More

    ನಿತ್ಯ ಬಾಗಿಲಿಗೆ ಜೋತು ಬಿದ್ದು ಸಂಚಾರ

    ರಬಕವಿ/ಬನಹಟ್ಟಿ: ರಬಕವಿ ಬನಹಟ್ಟಿ ಮಾರ್ಗವಾಗಿ ತೇರದಾಳ ಹಾಗೂ ಮಹಾಲಿಂಗಪುರ ಕಡೆ ಸಂಚರಿಸುವ ಕೆಎಸ್‌ಆರ್‌ಟಿಸಿಯ ಕೆಲವು ಅಂತಾರಾಜ್ಯ ಬಸ್‌ಗಳಲ್ಲಿ ಪ್ರಯಾಣಿಸಲು ನಿರ್ವಾಹಕರು ಅನುಮತಿ ನೀಡುತ್ತಿಲ್ಲ ಎಂದು ಬಸ್ ಪಾಸ್ ಹೊಂದಿದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

    ಜಮಖಂಡಿ ಡಿಪೋದ ಸಿಟಿ ಬಸ್‌ಗಳ ಸಂಚಾರ ಕಡಿಮೆ ಇರುವುದರಿಂದ ಈ ಸಮಸ್ಯೆ ಎದುರಾಗಿದೆ. ಬಸ್‌ಗಳು ಕಡಿಮೆ ಇರುವುದರಿಂದ ಶಾಲೆ-ಕಾಲೇಜುಗಳಿಗೆ ಹೋಗುವ, ವಾಪಸ್ ಬರುವಾಗ ನಿತ್ಯ ಜೋತು ಬಿದ್ದು ಸಂಚರಿಸುವಂತಾಗಿದೆ. ಕೆಲವು ಬೇರೆ ವಲಯದ ಬಸ್‌ಗಳ ನಿರ್ವಾಹಕರು ಪಾಸ್ ಪಡೆದ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಮತಿ ಕೊಡುತ್ತಿಲ್ಲ. ಕೇವಲ ನಿಮ್ಮನ್ನೇ ಕರೆದುಕೊಂಡು ಹೋದರೆ ನಮಗೆ ಹಣ ಸಂಗ್ರಹ ಆಗುವುದಿಲ್ಲ ಎನ್ನುತ್ತಾರೆಂದು ಈ ಮಾರ್ಗದಲ್ಲಿ ಸಂಚರಿಸುವ ವಿದ್ಯಾರ್ಥಿ ಬಸನಗೌಡ ದೊಡ್ಡಮನಿ ದೂರಿದ್ದಾರೆ.

    ಅಂತಾರಾಜ್ಯ ಮಾರ್ಗದ ಸಂಚಾರವಿರುವ ಬಸ್‌ಗಳ ನಿರ್ವಾಹಕರು ಪಾಸ್ ಹೊಂದಿದ ವಿದ್ಯಾರ್ಥಿಗಳ ಪ್ರಯಾಣಕ್ಕೆ ನಿರಾಕರಿಸಿಬಾರದು. ಹೀಗೆ ಮುಂದುವರಿದರೆ ಬಸ್ ಸಂಚಾರ ತಡೆದು ಪ್ರತಿಭಟನೆ ಮಾಡಬೇಕಾಗುತ್ತದೆ.
    ಧರೇಶ ಕುಂಬಾರ, ಎಬಿವಿಪಿ ಅವಳಿ ನಗರ ಘಟಕದ ಕಾರ್ಯದರ್ಶಿ

    ಈ ಮಾರ್ಗವಾಗಿ ಸಂಚರಿಸುವ ಯಾವುದೇ ವಲಯದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪಾಸ್ ಹೊಂದಿದ ವಿದ್ಯಾರ್ಥಿಗಳು ಪ್ರಯಾಣಿಸಬಹುದು. ಪರವಾನಗಿ ಇಲ್ಲವೆಂದು ನಾವು ಎಲ್ಲಿಯೂ ಹೇಳಿಲ್ಲ. ನಿರ್ವಾಹಕರು ಸಮಸ್ಯೆ ಮಾಡಿದರೆ ತಕ್ಷಣ ನಿಲ್ದಾಣದ ನಿಯಂತ್ರಕರನ್ನು ಸಂಪರ್ಕಿಸಿ. ಅಥವಾ ನಮ್ಮ ಗಮನಕ್ಕೆ ತಂದರೆ ಖಂಡಿತ ಸಮಸ್ಯೆಗೆ ಸ್ಪಂದಿಸುತ್ತೇವೆ.
    ಎ.ಆರ್. ತೇಲಿ, ಸಹಾಯಕ ಸಂಚಾರ ಅಧೀಕ್ಷಕ, ಜಮಖಂಡಿ ಡಿಪೋ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts