More

    ಸಾಧನೆಗೆ ಕನಸು, ಪರಿಶ್ರಮ ಅಗತ್ಯ

    ರಬಕವಿ/ಬನಹಟ್ಟಿ: ಶ್ರಮವಿದ್ದಲ್ಲಿ ಸಾಧನೆ ಸಾಧ್ಯ, ಸೋಲನ್ನು ಸೋಲಿಸುವವರೆಗೂ ಛಲ ಬಿಡಬಾರದೆಂದು ಕೊಣ್ಣೂರ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಬಸವರಾಜ ಕೊಣ್ಣೂರ ಹೇಳಿದರು.

    ಬನಹಟ್ಟಿ ನಗರದ ಭದ್ರನ್ನವರ ಸಮುದಾಯ ಭವನದಲ್ಲಿ ಗೆಳೆಯರ ಬಳಗದಿಂದ ಏರೋನ್ಯಾಟಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಅಶ್ವಿನಿ ರಾಠಿ ಅವರಿಗೆ ಸೋಮವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಅಶ್ವಿನಿ ರಾಠಿ ಮಾತನಾಡಿ, ಕಲಿಕೆಯಲ್ಲಿ ಹೊಸತನವೆಂಬುದು ಸದಾ ಇರುತ್ತದೆ. ಯಾವುದೇ ನಿರ್ಣಯಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಧನಾತ್ಮಕವಾಗಿ ನಿರ್ಧರಿಸಿದ್ದಲ್ಲಿ ಸಾಧನೆ ನಿಶ್ಚಿತ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಸಮಯಾನುಸಾರ ಬಳಕೆಯಿಂದ ಎಲ್ಲರೂ ಉತ್ತುಂಗಕ್ಕೇರಲು ಸಾಧ್ಯವೆಂದು ಹೇಳಿದರು.

    ಪ್ರೊ.ಕೆ.ಎಚ್. ಸಿನ್ನೂರ ಮಾತನಾಡಿ, ವಿದ್ಯಾರ್ಥಿ ಜೀವನವು ಬದುಕನ್ನು ನಿರ್ಮಿಸುವ ಘಟ್ಟ. ಅಂದುಕೊಳ್ಳುವ ಬದಲು ಹೊಂದಿಕೊಳ್ಳುವ ಜೀವನವನ್ನು ವಿದ್ಯಾರ್ಥಿ ಹಾಗೂ ಪಾಲಕರು ಅಳವಡಿಸಿಕೊಂಡಲ್ಲಿ ಅವರವರ ಸಾಧನೆಗೆ ಸ್ಫೂರ್ತಿ ಸೆಲೆಯಾಗಲು ಸಾಧ್ಯ ಎಂದರು.

    ಉದ್ಯಮಿ ಸುರೇಶ ಚಿಂಡಕ ಅಧ್ಯಕ್ಷತೆ ವಹಿಸಿ, ವಿಜ್ಞಾನಿಯಾಗಲು ಹೆಚ್ಚಿನ ವ್ಯಾಸಂಗಕ್ಕೆಂದು ಅಶ್ವಿನಿಯವರನ್ನು ್ರಾನ್ಸ್ ದೇಶ ಆಹ್ವಾನಿಸಿರುವುದು ಹೆಮ್ಮೆ ತರುವಂಥದ್ದು ಎಂದರು.

    ಅತಿಥಿಗಳಾಗಿ ಬಿ.ನಾಗರಾಜ, ಬೌರವ್ವ ಬಾಗಲಕೋಟ, ಮಹೇಶ್ವರಿ ಸಮಾಜದ ಅಧ್ಯಕ್ಷೆ ಲಲಿತಾ ಕಾಬರಾ ಆಗಮಿಸಿದ್ದರು. ಗೋಪಾಲ ಭಟ್ಟಡ, ವಿಶ್ವಜ ಕಾಡದೇವರ, ಕಿರಣ ಆಳಗಿ, ಡಾ.ಎಸ್.ಎಸ್. ಹೂಲಿ, ಜಯವಂತ ಕಾಡದೇವರ, ಮಲ್ಲಿಕಾರ್ಜುನ ಹುಲಗಬಾಳಿ, ಸಿದ್ದರಾಜ ಪೂಜಾರಿ, ಓಂಪ್ರಕಾಶ ಕಾಬರಾ, ಸಿದ್ರಾಮಪ್ಪ ಸವದತ್ತಿ, ದುಂಡಪ್ಪ ಮಾಚಕನೂರ, ಶ್ಯಾಮ ಲಡ್ಡಾ, ಬಸವರಾಜ ಭದ್ರನ್ನವರ, ದ್ವಾರಕಾ ಭಟ್ಟಡ, ಮಲ್ಲಿಕಾರ್ಜುನ ಬಾಣಕಾರ, ಯಮುನಾ ರಾಠಿ, ಬದ್ರಿನಾರಾಯಣ ಭಟ್ಟಡ ಸೇರಿದಂತೆ ಅನೇಕರಿದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts