More

    ಹಿಪ್ಪರಗಿ ಬ್ಯಾರೇಜ್‌ನ 11ಗೇಟ್ ಬಂದ್

    ರಬಕವಿ/ಬನಹಟ್ಟಿ: ಮಹಾರಾಷ್ಟ್ರದಿಂದ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನ್ನೆಲೆ ಹಿಪ್ಪರಗಿ ಬ್ಯಾರೇಜ್‌ನ 22 ಗೇಟ್‌ಗಳ ಪೈಕಿ 11 ಗೇಟ್‌ಗಳನ್ನು ಮುಚ್ಚಿದ್ದು, ಇನ್ನುಳಿದ 11 ಗೇಟ್‌ಗಳಿಂದ ನೀರನ್ನು ಹೊರಕ್ಕೆ ಹರಿ ಬಿಡಲಾಗುತ್ತಿದೆ. ಸೋಮವಾರ 522.05 ಮೀ. ಎತ್ತರವರೆಗೆ ನೀರಿನ ಮಟ್ಟವಿತ್ತು. 39 ಸಾವಿರ ಕ್ಯೂಸೆಕ್ ಒಳಹರಿವು, 18 ಸಾವಿರ ಕ್ಯೂಸೆಕ್ ಹೊರ ಹರಿವು ಇತ್ತು ಎಂದು ಬ್ಯಾರೇಜ್ ಮೂಲಗಳು ತಿಳಿಸಿವೆ.

    ಬ್ಯಾರೇಜ್ ಗರಿಷ್ಠ ನೀರಿನ ಸಂಗ್ರಹ ಮಟ್ಟ 524.7 ರಷ್ಟಿದೆ. ಸದ್ಯ 2.54 ಟಿಎಂಸಿ ನೀರಿನ ಸಂಗ್ರಹವಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತಷ್ಟು ಗೇಟ್‌ಗಳನ್ನು ಬಂದ್ ಮಾಡಿ ನೀರು ಸಂಗ್ರಹ ಮಾಡಲಾಗುವುದು. ಸರ್ಕಾರದ ಆದೇಶ ಮತ್ತು ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಈ ಬಾರಿ ಪ್ರವಾಹ ನಿಯಂತ್ರಿಸಲು ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಹಸೀಲ್ದಾರ್ ಪ್ರಶಾಂತ ಚನಗೊಂಡ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts