲ್-ಹಮಾಸ್ ಯುದ್ಧ: ಕೆಲವು ವಾರಗಳ ಹಿಂದೆಯೇ ಇಸ್ರೇಲ್ ಮೇಲೆ ದಾಳಿ ನಡೆಸಲು ಯೋಜಿಸಿದ್ದ ಹಮಾಸ್, ಫೋಟೋಗಳು ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts