More

    ನಾಯಿ ಹುಚ್ಚು ತಡೆ ಲಸಿಕಾ ಶಿಬಿರ

    ಶನಿವಾರಸಂತೆ: ರೇಬಿಸ್ ಭಯಾನಕ ಕಾಯಿಲೆಯಾಗಿದ್ದು, ಜನ ಜಾಗೃತಿ ಮತ್ತು ಸಾಕು ಪ್ರಾಣಿಗಳಿಗೆ ರೇಬಿಸ್ ನಿರೋಧಕ ಲಸಿಕಾ ಶಿಬಿರಗಳ ಮೂಲಕ ನಿಯಂತ್ರಿಸಬಹುದು ಎಂದು ಸೋಮವಾರಪೇಟೆ ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್.ವಿ.ಬದಾಮಿ ಅಭಿಪ್ರಾಯ ಪಟ್ಟರು.

    ಪಟ್ಟಣದಲ್ಲಿ ರೋಟರಿ ಕ್ಲಬ್, ಪಶುಪಾಲನಾ ಇಲಾಖೆ ಮತ್ತು ಹಂಡ್ಲಿ ಗ್ರಾಪಂ ವತಿಯಿಂದ ಗುಡುಗಳಲೆ ಜಾತ್ರೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಾಕು ನಾಯಿ ಮತ್ತು ಬೆಕ್ಕುಗಳಿಗೆ 7ನೇ ವರ್ಷದ ರೇಬಿಸ್ ನಿಯಂತ್ರಣ ಉಚಿತ ಲಸಿಕಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

    ರೇಬಿಸ್ ವೈರಸ್ ಕಾಡು ಪ್ರಾಣಿಯಿಂದ ಸಾಕು ಪ್ರಾಣಿಗಳ ಮೂಲಕ ಮನುಷ್ಯನಿಗೂ ಹರಡುವ ಭಯಾನಕ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಒಂದಾಗಿದ್ದು, ಇದರ ಬಗ್ಗೆ ಸಮರ್ಪಕ ಅರಿವು ಇಲ್ಲದ ಕಾರಣ ಕಾಯಿಲೆಗೆ ತುತ್ತಾಗಿ ಜನರು ಸಾವನ್ನಪ್ಪುತ್ತಿದ್ದಾರೆ. ಪ್ರಪಂಚದಲ್ಲಿ ಏಷ್ಯ ಮತ್ತು ಆಫ್ರಿಕಾ ಖಂಡದ ದೇಶಗಳಲ್ಲಿ ರೇಬಿಸ್ ಕಾಯಿಲೆ ಹೆಚ್ಚಾಗಿದ್ದು, ಭಾರತದಲ್ಲೇ ಶೇ.36ರಷ್ಟು ಜನರು ರೇಬಿಸ್ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೇಬಿಸ್ ಲಸಿಕಾ ಶಿಬಿರಗಳ ಆಯೋಜನೆ ಮೂಲಕ ಇದನ್ನು ತಡೆಗಟ್ಟಬಹುದು ಎಂದರು.

    ಮನೆಯಲ್ಲಿ ಸಾಕು ಪ್ರಾಣಿ ವಿಶೇಷವಾಗಿ ನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ಹಾಕಿಸಬೇಕು. ಮನೆಯಲ್ಲಿ ಸಾಕಿದ ನಾಯಿ ಮನೆಯವರಿಗೆ ಹಾಗೂ ಇತರರಿಗೆ ಕಚ್ಚುವ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡದೆ ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ರೇಬಿಸ್ ನಿಯಂತ್ರಣ ಲಸಿಕಾ ಶಿಬಿರ ಆಯೋಜಿಸುತ್ತಿರುವುದು ಶ್ಲಾಘನಿಯ ಕಾರ್ಯಕ್ರಮ ಎಂದರು.

    ರೋಟರಿ ಸಂಸ್ಥೆ ಜಿಲ್ಲಾ ರಾಜ್ಯಪಾಲ ಎಚ್.ಆರ್.ಕೇಶವ್ ಶಿಬಿರ ಉದ್ಘಾಟಿಸಿ ಮಾತನಾಡಿ, ರೇಬಿಸ್ ಕಾಯಿಲೆ ನಾಯಿಗಳಿಂದ ಹರಡುವುದರಿಂದ ಮನೆಯ ಮಾಲೀಕರು ರೇಬಿಸ್ ಕಾಯಿಲೆ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಇದೆ ಎಂದರು.

    ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಎ.ಎಚ್.ಚಂದ್ರಕಾಂತ್ ಅಧ್ಯಕ್ಷತೆ ವಹಿಸಿದ್ದರು. ಶನಿವಾರಸಂತೆ ಪಶುವೈದ್ಯಾಧಿಕಾರಿ ಡಾ.ಬಿ.ಎಂ.ಸತೀಶ್‌ಕುಮಾರ್, ರೋಟರಿ ಜಿಲ್ಲಾ ಉಪ ರಾಜ್ಯಪಾಲ ಲಿಖಿತ್, ರೋಟರಿ ಪ್ರಮುಖರರಾದ ಎಚ್.ಎಂ.ದಿವಾಕರ್, ಕಾರ್ಯದರ್ಶಿ ಸೋಮಶೇಖರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts