More

    ರಚಿತಾ ರಾಮ್ ಈಗ ಕಸ್ತೂರಿ?: ದಿನೇಶ್ ಬಾಬು ಚಿತ್ರದ ಟೈಟಲ್ ಚೇಂಜ್

    ಬೆಂಗಳೂರು: ಹಿರಿಯ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರವು ಗುರುವಾರವಷ್ಟೇ ಮುಹೂರ್ತ ಮುಗಿಸಿಕೊಂಡಿದೆ. ಅಷ್ಟೇ ಅಲ್ಲ, ಚಿತ್ರದ ಹೆಸರು ಘೊಷಣೆಯಾದ ಕೆಲವೇ ಗಂಟೆಗಳಲ್ಲಿ ಬದಲಾಗಿ, ಚಿತ್ರಕ್ಕೆ ಇನ್ನೊಂದು ಹೆಸರು ಇಡಲಾಗಿದೆ.

    ಹೌದು, ರಚಿತಾ ರಾಮ್ ಅಭಿನಯದ ಈ ಚಿತ್ರಕ್ಕೆ ‘ಕಸ್ತೂರಿ ನಿವಾಸ’ ಎಂಬ ಹೆಸರನ್ನು ಈ ಮುನ್ನ ಇಡಲಾಗಿತ್ತು. ಆದರೆ, ಡಾ. ರಾಜಕುಮಾರ್ ಅವರ ಜನಪ್ರಿಯ ಚಿತ್ರಗಳ ಹೆಸರುಗಳನ್ನು ಮರು ಬಳಕೆ ಮಾಡಬಾರದು ಮತ್ತು ಆ ಹೆಸರಿನ ಮೂಲ ಚಿತ್ರಕ್ಕೆ ಅಪಚಾರ ಎಸೆಗಬಾರದು ಎಂಬ ಮಾತುಗಳು ಕೇಳಿಬಂದಿದೆ. ಇದಕ್ಕೆ ಸ್ಪಂದಿಸಿರುವ ಚಿತ್ರತಂಡದವರು, ‘ಕಸ್ತೂರಿ ನಿವಾಸ’ ಹೆಸರನ್ನು ಬದಲಾಯಿಸುವುದಕ್ಕೆ ನಿರ್ಧರಿಸಿದ್ದು, ಇದೀಗ ‘ಕಸ್ತೂರಿ’ ಎಂಬ ಹೆಸರನ್ನು ಇಡುವ ಸಾಧ್ಯತೆ ಇದೆ.

    ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ದಿನೇಶ್ ಬಾಬು, ‘ಮುಹೂರ್ತವಾದ ನಂತರ ಸತತವಾಗಿ ಫೋನ್ ಬರುತ್ತಲೇ ಇತ್ತು. ‘ಕಸ್ತೂರಿ ನಿವಾಸ’ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಕ್ಲಾಸಿಕ್ ಎಂದು ಗುರುತಿಸಿಕೊಂಡಿರುವುದರಿಂದ, ಅದಕ್ಕೆ ಅಪಚಾರ ಮಾಡಬೇಡಿ ಎಂದು ಕೆಲವರು ಮನವಿ ಮಾಡಿದ್ದಾರೆ. ನನಗೂ ಮರುಬಳಕೆ ಇಷ್ಟವಿರಲಿಲ್ಲ. ಇದೀಗ ಇಡೀ ತಂಡ ಶೀರ್ಷಿಕೆ ಬದಲಾವಣೆಗೆ ನಿರ್ಧರಿಸಿದ್ದೇವೆ. ಚಿತ್ರಕ್ಕೆ ಬಹುಶಃ ‘ಕಸ್ತೂರಿ’ ಎಂಬ ಹೆಸರಿಡುವ ಸಾಧ್ಯತೆ ಇದೆ’ ಎನ್ನುತ್ತಾರೆ.

    ಅಂದಹಾಗೆ ‘ಕಸ್ತೂರಿ’ ಚಿತ್ರದಲ್ಲಿ ರಚಿತಾ ರಾಮ್ ಜತೆಗೆ ಶ್ರುತಿ ಪ್ರಕಾಶ್, ಸ್ಕಂದ ಮುಂತಾದವರು ಅಭಿನಯಿಸುತ್ತಿದ್ದು, ಸೆಪ್ಟೆಂಬರ್ ಕೊನೆಯ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರಕ್ಕೆ ಪಿ.ಕೆ.ಎಚ್. ಛಾಯಾಗ್ರಹಣ ಮಾಡಲಿದ್ದಾರೆ.

    ಕಾಶ್ಮೀರದಲ್ಲಿ ನಾಲ್ವರು ಉಗ್ರರ ಹತ್ಯೆ, ಒಬ್ಬನ ಶರಣಾಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts