More

    ಕಾಲೇಜು ಆರಂಭ ವಿದ್ಯಾರ್ಥಿಗಳ ಸಂಭ್ರಮ

    ರಬಕವಿ/ಬನಹಟ್ಟಿ: ಕೋವಿಡ್-19ದಿಂದಾಗಿ ಹಲವು ತಿಂಗಳು ಶಾಲೆ-ಕಾಲೇಜುಗಳು ಬಂದ್ ಆಗಿದ್ದವು. ಸರ್ಕಾರದ ಮಾರ್ಗಸೂಚಿಯಂತೆ ಜ.1 ರಂದು ರಬಕವಿ-ಬನಹಟ್ಟಿ ನಗರದಲ್ಲಿ ಕಾಲೇಜುಗಳು ಆರಂಭವಾಗಿದ್ದು ವಿದ್ಯಾರ್ಥಿಗಳು ಶುಕ್ರವಾರ ಸಂಭ್ರಮದಿಂದ ಆಗಮಿಸಿದರು. ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕಾೃನಿಂಗ್ ಮಾಡಲಾಯಿತು.

    ಗುರುವಾರ ಬೆಳಗಿನಿಂದಲೇ ಎಲ್ಲ ಕಾಲೇಜು ಹಾಗೂ ಪ್ರೌಢ ಶಾಲೆಗಳಲ್ಲಿ ಕೊಠಡಿಗಳ ಸ್ವಚ್ಛತೆ ಹಾಗೂ ಸ್ಯಾನಿಟೈಸರ್ ಮಾಡಿಸಿ ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು.

    ಬನಹಟ್ಟಿಯ ಎಸ್‌ಎರ್‌ಎ ಕಾಲೇಜು ಪ್ರಾಚಾರ್ಯ ಬಿ.ಆರ್. ಗೊಡ್ಡಾಳೆ ಮಾತನಾಡಿ, ಸರ್ಕಾರದ ನಿಯಮಾವಳಿಯಂತೆ ಸಂಸ್ಥೆಯ ಆಡಳಿತ ಮಂಡಳಿ ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳನ್ನು ಪಾಲಿಸಿದೆ. ಆರಂಭದ ದಿನ ಶುಕ್ರವಾರ ಅರ್ಧದಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಹೇಳಿದರು.

    ಕೋವಿಡ್-19ದಿಂದಾಗಿ ಹಲವು ದಿನಗಳಿಂದ ನಾವು ಕಾಲೇಜಿಗೆ ಬಂದಿರಲಿಲ್ಲ, ಬೋರ್ಡ್ ಮೇಲೆ ಕಲಿಸುವ ಪಾಠಕ್ಕೂ ಆನ್‌ಲೈನ್ ಪಾಠಕ್ಕೂ ಬಹಳ ವ್ಯತ್ಯಾಸವಿದೆ. ಅದಕ್ಕಾಗಿ ಕಾಲೇಜು ಪ್ರಾರಂಭಿಸಿದ ಮೊದಲ ದಿನವೇ ನಾವೂ ಅತೀವ ಸಂತಸದಿಂದ ಬಂದಿದ್ದೇವೆ.
    ಪ್ರಿಯಾಂಕಾ ಶ್ರೀಶೈಲ ಚಿಚಕಂಡಿ, ಎಸ್‌ಟಿಸಿ ಕಾಲೇಜು ಬಿಕಾಂ ವಿದ್ಯಾರ್ಥಿನಿ, ಬನಹಟ್ಟಿ

    ಕೆಲವೇ ತಿಂಗಳಲ್ಲಿ ಪಿಯು ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿವೆ. ಸರ್ಕಾರದ ನಿಯಮದಂತೆ ಪಠ್ಯಕ್ರಮ ಮುಗಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿ ಮಾಡುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ.
    ಕೆ.ಎಚ್. ಸಿನ್ನೂರ, ವಿಜ್ಞಾನ ಶಿಕ್ಷಕ, ಎಸ್‌ಆರ್‌ಎ ಕಾಲೇಜು ಬನಹಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts