More

    ಲ್ಯಾಂಬೋರ್ಗಿನಿ ಹಾಡು ನಂ.1: ಹೊಸ ವರ್ಷಕ್ಕೆ 10 ರೂ.ಗೆ ‘ಲಕ ಲಕ ಲೋಕ’ ತೋರಿಸಿದ ಚಂದನ್, ರಚ್ಚು!

    ಬೆಂಗಳೂರು: ಹೊಸ ವರ್ಷ ಬಂತು ಅಂದರೆ ಹೊಸದೊಂದು ಹಾಡು ಎಲ್ಲರೂ ಚಂದನ್ ಶೆಟ್ಟಿಯಿಂದ ನಿರೀಕ್ಷೆ ಮಾಡುತ್ತಾರೆ. ಹಾಗಾಗಿ, ಈ ವರ್ಷ ಕೂಡ ಚಂದನ್ ಶೆಟ್ಟಿ ಅವರ ಹಾಡಿನ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಕೆಂಪು ಲಕ ಲಕ ಲ್ಯಾಂಬೋರ್ಗಿನಿತುಂಬಾನೆ ಖುಷಿ ಕೊಟ್ಟಿದೆ ಎಂದೇ ಹೇಳಬೇಕು. ಅಂದಹಾಗೆ, ಚೆಂದನ್ ಶೆಟ್ಟಿ ಕಂಪೋಸ್ ಮಾಡಿ ಹಾಡಿರುವ ಈ ಹಾಡಿನಲ್ಲಿ ಅತಿ ದೊಡ್ಡ ಹೈಲೈಟ್ ಅಂದರೆ ಅದು ನಟಿ ರಚಿತಾ ರಾಮ್ ಚೆಂದನ್ ಅವರ ಜೊತೆ ಹೆಜ್ಜೆಹಾಕಿರುವುದು. ಹೌದು, ಈಗಾಗಲೇ ಲವ್ ಯು ರಚ್ಚು‘, ‘ಏಕ್ ಲವ್ ಯಾಸಿನಿಮಾಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ ಡಿಂಪಲ್ ಕ್ವೀನ್. ‘ಲವ್ ಯು ರಚ್ಚುಡಿ.31ಕ್ಕೆ ಬಿಡುಗಡೆಯಾಗುತ್ತಿದ್ದು, ‘ಏಕ್ ಲವ್ ಯಾಚಿತ್ರ ಜನವೆರಿ 21ಕ್ಕೆ ತೆರೆಕಾಣಲಿದೆ

    ಲ್ಯಾಂಬೋರ್ಗಿನಿ ಹಾಡು ನಂ.1: ಹೊಸ ವರ್ಷಕ್ಕೆ 10 ರೂ.ಗೆ 'ಲಕ ಲಕ ಲೋಕ' ತೋರಿಸಿದ ಚಂದನ್, ರಚ್ಚು!

    ಇದೀಗ, ಹೊಸ ವರ್ಷದ ಹಾಡಿನಲ್ಲಿ ಹಾಟ್ ಹಾಟ್ ಉಡುಪುಗಳು ಧರಿಸಿ ಚೆಂದನ್ ಜತೆ ಹೆಜ್ಜೆ ಹಾಕಿ ರಚಿತಾ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ. ಅದರಲ್ಲೂ, ರಚ್ಚು ಅಭಿಮಾನಿಗಳಿಗೆ ಈ ಹಾಡು ಕಿಕ್ ಮೇಲೆ ಕಿಕ್ ನೀಡುತ್ತಿದೆ. ಟಕೀಲ, ಬ್ಯಾಡ್​ಬಾಯ್, ತ್ರಿಪೇಗ್ ಎಂದು ಈ ಹಾಡು, ಹೊಸ ವರ್ಷಕ್ಕೆ ಹುಚ್ಚೆದ್ದು ಕುಣಿಯಬೇಕು ಎಂಬ ಯುವಕಯುವತಿಯರ ಮನಸ್ಸು ಗೆದ್ದಿದ್ದು, ಯೂಟ್ಯೂಬ್​ನಲ್ಲಿ ಬಿಡುಗಡೆಯಾದ 18 ಗಂಟೆಗಳಲ್ಲಿ 2 ಮಿಲಿಯನ್​ಗೂ ಹೆಚ್ಚು ವೀಕ್ಷಣೆಗಳನ್ನು ಗಿಟ್ಟಿಸಿಕೊಂಡು, ಟ್ರೆಂಡಿಂಗ್​ನಲ್ಲಿದೆ. ಸದ್ಯ, ಮ್ಯೂಸಿಕ್ ವಿಭಾಗದಲ್ಲಿ ಈ ಲಕ ಲಕ ಲ್ಯಾಂಬೋರ್ಗಿನಿಹಾಡು ನಂಬರ್ 1 ಸ್ಥಾನದಲ್ಲಿದೆ. ಕಳೆದ 4 ವರ್ಷಗಳಿಂದ ಚಂದನ್ ಶೆಟ್ಟಿ ಹೊಸ ವರ್ಷಕ್ಕೆ ಅಂತ ನಾಲ್ಕು ಹಾಡುಗಳು ಬಿಡುಗಡೆ ಮಾಡಿದ್ದು, ಆ ನಾಲ್ಕು ಹಾಡುಗಳು ಸೂಪರ್ ಹಿಟ್ ಆಗಿವೆ. ಇನ್ನು, ಲಕ ಲಕ ಲ್ಯಾಂಬೋರ್ಗಿನಿ” ಹಾಡಿನ ಭಾಗ-2 ಸಹ ಬರಲಿದೆಯಂತೆ. ಆ ಹಾಡಿನಲ್ಲಿ ನಿಜವಾದ ಲ್ಯಾಂಬೋರ್ಗಿನಿ ಕಾರು ಬಳಸಿ ವಿದೇಶದಲ್ಲಿ ಶೂಟ್ ಮಾಡಲಾಗುತ್ತೆ ಎಂದು ಹೇಳಲಾಗುತ್ತಿದೆ.  

    ಸಮಂತಾ ಬೆನ್ನಿಗೆ ನಿಂತ ಮೆಗಾ ಸ್ಟಾರ್ ಕುಟುಂಬ! ರಾಮ್, ಅರ್ಜುನ್ ಹೇಳಿದ್ದೇನು…?

    ತೆಲುಗು ಸಿನಿರಂಗದವರ ರಕ್ತ ಕುದಿಯುವ ಹೇಳಿಕೆ ಕೊಟ್ಟ ನಟಿ ರೋಜಾ! ಜಗನ್​ಗೆ ಸಚಿವೆ ಬೆಂಬಲ…

    ಹಾಸನದಲ್ಲಿ ‘ಬಡವ ರಾಸ್ಕಲ್’ ಮತ್ತು ‘ರೈಡರ್’ ಜೋರು! ಡಾಲಿ, ನಿಖಿಲ್ ನೋಡಲು ಅಭಿಮಾನಿಗಳ ಸಾಗರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts