More

    ಇಸ್ರೇಲ್-ಹಮಾಸ್ ಯುದ್ಧ: ಕೆಲವು ವಾರಗಳ ಹಿಂದೆಯೇ ಇಸ್ರೇಲ್ ಮೇಲೆ ದಾಳಿ ನಡೆಸಲು ಯೋಜಿಸಿದ್ದ ಹಮಾಸ್, ಫೋಟೋಗಳು ವೈರಲ್

    ಇಸ್ರೇಲ್​​​​: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ನಿರಂತರವಾಗಿ ತೀವ್ರಗೊಳ್ಳುತ್ತಿದೆ. ಹಮಾಸ್ ದಾಳಿಯಲ್ಲಿ 1200 ಕ್ಕೂ ಹೆಚ್ಚು ಇಸ್ರೇಲ್​​​ ಜನರು ಸಾವನ್ನಪ್ಪಿದ್ದಾರೆ. ಆದರೆ, ಪ್ರತೀಕಾರವಾಗಿ ಇಸ್ರೇಲ್ ಪ್ಯಾಲೆಸ್ತೀನ್ ಮೇಲೆ ದಾಳಿ ಮಾಡಿ 1500ಕ್ಕೂ ಹೆಚ್ಚು ಹಮಾಸ್ ಭಯೋತ್ಪಾದಕರನ್ನು ಕೊಂದಿತು.

    ಒಂದು ತಿಂಗಳ ಕಾಲ ತರಬೇತಿ ಪಡೆದ ಹಮಾಸ್ ಉಗ್ರರು
    ಹಮಾಸ್ ಇಸ್ರೇಲ್ ಮೇಲೆ ಹಠಾತ್ ದಾಳಿ ಮಾಡಿಲ್ಲ. ಅವರು ಈ ತಂತ್ರದ ಭಾಗವಾಗಿ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ತರಬೇತಿಯನ್ನು ಪಡೆದರು. ಉಗ್ರರು ಫುಲ್ ಡ್ರೆಸ್​​​​ನಲ್ಲಿ ರಿಹರ್ಸಲ್ ಮಾಡಿದ್ದು, ಅದರ ವಿಡಿಯೋ ಇದೀಗ ಹೊರಬಿದ್ದಿದೆ.

    ಇಸ್ರೇಲ್-ಹಮಾಸ್ ಯುದ್ಧ: ಕೆಲವು ವಾರಗಳ ಹಿಂದೆಯೇ ಇಸ್ರೇಲ್ ಮೇಲೆ ದಾಳಿ ನಡೆಸಲು ಯೋಜಿಸಿದ್ದ ಹಮಾಸ್, ಫೋಟೋಗಳು ವೈರಲ್

    ಇಲ್ಲಿವೆ ಫೋಟೋಗಳು
    ಸೆಪ್ಟೆಂಬರ್ 12 ರಂದು ಹಮಾಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಎರಡು ನಿಮಿಷಗಳ ಪ್ರಚಾರದ ವಿಡಿಯೋದಲ್ಲಿ ಉಗ್ರರು ಗಡಿಯಲ್ಲಿ ಯುದ್ಧ ಮತ್ತು ಸ್ಫೋಟಕಗಳನ್ನು ಸ್ಫೋಟಿಸುವ ಅಭ್ಯಾಸವನ್ನು ತೋರಿಸುತ್ತಾರೆ. ಜನಪ್ರಿಯ ವೆಬ್‌ಸೈಟ್​​​​ವೊಂದು ಇದಕ್ಕೆ ಸಂಬಂಧಿಸಿದ ವಿಡಿಯೋ ಬಿಡುಗಡೆ ಮಾಡಿದೆ, ಇದರಲ್ಲಿ ಹಮಾಸ್ ಉಗ್ರರು ಪಿಕಪ್ ಟ್ರಕ್‌ಗಳ ಮೇಲೆ ದಾಳಿ ಮಾಡಿ ನಂತರ ಕಟ್ಟಡದಿಂದ ಕಟ್ಟಡಕ್ಕೆ ಚಲಿಸುತ್ತಿರುವುದನ್ನು ತೋರಿಸಲಾಗಿದೆ.

    ಇಸ್ರೇಲ್-ಹಮಾಸ್ ಯುದ್ಧ: ಕೆಲವು ವಾರಗಳ ಹಿಂದೆಯೇ ಇಸ್ರೇಲ್ ಮೇಲೆ ದಾಳಿ ನಡೆಸಲು ಯೋಜಿಸಿದ್ದ ಹಮಾಸ್, ಫೋಟೋಗಳು ವೈರಲ್

    ಇಸ್ಲಾಮಿಕ್ ಉಗ್ರಗಾಮಿ ಗುಂಪಿನ ಲೈವ್-ಫೈರ್ ಎಕ್ಸರ್​​​​​ಸೈಜ್ “ಸ್ಟ್ರಾಂಗ್ ಪಿಲ್ಲರ್” ಎಂದು ಕರೆಯಲ್ಪಡುವ ಕಾರ್ಯಾಚರಣೆಯಲ್ಲಿ ಉಗ್ರರು ದೇಹದ ರಕ್ಷಾಕವಚ ಮತ್ತು ಸಂಪೂರ್ಣ ಉಡುಗೆಯನ್ನು ಧರಿಸಿ ಕಾರ್ಯಾಚರಣೆಯನ್ನು ನಡೆಸುವುದನ್ನು ತೋರಿಸಿದೆ. ಭಯೋತ್ಪಾದಕರು ಕಾಂಕ್ರೀಟ್ ಗೋಡೆಗಳು ಮತ್ತು ಟವರ್‌ಗಳನ್ನು ಬಾಂಬ್‌ಗಳಿಂದ ನಾಶಪಡಿಸುತ್ತಿರುವುದು ಕಂಡುಬರುತ್ತದೆ.

    ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳ ಭರ್ಜರಿ ಬೇಟೆ; 23 ಬಾಕ್ಸ್ ನಲ್ಲಿದ್ದ ಕೋಟ್ಯಂತರ ರೂ.ಹಣ ಸೀಜ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts